ಟಿಸಿಎಸ್‌ ಲಾಭ ₹ 8,131 ಕೋಟಿ

ಶುಕ್ರವಾರ, ಜೂಲೈ 19, 2019
26 °C

ಟಿಸಿಎಸ್‌ ಲಾಭ ₹ 8,131 ಕೋಟಿ

Published:
Updated:
Prajavani

ಮುಂಬೈ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್) ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 8,131 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 7,340 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 10.8ರಷ್ಟು ಹೆಚ್ಚಾಗಿದೆ.

ವರಮಾನ ಶೇ 11.4ರಷ್ಟು ಹೆಚ್ಚಾಗಿದ್ದು, ₹ 34,261 ಕೋಟಿಗಳಿಂದ ₹ 38,172 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

‘ಉತ್ತಮ ಪ್ರಗತಿಯೊಂದಿಗೆ ಹೊಸ ಹಣಕಾಸು ವರ್ಷದ  ಆರಂಭವಾಗಿದೆ’ ಎಂದು ಕಂಪನಿ ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ.

ಹೊಸದಾಗಿ 12,356 ಮಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಇದು 5 ವರ್ಷಗಳಲ್ಲಿಯೇ ಅತಿ ಹೆಚ್ಚಿನದ್ದಾಗಿದೆ. ಒಟ್ಟಾರೆ ಸಿಬ್ಬಂದಿ ಸಂಖ್ಯೆ 4,36,641ಕ್ಕೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !