ಆಕಸ್ಮಿಕ ಲಾಭ ತೆರಿಗೆ ತಗ್ಗಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ತಗ್ಗಿಸಿದೆ. ಇದೇ ವೇಳೆ, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿದೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಂತಹ (ಒಎನ್‌ಜಿಸಿ) ಕಂಪನಿಗಳು ದೇಶದಲ್ಲಿ ಉತ್ಪಾದನೆ ಮಾಡುವ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ ₹4,900 ಇದ್ದ ಆಕಸ್ಮಿಕ ಲಾಭ ತೆರಿಗೆಯನ್ನು ₹ 1,700ಕ್ಕೆ ಇಳಿಕೆ ಮಾಡಲಾಗಿದೆ.
ಡೀಸೆಲ್ ಮೇಲಿನ ರಫ್ತು ತೆರಿಗೆಯನ್ನು ಲೀಟರಿಗೆ ₹ 8 ರಷ್ಟು ಇದ್ದಿದ್ದು ₹5ಕ್ಕೆ ಹಾಗೂ ವಿಮಾನ ಇಂಧನದ ರಫ್ತು ಮೇಲಿನ ತೆರಿಗೆಯನ್ನು ಲೀಟರಿಗೆ ₹ 5ರಷ್ಟು ಇದ್ದಿದ್ದು ₹1.5ಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ತೆರಿಗೆ ದರಗಳು ಶುಕ್ರವಾರದಿಂದಲೇ ಜಾರಿಗೆ ಬರಲಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ನವೆಂಬರ್‌ನಿಂದ ಈವರೆಗೆ ಶೇ 14ರಷ್ಟು ಇಳಿಕೆ ಕಂಡಿದೆ. ಇದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.