ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಹೆಚ್ಚಳವು ಅಡಿಕೆ ದರದ ಮೇಲೆ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಈಗ ತಂಬಾಕು ಉತ್ಪನ್ನಗಳಿಗೆ ಸೆಸ್ ಮತ್ತು ಇತರ ತೆರಿಗೆ ಸೇರಿ ಶೇ 40ರವರೆಗೆ ಸುಂಕ ಆಗುತ್ತಿತ್ತು. ಈಗ ಅಡಿಕೆ ದರವೂ ಹೆಚ್ಚೇ ಇರುವ ಕಾರಣ ರೈತರ ಮೇಲೆ ತೀರಾ ಪರಿಣಾಮ ಉಂಟಾಗುವ ಸಾಧ್ಯತೆ ಕಡಿಮೆ. ಆದರೆ, ಈಗಿನ ಲಭ್ಯ ಮಾಹಿತಿ ಪ್ರಕಾರ ತೆರಿಗೆಯೇ ಶೇ 40ಷ್ಟು ಆಗುವ ಸಾಧ್ಯತೆಯಿದೆ. ತೆರಿಗೆ ಶೇ 40ರಷ್ಟು, ಸೆಸ್ ಸೇರಿ ಶೇ 52ಕ್ಕಿಂತ ಹೆಚ್ಚಾದರೆ ದರದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸ ಆಗಬಹುದು. ಈ ಕುರಿತು ಸರಿಯಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.