ಟಾಟಾ ಮೋಟರ್ಸ್‌ ನಷ್ಟ ₹ 26,961 ಕೋಟಿ

7

ಟಾಟಾ ಮೋಟರ್ಸ್‌ ನಷ್ಟ ₹ 26,961 ಕೋಟಿ

Published:
Updated:

ನವದೆಹಲಿ: ಡಿಸೆಂಬರ್‌ಗೆ ಕೊನೆಗೊಂಡ 3ನೆ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್‌ನ ನಿವ್ವಳ ನಷ್ಟವು ₹ 26,961 ಕೋಟಿಗಳಷ್ಟಾಗಿದೆ.

ವಾಹನ ತಯಾರಿಕಾ ಸಂಸ್ಥೆಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 1,214 ಕೋಟಿ ನಿವ್ವಳ ಲಾಭ ಮಾಡಿತ್ತು. ಒಟ್ಟಾರೆ ವರಮಾನವು ಶೇ 4.36ರಷ್ಟು ಹೆಚ್ಚಾಗಿ ₹ 77,582 ಕೋಟಿಗೆ ತಲುಪಿದೆ. ಬ್ರಿಟನ್ನಿನ ಅಂಗ ಸಂಸ್ಥೆಯಾಗಿರುವ ಜಾಗ್ವಾರ್‌ ಲ್ಯಾಂಡ್‌ ರೋವರ್‌ನ (ಜೆಎಲ್‌ಆರ್) ಸಂಪತ್ತಿನ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿರುವುದೇ ನಿವ್ವಳ ನಷ್ಟವು ಗಮನಾರ್ಹವಾಗಿ ಹೆಚ್ಚಲು ಕಾರಣವಾಗಿದೆ. ಜೆಎಲ್‌ಆರ್‌ನ ವರಮಾನವು ಶೇ 1ರಷ್ಟು ಕಡಿಮೆಯಾಗಿ ₹ 55,200 ಕೋಟಿಗಳಷ್ಟಾಗಿದೆ ಎಂದು ಟಾಟಾ ಮೋಟರ್ಸ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !