ನವದೆಹಲಿ: ಮೊಬೈಲ್ ಫೋನ್ ತಯಾರಿಕಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಶಿಯೋಮಿ ಸಂಸ್ಥೆಯು ಮತ್ತೊಂದು ಮಾದರಿಯ ಹೊಸ ಸ್ಮಾರ್ಟ್‌ಫೋನ್ ‘ಎಂಐ ಎ3’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇದು ‘ಆಂಡ್ರಾಯ್ಡ್ ಒನ್’ ಆಧರಿಸಿದ ಫೋನ್ ಆಗಿದ್ದು, ಎ–2 ಮಾದರಿಯ ಮುಂದುವರಿದ ಭಾಗವಾಗಿದೆ. ಹೈರೆಸಲ್ಯೂಷನ್ ಟ್ರಿಪಲ್ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ.
ವಿನೂತನವಾದ ವಿನ್ಯಾಸದೊಂದಿಗೆ ಬೂದು, ನೀಲಿ ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಅನ್ನು ಶಿಯೋಮಿ ಇಂಡಿಯಾದ ಉಪಾಧ್ಯಕ್ಷ ಮನು ಜೈನ್ ಹಾಗೂ ಆನ್‌ಲೈನ್ ಮಾರುಕಟ್ಟೆ ಮುಖ್ಯಸ್ಥ ರಘು ರೆಡ್ಡಿ ಅವರು ಇಲ್ಲಿ ಬುಧವಾರ ಅನಾವರಣಗೊಳಿಸಿದರು.
4030 ಎಂಎಎಚ್ ಬ್ಯಾಟರಿ ಸಾಮರ್ಥ್ಯ, 15.46 ಸೆಂ.ಮೀ. ಸೂಪರ್ ಎಮೋಲೆಡ್ ಡಿಸ್‌ಪ್ಲೇ ಸ್ಕ್ರೀನ್, ಹಿಂಭಾಗದ 48+8+2 ಮೆಗಾ ಪಿಕ್ಸಲ್‌ನ ಟ್ರಿಪಲ್ ಹೈ ರೆಸಲೂಷನ್ ಲೆನ್ಸ್‌ನ ಕ್ಯಾಮೆರಾ ಹಾಗೂ 32 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಇದೆ.
ಗೊರಿಲ್ಲಾ ಗ್ಲಾಸ್–5, 7ನೇ ತಲೆಮಾರಿನ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವ 4 ಜಿ.ಬಿ ಮತ್ತು 6ಜಿ.ಬಿ ರ‍್ಯಾಮ್ ಜೊತೆಗೆ 64 ಮತ್ತು 128 ಜಿ.ಬಿ ಸ್ಟೋರೇಜ್ ಸಾಮರ್ಥ್ಯದ, ಡ್ಯುಯೆಲ್ ಸಿಮ್ ಅಳವಡಿಸಬಹುದಾದ ಫೋನ್‌ಗಳು ಇದೇ 23ರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.