ಸೋಮವಾರ, ಮಾರ್ಚ್ 30, 2020
19 °C

ದೂರ ಸಂಪರ್ಕ ಇಲಾಖೆಗೆ ₹1,000 ಕೋಟಿ ಪಾವತಿಸಿದ ವೊಡಾಫೋನ್ ಐಡಿಯಾ 

ಪಿಟಿಐ Updated:

ಅಕ್ಷರ ಗಾತ್ರ : | |

ವೊಡಾಫೋನ್‌ ಐಡಿಯಾ

ನವದೆಹಲಿ: ವೊಡಾಫೋನ್‌ ಐಡಿಯಾ ಗುರುವಾರ ದೂರ ಸಂಪರ್ಕ ಇಲಾಖೆಗೆ ₹1,000 ಕೋಟಿ ಪಾವತಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. 

ತರಂಗಾಂತರ ಬಳಕೆ ಹಾಗೂ ಪರವಾನಗಿ ಶುಲ್ಕ ಸೇರಿದಂತೆ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ₹53,000 ಕೋಟಿ ಪಾವತಿಸಬೇಕಿದೆ. ಈ ಪೈಕಿ ಸೋಮವಾರ ₹2,500 ಕೋಟಿ ಪಾವತಿಸಿದ್ದ ಕಂಪನಿ, ಇಂದು ₹1,000 ಕೋಟಿ ಪಾವತಿ ಮಾಡಿದೆ. 

ಬಾಕಿ ಪಾವತಿಗೆ ಸಂಬಂಧಿಸಿದಂತೆ ವೊಡಾಫೋನ್‌ ಐಡಿಯಾ ಮುಖ್ಯಸ್ಥ ಕುಮಾರ್‌ ಮಂಗಳಂ ಬಿರ್ಲಾ ಮಂಗಳವಾರ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಅನ್ಷು ಪ್ರಕಾಶ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. 

ಇದನ್ನೂ ಓದಿ: 

ಬಾಕಿ ಪೂರ್ಣ ಪಾವತಿ ಮಾಡುವಂತೆ ಟಾಟಾ ಟೆಲಿಸರ್ವೀಸಸ್‌ಗೆ ಒಂದೆರಡು ದಿನಗಳಲ್ಲಿ ನೋಟಿಸ್‌ ರವಾನಿಸುವುದಾಗಿ ದೂರ ಸಂಪರ್ಕ ಇಲಾಖೆ ಮೂಲಗಳು ತಿಳಿಸಿವೆ. ಕಂಪನಿ ಸೋಮವಾರ ₹2,197 ಕೋಟಿ ಪಾವತಿ ಮಾಡಿದ್ದು, ಇಲಾಖೆಯ ಲೆಕ್ಕಾಚಾರಗಳ ಪ್ರಕಾರ ₹14,000 ಕೋಟಿ ಬಾಕಿ ಇದೆ. 

ಒಟ್ಟು ₹35,586 ಕೋಟಿ ಬಾಕಿ ಉಳಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌, ಸೋಮವಾರ ₹10,000 ಕೋಟಿ ಪಾವತಿಸಿದೆ. 

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ₹1.47 ಲಕ್ಷ ಕೋಟಿ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ಪಾಲನೆಯಾಗದ್ದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ 24ರಂದು ನೀಡಿದ್ದ ಆದೇಶದ ಪ್ರಕಾರ ಜನವರಿ 23ರಂದು ಟೆಲಿಕಾಂ ಆಪರೇಟರ್‌ಗಳು ಬಾಕಿ ಮೊತ್ತ ಸರ್ಕಾರಕ್ಕೆ ಪಾವತಿಸಬೇಕಿತ್ತು. ಫೆಬ್ರುವರಿ 14ರಂದು ದೂರ ಸಂಪರ್ಕ ಇಲಾಖೆ ತಕ್ಷಣ ಬಾಕಿ ಮೊತ್ತ ಪಾವತಿಸುವಂತೆ ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು