ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವೇದಾಂತ ಸೇರಲಿರುವ ಅಜಯ್‌ ಗೋಯಲ್

Published 24 ಅಕ್ಟೋಬರ್ 2023, 15:44 IST
Last Updated 24 ಅಕ್ಟೋಬರ್ 2023, 15:44 IST
ಅಕ್ಷರ ಗಾತ್ರ

ಬೆಂಗಳೂರು/ನವದೆಹಲಿ (ರಾಯಿಟರ್ಸ್‌/ಪಿಟಿಐ): ವೇದಾಂತ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಅಜಯ್‌ ಗೋಯಲ್‌ ಅವರು ಇದೇ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಏಪ್ರಿಲ್‌ನಲ್ಲಿ ಅವರು ಕಂಪನಿ ತೊರೆದು ಬೈಜೂಸ್‌ನಲ್ಲಿ ಸಿಎಫ್‌ಒ ಹೊಣೆಗಾರಿಕೆ ವಹಿಸಿಕೊಂಡಿದ್ದರು. ವೇದಾಂತ ಸಿಎಫ್‌ಒ ಸೋನಾಲ್‌ ಶ್ರೀವಾಸ್ತವ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರಿಂದ ಅಜಯ್‌ ಅವರನ್ನು ನೇಮಿಸಲಾಗಿದೆ. ಬೈಜೂಸ್‌ನ 2022ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆ ಪೂರ್ಣಗೊಂಡ ಬಳಿಕ ಅವರು ವೇದಾಂತ ಕಂಪನಿಗೆ ಮರಳಲಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವೇದಾಂತ ಸಮೂಹವು ತನ್ನ ವಹಿವಾಟುಗಳನ್ನು ಪುನರ್‌ರಚನೆ ಮಾಡುವುದಾಗಿ ಕಳೆದ ತಿಂಗಳು ಘೋಷಣೆ ಮಾಡಿದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿವೆ. ಶ್ರೀವಾಸ್ತವ ಅವರು ಜೂನ್‌ನಲ್ಲಿ ವೇದಾಂತ ಸೇರಿದ್ದರು.

ಅಜಯ್‌ ಗೋಯಲ್‌ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಬೈಜೂಸ್‌ನ ಹಾಲಿ ಹಣಕಾಸು ಅಧ್ಯಕ್ಷವ ನಿತಿನ್‌ ಗೋಲಾನಿ ಅವರಿಗೆ ಹೆಚ್ಚುವರಿಯಾಗಿ ಸಿಎಫ್‌ಒ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಬೈಜೂಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT