ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಲಿಕಾಂ ಕಂಪನಿಗಳ ಬಾಕಿ ಪಾವತಿಗೆ 4 ವರ್ಷ ಗಡುವು; ಶೇ100 ವಿದೇಶಿ ಹೂಡಿಕೆಗೆ ಅವಕಾಶ

Last Updated 15 ಸೆಪ್ಟೆಂಬರ್ 2021, 16:47 IST
ಅಕ್ಷರ ಗಾತ್ರ

ನವದೆಹಲಿ: ದೇಶದ ದೂರಸಂಪರ್ಕ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನ ಕೈಗೊಂಡಿದೆ. ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಗಡುವು, ಶೇಕಡ 100ರಷ್ಟು ವಿದೇಶ ಹೂಡಿಕೆಗೆ ಅವಕಾಶ ಸೇರಿದಂತೆ ಹಲವು ಕ್ರಮಗಳನ್ನು ಒಳಗೊಂಡ ಪರಿಹಾರ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಚಿವ ಸಂಪುಟವು ಕೈಗೊಂಡಿರುವ ನಿರ್ಧಾರಗಳ ಕುರಿತು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ದೂರಸಂಪರ್ಕ ಕ್ಷೇತ್ರದ ಉತ್ತೇಜನಕ್ಕಾಗಿ ಒಂಭತ್ತು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಹೊಂದಾಣಿಕೆ ಮಾಡಿದ ಒಟ್ಟು ಆದಾಯ ಅಥವಾ ಎಜಿಆರ್‌ನ ವ್ಯಾಖ್ಯಾನವು ದೂರಸಂಪರ್ಕ ಕ್ಷೇತ್ರದಲ್ಲಿನ ತಲ್ಲಣಕ್ಕೆ ಪ್ರಮುಖ ಕಾರಣವಾಗಿದ್ದು, ಕಂಪನಿಗಳ ದೂರಸಂಪರ್ಕ ವಲಯ ಹೊರತಾದ ಆದಾಯವನ್ನು ಬಿಡುವ ಮೂಲಕ ತರ್ಕಬದ್ಧಗೊಳಿಸಲಾಗಿದೆ.

ದೂರಸಂಪರ್ಕ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅವಕಾಶವನ್ನು ಸಚಿವ ಸಂಪುಟವು ಅನುಮೋದಿಸಿದೆ ಎಂದು ಅಶ್ವಿನಿ ವೈಷ್ಣವ್‌ ಹೇಳಿದರು.

ಎಜಿಆರ್‌, ತರಂಗಾಂತರ ಬಳಕೆ ಶುಲ್ಕ ಹಾಗೂ ಬಾಕಿ ಮೊತ್ತದ ಮರು ಪಾವತಿಗೆ ನಾಲ್ಕು ವರ್ಷಗಳ ಗಡುವು ಕ್ರಮಗಳಿಗೆ ಸಮ್ಮತಿ ದೊರೆತಿದೆ. ಈ ಕ್ರಮಗಳು ದೂರಸಂಪರ್ಕ ವಲಯದಲ್ಲಿ ಹಣದ ಹರಿವಿನ ಮುಗ್ಗಟ್ಟು ಶಮಗೊಳಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದರು.

ಸಚಿವ ಸಂಪುಟದ ನಿರ್ಧಾರ ಹೊರಬೀಳುತ್ತಿದ್ದಂತೆ ದೂರಸಂಪರ್ಕ ವಲಯದ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT