Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ಬೆಂಗಳೂರು: ವೇಗದ ಇಂಟರ್‌ನೆಟ್ ಒದಗಿಸುವ ಮತ್ತು ಏಕಕಾಲಕ್ಕೆ 10 ಉಪಕರಣಗಳಲ್ಲಿ ವೈಫೈ ಬಳಸಲು ಅನುಕೂಲವಾಗುವ ವಿ MiFi ಹೊಸ ರೂಟರ್ ಅನ್ನು ವೊಡಾಫೋನ್ ಐಡಿಯಾ ‘ವಿ‘ ಪರಿಚಯಿಸಿದೆ.
ಬಳಕೆದಾರರು ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸಿಸಿಟಿವಿ, ಸ್ಮಾರ್ಟ್ ಸ್ಪೀಕರ್ಸ್ ಮತ್ತು ವಿವಿಧ ಗ್ಯಾಜೆಟ್‌ಗಳಲ್ಲಿ ಬಳಸಬಹುದು ಎಂದು ಕಂಪನಿ ಹೇಳಿದೆ.
ಪ್ರಯಾಣದ ಸಂದರ್ಭದಲ್ಲಿ, ವರ್ಕ್ ಫ್ರಮ್ ಹೋಮ್ ಬಳಕೆಗೆ ಹಾಗೂ ಕಚೇರಿಗಳಲ್ಲಿ ಕೂಡ ವಿ MiFi ರೂಟರ್ ಬಳಸಲು ಅನುಕೂಲ ಎಂದು ವಿ ತಿಳಿಸಿದೆ.
ವಿ ಫ್ಯಾಮಿಲಿ ಪ್ಲ್ಯಾನ್ಸ್ ಮತ್ತು ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲ್ಯಾನ್ಸ್ ಜತೆಗೆ ಹೊಸ ರೂಟರ್ ಲಭ್ಯವಿದೆ.
ವಿ MiFi, 2700ಎಂಎಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಐದು ಗಂಟೆ ಬಳಸಬಹುದು.
ಡ್ಯೂಯೆಲ್ ಸಿಮ್ ದ್ವಂದ್ವಕ್ಕೀಗ ಕೊನೆಗಾಲ!
ಹೊಸ ವಿ MiFi ರೂಟರ್ ದರ ₹2000 ಇದ್ದು, ಅದರ ಜತೆಗೆ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪಡೆದುಕೊಳ್ಳಬಹುದು. ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ₹399 ರಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.
Galaxy A53 5G | ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್: ಬೆಲೆ ವಿವರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.