ಕೋಲ್ಕತ್ತ: ಜಿಎಸ್ಟಿ ಪರಿಷ್ಕರಣೆಯಿಂದಾಗಿ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿಲ್ಲ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಶುಕ್ರವಾರ ತಿಳಿಸಿದೆ.

ಜಿಎಸ್ಟಿ ಪರಿಷ್ಕರಣೆಯಿಂದ ಅಲ್ಪಾವಧಿವರೆಗೆ ವಾರ್ಷಿಕ ₹48 ಸಾವಿರ ಕೋಟಿ ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು ಎಂದು ಕ್ರಿಸಿಲ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್ಟಿ ಸಂಗ್ರಹವು ₹10.6 ಲಕ್ಷ ಕೋಟಿಯಾಗಿತ್ತು. ಆದ್ದರಿಂದ, ನಷ್ಟದ ಪ್ರಮಾಣ ಗಮನಾರ್ಹವಾಗಿ ಇಲ್ಲ ಎಂದು ಹೇಳಿದೆ.

ಜಿಎಸ್ಟಿ ಮಂಡಳಿಯು ದರ ಪರಿಷ್ಕರಣೆ ಮಾಡಿರುವುದರಿಂದ ನಾಲ್ಕು ಹಂತದ ತೆರಿಗೆ, ಎರಡು ಹಂತಕ್ಕೆ ಇಳಿಯಲಿದೆ. ಇದರಿಂದ ಸರಕು ಮತ್ತು ಸೇವೆಗಳ ದರ ಕಡಿಮೆಯಾಗಲಿದೆ ಎಂದು ಹೇಳಿದೆ.

ಜಿಎಸ್ಟಿ ಪರಿಷ್ಕರಣೆ ಮೊದಲು ಶೇ 18ರ ಹಂತದ ತೆರಿಗೆಯಿಂದ ಶೇ 75ರಷ್ಟು ವರಮಾನ ಬರುತ್ತಿತ್ತು. ಶೇ 6ರಷ್ಟು ವರಮಾನ ಶೇ 12ರ ಹಂತದ ತೆರಿಗೆಯಿಂದ ಮತ್ತು ಶೇ 15ರಷ್ಟು ವರಮಾನ ಶೇ 28 ಹಂತದಿಂದ ಬರುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.