ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ: ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ಗೆ ಬೀಗ

Last Updated 11 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ಆರ್ಥಿಕ ಸಂಕಷ್ಟದಿಂದಾಗಿ ಬಾಗಿಲು ಮುಚ್ಚಿದೆ. 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅತಿದೊಡ್ಡ ಬ್ಯಾಂಕಿಂಗ್‌ ವೈಫಲ್ಯ ಇದಾಗಿದೆ.

ಕ್ಯಾಲಿಫೋರ್ನಿಯಾದ ಡಿಪಾರ್ಟ್‌ಮೆಂಟ್‌ ಆಫ್‌ ಫೈನಾನ್ಶಿಯಲ್‌ ಪ್ರೊಟೆಕ್ಷನ್‌ ಆ್ಯಂಡ್‌ ಇನೊವೇಷನ್‌ (ಡಿಎಫ್‌ಪಿಐ), ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಬಾಗಿಲು ಮುಚ್ಚುವ ನಿರ್ಧಾರವನ್ನು ಶುಕ್ರವಾರ ಘೋಷಿಸಿತು. ಬ್ಯಾಂಕ್‌ನ ನಿಯಂತ್ರಣವನ್ನು ಫೆಡರಲ್‌ ಡೆಪಾಸಿಟ್‌ ಇನ್ಶುರನ್ಸ್ ಕಾರ್ಪೊರೇಷನ್‌ಗೆ (ಎಫ್‌ಡಿಐಸಿ) ನೀಡಲಾಗಿದೆ.

ಒಂದು ಖಾತೆಯಲ್ಲಿ 2.5 ಲಕ್ಷ ಡಾಲರ್‌ವರೆಗೆ ಠೇವಣಿ ಹೊಂದಿರುವವರಿಗೆ ಮಾತ್ರವೇ ವಿಮೆ ಸಿಗಲಿದೆ. 2022ರ ಅಂತ್ಯದ ವೇಳೆಗೆ, ಬ್ಯಾಂಕ್‌ನಲ್ಲಿ ₹14.35 ಲಕ್ಷ ಕೋಟಿ ಮೌಲ್ಯದ ಠೇವಣಿ ಇದ್ದು, ಅದರಲ್ಲಿ ಶೇ 89ರಷ್ಟು ವಿಮೆಗೆ ಒಳಪಟ್ಟಿಲ್ಲ. ಸೋಮವಾರ ಬ್ಯಾಂಕ್‌ ತೆರೆಯಲಿದ್ದು, ವಿಮೆ ಮಾಡಿಸಿರುವ ಠೇವಣಿದಾರರು ಹಣ ಹಿಂದಕ್ಕೆ ಪಡೆಯಬಹುದು ಎಂದು ಎಫ್‌ಡಿಐಸಿ ಭರವಸೆ ನೀಡಿದೆ. ವಿಮೆ ಮಾಡಿಸದೇ ಇರುವ ಠೇವಣಿಗಳಿಗೆ ಬ್ಯಾಂಕ್‌ನ ಆಸ್ತಿಗಳು ಮಾರಾಟ ಆದ ಬಳಿಕ ಹಣ ನೀಡುವುದಾಗಿ ಅದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT