ಮಂಗಳವಾರ, ಆಗಸ್ಟ್ 16, 2022
29 °C

EPFO | ಪಿಂಚಣಿ ಖಾತೆದಾರರ ಮಾಹಿತಿ ಸೋರಿಕೆ: ಎಚ್ಚರಿಕೆ ನೀಡಿದ ಭದ್ರತಾ ಸಂಶೋಧಕ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

DH file iStock image

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿ (ಇಪಿಎಫ್‌ಒ) ಖಾತೆ ಹೊಂದಿರುವ 28 ಕೋಟಿ ಖಾತೆಗಳ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಉಕ್ರೇನ್ ಮೂಲದ ಭದ್ರತಾ ಸಂಶೋಧಕ ಮತ್ತು ಪತ್ರಕರ್ತರೊಬ್ಬರು ಹೇಳಿದ್ದಾರೆ.

ಪಿಂಚಣಿ ಖಾತೆದಾರರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ ಮತ್ತು ನಾಮಿನಿ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಉಕ್ರೇನ್‌ನ ಬಾಬ್ ಡಿಯಾಂಕೊ ಹೇಳಿದ್ದಾರೆ.

SecurityDiscovery.comನ ಪತ್ರಕರ್ತ ಮತ್ತು ಸೈಬರ್ ಬೆದರಿಕೆ–ಗುಪ್ತಚರ ನಿರ್ದೇಶಕರಾಗಿರುವ ಅವರು, ಯುಎಎನ್‌ ಹೊಂದಿರುವ ಎರಡು ಪ್ರತ್ಯೇಕ ಐಪಿ ಅಡ್ರೆಸ್‌ಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ.

ಇಪಿಎಫ್‌ಒ ಪಿಂಚಣಿದಾರರ ಮಾಹಿತಿ ಸೋರಿಕೆ ಕುರಿತಂತೆ ಟ್ವೀಟ್ ಮಾಡಿದ್ದೆ. ಅದಾದ ಬಳಿಕ, ಸಮಸ್ಯೆ ಸರಿಪಡಿಸಲಾಗಿದೆ. ಆದರೆ, ಮಾಹಿತಿ ಸೋರಿಕೆಯಾಗಿರುವ ಕುರಿತು ಯಾವುದೇ ಸಂಸ್ಥೆ ಹೊಣೆ ಹೊತ್ತುಕೊಂಡಿಲ್ಲ ಎಂದು ಬಾಬ್ ಹೇಳಿದ್ದಾರೆ.

ಬಾಬ್ ಹೇಳಿಕೆ ಕುರಿತು ಇಪಿಎಫ್‌ಒ ಆಗಲಿ, ಅಥವಾ ದೇಶದ ರಾಷ್ಟ್ರೀಯ ಸೈಬರ್ ಏಜೆನ್ಸಿ ಸರ್ಟ್‌–ಇನ್ ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು