ಬೆಂಗಳೂರು: ಎರಡನೇ ಆವೃತ್ತಿಯ ಕ್ವೀನ್ಸ್ ಪ್ರೀಮಿಯರ್ ಲೀಗ್ (ಕ್ಯೂಪಿಎಲ್) ಕ್ರೀಡೋತ್ಸವದ ನಾಲ್ಕನೇ ದಿನವಾದ ಗುರುವಾರ ಕ್ರಿಕೆಟ್ ಪಂದ್ಯಾಟಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಹುಬ್ಬಳ್ಳಿ ಕ್ವೀನ್ಸ್ ಮತ್ತು ಬೆಂಗಳೂರು ಕ್ವೀನ್ಸ್ ತಂಡಗಳು ದಿನದ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದವು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಸ್ಟಾರ್ ನಾಯಕಿಯರ ಹತ್ತು ತಂಡಗಳೂ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡವು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯವನ್ನು ವೀಕ್ಷಿಸಿ ತಮ್ಮ ನೆಚ್ಚಿನ ತಾರೆಯರನ್ನು ಹುರಿದುಂಬಿಸಿದರು.

ದಿನದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಕ್ವೀನ್ಸ್ ಮತ್ತು ಶಿವಮೊಗ್ಗ ಕ್ವೀನ್ಸ್ ತಂಡಗಳು ಮುಖಾಮುಖಿಯಾದವು. ಆಲ್ರೌಂಡ್ ಪ್ರದರ್ಶನ ನೀಡಿದ ಹುಬ್ಬಳ್ಳಿ ತಂಡವು ಭರ್ಜರಿ ಗೆಲುವು ಸಾಧಿಸಿತು. ನಂತರದಲ್ಲಿ ಕೋಲಾರ ಕ್ವೀನ್ಸ್ ತಂಡವನ್ನು ಮಣಿಸಿದ ಹುಬ್ಬಳ್ಳಿ ತಂಡವು ಸತತ ಎರಡನೇ ಗೆಲುವು ದಾಖಲಿಸಿತು.

ಮತ್ತೊಂದು ರೋಚಕ ಪಂದ್ಯದಲ್ಲಿ ಚಿತ್ರದುರ್ಗ ಕ್ವೀನ್ಸ್ ತಂಡವು ಮಂಗಳೂರು ಕ್ವೀನ್ಸ್ ವಿರುದ್ಧ ಗೆಲುವು ಸಾಧಿಸಿತು. ಚಿತ್ರದುರ್ಗ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿದ ಮುಂದೆ ಮಂಗಳೂರು ತಂಡ ಮಂಡಿಯೂರಿತು.

ಬಳ್ಳಾರಿ ಕ್ವೀನ್ಸ್ ವಿರುದ್ಧ ಮೈಸೂರು ಕ್ವೀನ್ಸ್ ತಂಡವು ಉತ್ಸಾಹಭರಿತ ಪ್ರದರ್ಶನದೊಂದಿಗೆ ಜಯ ದಾಖಲಿಸಿತು. ಕುತೂಹಲ ಮೂಡಿಸಿದ್ದ ಮತ್ತೊಂದು ಹಣಾಹಣಿಯಲ್ಲಿ ಬೆಂಗಳೂರು ಕ್ವೀನ್ಸ್ ತಂಡವು 6 ರನ್ಗಳಿಂದ ಮೈಸೂರು ಕ್ವೀನ್ಸ್ ತಂಡವನ್ನು ಸೋಲಿಸಿತು. ಕೊನೆಯ ಓವರ್ವರೆಗೆ ಸಾಗಿದ ಈ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಬೆಂಗಳೂರು ಕ್ವೀನ್ಸ್ ತಂಡವು ಮತ್ತೊಂದು ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಹಾಸನ ಕ್ವೀನ್ಸ್ ತಂಡವನ್ನು ಸೋಲಿಸಿದರೆ, ಬೆಳಗಾವಿ ಕ್ವೀನ್ಸ್ ತಂಡವು ಬಳ್ಳಾರಿ ಕ್ವೀನ್ಸ್ ವಿರುದ್ಧ ಜಯ ಗಳಿಸಿತು.

ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರೀಡೋತ್ಸವ ನಿರ್ಣಾಯಕ ಹಂತ ತಲುಪಿದ್ದು, ಶುಕ್ರವಾರ ಸಂಜೆ ಕೂಟಕ್ಕೆ ತೆರೆಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.