ಬೆಂಗಳೂರು: ಫಿನ್ಟೆಕ್ ನವೋದ್ಯಮ ತೊಹಾಂಡ್ಸ್ ಪ್ರೈವೆಟ್ ಲಿಮಿಟೆಡ್, ಕೃತಕ ಬುದ್ಧಿಮತ್ತೆ (ಎ.ಐ) ಆಧರಿತ ಸ್ಮಾರ್ಟ್ ಕ್ಯಾಲ್ಕುಲೇಟರ್ ವಿ5 ಸಿಲ್ವರ್ ಅನ್ನು ಬಿಡುಗಡೆ ಮಾಡಿದೆ.

ಮುಂದಿನ ಒಂದು ವರ್ಷದ ಅವಧಿಯಲ್ಲಿ ದೇಶದ 10 ಲಕ್ಷ ಕಿರಾಣಿ ಅಂಗಡಿಗಳನ್ನು ಡಿಜಿಟಲೀಕರಣ ಮಾಡುವ ಗುರಿ ಹೊಂದಲಾಗಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯವಾಗುವಂತೆ ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕಿರಾಣಿ ಅಂಗಡಿಗಳು ಈ ಕ್ಯಾಲ್ಕುಲೇಟರ್ ನೆರವಿನಿಂದ ಹಣಕಾಸು ನಿರ್ವಹಣೆ, ಪಾವತಿ, ಬಿಲ್ಲಿಂಗ್ ಸೇರಿ ಇತರೆ ವಹಿವಾಟಿಗೆ ಬಳಸಬಹುದಾಗಿದೆ. ಇದು ದೇಶದಾದ್ಯಂತ ಸಣ್ಣ ಉದ್ಯಮಗಳನ್ನು ಡಿಜಿಟಲ್ ಆಗಿ ಸಬಲೀಕರಣಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ವೈಶಿಷ್ಟ್ಯ ಏನು?

ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯವಾಗುವಂತೆ ಈ ಕ್ಯಾಲ್ಕುಲೇಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಾರಾಟ/ ವೆಚ್ಚವನ್ನು ಟ್ರ್ಯಾಕ್ ಮಾಡಲಿದೆ. ಪಾವತಿ ಮತ್ತು ದಾಸ್ತಾನಿನ ಮಾಹಿತಿಯನ್ನೂ ನೀಡಲಿದೆ. ಬಾರ್ಕೋಡ್, ಸ್ಕ್ಯಾನರ್ ಮತ್ತು ಪ್ರಿಂಟರ್ಗಳೊಂದಿಗೆ ಸಂಯೋಜನೆಗೊಂಡಿರುವ ಇದು ರಿಮೋಟ್ ಆಕ್ಸಸ್ ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಅಲ್ಲದೆ, ವ್ಯಾಪಾರಿಗಳು ಎಲ್ಲೆ ಇದ್ದರೂ ದಾಖಲೆಗಳನ್ನು ವೀಕ್ಷಿಸಬಹುದಾಗಿದೆ. ಇದು ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದೆ.

‘ಸ್ಮಾರ್ಟ್ ಕ್ಯಾಲ್ಕುಲೇಟರ್ ವಿ5 ಸಿಲ್ವರ್ ವ್ಯಾಪಾರಿಗಳ ಸಮಯ ಉಳಿಸಲು, ನಷ್ಟ ಕಡಿಮೆ ಮಾಡಲು ಮತ್ತು ತಮ್ಮ ವ್ಯವಹಾರದ ಮೇಲೆ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಡುತ್ತದೆ’ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪ್ರವೀಣ್ ಮಿಶ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.