ನವದೆಹಲಿ: ಅಮೆರಿಕ ಹೇರಿದ ಶೇ 50 ರಷ್ಟು ಸುಂಕದಿಂದಾಗಿ ಭಾರತದ ಚರ್ಮೋದ್ಯಮ ಹಾಗೂ ಸಂಬಂಧಿತ ಸಂಸ್ಥೆಗಳ ಆದಾಯ ಈ ಆರ್ಥಿಕ ವರ್ಷದಲ್ಲಿ ಶೇ 10–12 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ‘ಕ್ರಿಸಿಲ್ ರೇಟಿಂಗ್ಸ್’ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.
.ಜಿಎಸ್ಟಿ ಪರಿಷ್ಕರಣೆ: ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳಲ್ಲ–ಕ್ರಿಸಿಲ್ .
ಭಾರತದ ಚರ್ಮೋದ್ಯಮಕ್ಕೆ ಅಮೆರಿಕ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು.

ಜಿಎಸ್ಟಿ ಕಡಿತದಿಂದಾಗಿ ಆಂತರಿಕ ಬೇಡಿಕೆ ಹೆಚ್ಚಳ, ಕಡಿಮೆ ಆದಾಯ ತೆರಿಗೆ, ಕಡಿಮೆ ಹಣದುಬ್ಬರ ಹಾಗೂ ಕನಿಷ್ಠ ಬಡ್ಡಿ ದರದ ಹೊರತಾಗಿಯೂ ಚರ್ಮೋದ್ಯಮ ಸಂಸ್ಥೆಗಳ ಆದಾಯದಲ್ಲಿ ಇಳಿಕೆಯಾಗಲಿದೆ ಎಂದು ಅದು ಹೇಳಿದೆ.

ಅಮೆರಿಕ ಹೇರಿರುವ ಶೇ 50 ರಷ್ಟು ತೆರಿಗೆಯಿಂದಾಗಿ ರಫ್ತು ಇಳಿಕೆಯಾಗಿ ಭಾರತ ಚರ್ಮೋದ್ಯಮ ಹಾಗೂ ಸಂಬಂಧಿತ ಸಂಸ್ಥೆಗಳ ಆದಾಯ ಈ ಆರ್ಥಿಕ ವರ್ಷದಲ್ಲಿ ಶೇ 10–12 ರಷ್ಟು ಕುಸಿತ ಕಾಣದಲಿದೆ’ ಎಂದು ವರದಿ ಹೇಳಿದೆ.
.ಬ್ಯಾಂಕ್ಗಳ ಸಾಲ ನೀಡಿಕೆ ಶೇ 12ಕ್ಕೆ ಹೆಚ್ಚಳ ನಿರೀಕ್ಷೆ: ಕ್ರಿಸಿಲ್ .
2025ರ ಆರ್ಥಿಕ ವರ್ಷದಲ್ಲಿ ಚರ್ಮ ಹಾಗೂ ಸಂಬಂಧಿತ ಉದ್ಯಮ ₹ 56 ಸಾವಿರ ಕೋಟಿ ಆದಾಯ ಗಳಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಪೈಕಿ ಶೇ 70 ರಷ್ಟು ಆದಾಯ ರಫ್ತಿನಿಂದಾಗಿಯೇ ಬಂದಿತ್ತು ಎಂದು ಅದು ತಿಳಿಸಿದೆ.

ಚರ್ಮೋದ್ಯಮದ ಉತ್ಪನ್ನಗಳು ಶೇ 50 ರಷ್ಟು ಐರೋಪ್ಯ ಒಕ್ಕೂಟದ ರಾಷ್ಟ್ರಗಳಿಗೂ, ಶೇ 22 ರಷ್ಟು ಅಮೆರಿಕಕ್ಕೂ ರಫ್ತಾಗುತ್ತದೆ. ಅಮೆರಿಕ ಹೇರಿದ ಸುಂಕದ ಪರಿಣಾಮ ಈಗಲೇ ಗೋಚರಿಸುತ್ತಿದೆ ಎಂದು ಅದು ತಿಳಿಸಿದೆ.
.ದ್ವಿಚಕ್ರ ವಾಹನ ಮಾರಾಟ ಶೇ 6ರಷ್ಟು ಹೆಚ್ಚಳ ನಿರೀಕ್ಷೆ: ಕ್ರಿಸಿಲ್.
ಅಮೆರಿಕದಿಂದ ಬೇಡಿಕೆ ಕಡಿಮೆಯಾಗಿದ್ದರಿಂದ ರಫ್ತಿನ ಪ್ರಮಾಣ ಶೇ 13–14ರಷ್ಟು ಕುಸಿತ ಕಾಣುವ ಸಂಭವವಿದೆ ಎಂದು ಕ್ರಿಸಿಲ್ ರೇಟಿಂಗ್ಸ್ನ ನಿರ್ದೇಶಕಿ ಜಯಶ್ರೀ ನಂದಕುಮಾರ್ ತಿಳಿಸಿದ್ದಾರೆ.

ಅತಿ ಹೆಚ್ಚು ಆದಾಯ ತಂದುಕೊಡುವ ಶೂ ಹಾಗೂ ಇತರ ಚರ್ಮದ ಉತ್ಪನಗಳ ರಫ್ತು ಇಳಿಕೆಯಾಗುವುದರಿಂದ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಅವರು ಹೇಳಿದ್ದಾರೆ.
.Inflation | ಹಣದುಬ್ಬರ ಶೇ 4ರಷ್ಟು ನಿರೀಕ್ಷೆ: ಕ್ರಿಸಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.