ಶನಿವಾರ, ಮೇ 15, 2021
25 °C

ಸ್ಯಾಮ್‌ಸಂಗ್‌ ಫೋನ್‌ ತಯಾರಿಕೆಗೂ ಕೊರೊನಾ ವೈರಸ್‌ ಕಾಟ; ವಿಯೆಟ್ನಾಂನಲ್ಲಿ ಆತಂಕ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಯಾಮ್‌ಸಂಗ್‌ ಝಡ್‌ ಫ್ಲಿಪ್‌ ಫೋನ್‌

ಹನಾಯ್‌: ವಿಯೆಟ್ನಾಂನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿರುವ 'ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌'ಗೆ ಕೊರೊನಾ ವೈರಸ್‌ ಆತಂಕ ಎದುರಾಗಿದೆ. ಹೊಸ ಫೋನ್‌ಗಳ ತಯಾರಿಕೆಗೆ ಹೊಡೆತ ಬೀಳಬಹುದು ಎಂದು ವಿಯೆಟ್ನಾಂ ಕೈಗಾರಿಕೆ ಸಚಿವಾಲಯ ಹೇಳಿದೆ.

ವೈರಸ್‌ ಆತಂಕದಿಂದಾಗಿ ಅಗತ್ಯ ಬಿಡಿ ಭಾಗಗಳ ಪೂರೈಕೆಯಾಗದೆ ಕಾರು, ಎಲೆಕ್ಟ್ರಾನಿಕ್ಸ್‌ ಹಾಗೂ ಫೋನ್‌ ತಯಾರಿಕಾ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಉಪಕರಣಗಳು ಹಾಗೂ ಬಿಡಿ ಭಾಗಗಳಿಗೆ ವಿಯೆಟ್ನಾಂ ಚೀನಾ ಮೇಲೆ ಅವಲಂಬಿತವಾಗಿದ್ದು, ಚೀನಾದಿಂದ ಪೂರೈಕೆಯಲ್ಲಿ ಆಗುವ ವ್ಯತ್ಯಾಸ ತಯಾರಿಕೆ ವಲಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. 

ವಿಯೆಟ್ನಾಂನ ಅತಿ ದೊಡ್ಡ ವಿದೇಶಿ ಹೂಡಿಕೆದಾರ ಕಂಪನಿ ಸ್ಯಾಮ್‌ಸಂಗ್‌, ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳಿಗೆ ಚೀನಾ ನೆಚ್ಚಿಕೊಂಡಿದೆ. ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ (ಕೋವಿಡ್–19) ಸರಕು ಸಾಗಣೆ ಹಾಗೂ ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಚೀನಾದಿಂದ ಇತರೆ ರಾಷ್ಟ್ರಗಳಿಗೆ ಬಿಡಿ ಭಾಗಗಳ ಪೂರೈಕೆ ಬಹುತೇಕ ಸ್ಥಗಿತವಾಗಿದೆ. 

ಸಮುದ್ರ ಅಥವಾ ವಾಯು ಮಾರ್ಗದಲ್ಲಿ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸ್ಯಾಮ್‌ಸಂಗ್‌ ಪ್ರಯತ್ನಿಸುತ್ತಿದೆ. ಆದರೆ, ಅದರಿಂದ ಆಮದು ಖರ್ಚು ಹೆಚ್ಚಲಿದೆ ಹಾಗೂ ಬೇಡಿಕೆ ತಕ್ಕಂತೆ ಪೂರೈಕೆ ಸಾಧ್ಯವಾಗದಿರಬಹುದು ಎಂದು ರಾಯಿಟರ್ಸ್‌ ವರದಿ ಮಾಡಿದೆ. 

ಪ್ರಸ್ತುತ ವಿಯೆಟ್ನಾಂನಲ್ಲಿ ಯಾವುದೇ ತಯಾರಿಕಾ ಘಟಕಗಳು ಕಾರ್ಯಸ್ಥಗಿತಗೊಳಿಸಿಲ್ಲ. ಆದರೆ, ಮುಂದಿನ 1–1.5 ತಿಂಗಳು ವೈರಸ್‌ ಪ್ರಭಾವ ಹೀಗೆಯೇ ಮುಂದುವರಿದರೆ ಪರಿಣಾಮ ತೀವ್ರವಾಗಲಿದೆ. ಟಿವಿ ಮತ್ತು ಫೋನ್‌ ತಯಾರಿಕೆಗೆ ಹೆಚ್ಚಿನ ಹೊಡೆತ ಬೀಳಲಿದೆ. 

ಈಗಾಗಲೇ 15 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢ ಪಟ್ಟಿದೆ. ತಯಾರಿಕೆ ಘಟಕಗಳು ಕಾರ್ಯ ನಿಲ್ಲಿಸಿದರೆ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ವಿಯೆಟ್ನಾಂ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಶೇ 6.8ರಷ್ಟು ಆರ್ಥಿಕ ವೃದ್ಧಿ ನಿರೀಕ್ಷಿಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು