ನವದೆಹಲಿ: ಮುಂದಿನ 10 ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ, ₹1,144 ಕೋಟಿ ಪಾವತಿಸಲಾಗುವುದು. ಉಳಿದ ಬಾಕಿಯನ್ನು 2036ರ ಮಾರ್ಚ್ನಿಂದ ಪಾವತಿಸಲಾಗುವುದು ಎಂದು ವೊಡಾಫೋನ್ ಐಡಿಯಾ ಕಂಪನಿಯು (ವಿಐಎಲ್) ಶುಕ್ರವಾರ ಹೇಳಿದೆ.

2026ರ ಮಾರ್ಚ್ನಿಂದ 2031ರ ಮಾರ್ಚ್ವರೆಗೆ ಸರ್ಕಾರಕ್ಕೆ, ಪ್ರತಿ ವರ್ಷ ₹124 ಕೋಟಿ ಪಾವತಿ ಮಾಡಲಾಗುವುದು. 2032ರ ಮಾರ್ಚ್ನಿಂದ 2035ರ ಮಾರ್ಚ್ವರೆಗೆ ವಾರ್ಷಿಕ ₹100 ಕೋಟಿ ಪಾವತಿಸಲಾಗುವುದು. ಉಳಿದ ಹೊಂದಾಣಿಕೆ ಮಾಡಿದ ಒಟ್ಟು ವರಮಾನಕ್ಕೆ (ಎಜಿಆರ್) ಸಂಬಂಧಿಸಿದ ಬಾಕಿಯನ್ನು ಸಮಾನ ಕಂತುಗಳಲ್ಲಿ 2036ರ ಮಾರ್ಚ್ನಿಂದ 2041ರ ಮಾರ್ಚ್ವರೆಗೆ ಪಾವತಿಸಲಾಗುತ್ತದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.

ವಿಐಎಲ್ ಬಾಕಿ ಇರಿಸಿಕೊಂಡಿರುವ ಎಜಿಆರ್ ಮೊತ್ತ ₹87,695 ಕೋಟಿ. ಇದನ್ನು ಈ ಮಟ್ಟದಲ್ಲೇ ಉಳಿಸಲು ಕೇಂದ್ರ ಸಂಪುಟವು ಇತ್ತೀಚೆಗೆ ನಿರ್ಧರಿಸಿತ್ತು. ಈ ಮೊತ್ತದ ಪಾವತಿಯನ್ನು ಕಂಪನಿಯು 2031–32ರಿಂದ ಆರಂಭಿಸಿ, 2040–41ರೊಳಗೆ ಪೂರ್ಣಗೊಳಿಸಬೇಕಿದೆ ಎಂದು ಹೇಳಿತ್ತು.

ಈ ಬಾಕಿ ಜೊತೆಗೆ ಕಂಪನಿಯು, 2017–18 ಹಾಗೂ 2018–19ಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಬೇಕಿರುವ ಎಜಿಆರ್ ಬಾಕಿಯನ್ನು ಸುಪ್ರೀಂ ಕೋರ್ಟ್ನ 2020ರ ಆದೇಶದ ನಂತರ ಅಂತಿಮಗೊಳಿಸಲಾದ ಮೊತ್ತವನ್ನು 2025–26ರಿಂದ ಆರಂಭಿಸಿ 2030–31ರ ಆರ್ಥಿಕ ವರ್ಷಗಳಲ್ಲಿ ಯಾವುದೇ ಬದಲಾವಣೆಯಿಲ್ಲದೆ ಪಾವತಿಸಬೇಕಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.