ಕಟ್ಟಡ ನಿರ್ಮಾಣಕ್ಕೆ ಅದಿರು ತ್ಯಾಜ್ಯ ಬಳಕೆ?

ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಮರಳಿನ ಕೊರತೆ ನೀಗಿಸುವುದು ಹಾಗೂ ಲಕ್ಯಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಸುಮಾರು 200 ಕೋಟಿ ಟನ್ ಅದಿರು ತ್ಯಾಜ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ನಗರದ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು ಸಂಶೋಧನೆ ಆರಂಭಿಸಿದೆ.
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆಯ ಅಂಗವಾಗಿ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಶುಕ್ರವಾರ ‘ರಾಷ್ಟ್ರೀಯ ವಿಚಾರಸಂಕಿರಣ’ ನಡೆಸಿತು.
ಅದಿರು ತ್ಯಾಜ್ಯದ ಮರುಬಳಕೆ ಸಂಬಂಧ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ (ಕೆಐಒಸಿ ಎಲ್) ಜತೆಗೆ ಕಾಲೇಜು ಒಪ್ಪಂದ ಮಾಡಿಕೊಂಡಿದೆ.
*
ಕೆಐಒಸಿಎಲ್ ಸಹಯೋಗದಲ್ಲಿ ಕಾಲೇಜಿನಲ್ಲಿ ಗಣಿ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ ವಿಷಯದ ಮೇಲೆ ಕೋರ್ಸ್ಗಳನ್ನು ಆರಂಭಿಸಬೇಕು
–ಆರ್. ಪ್ರಭಾಕರ್, ಬೆಳಗಾವಿಯ ವಿಟಿಯು ನಿವೃತ್ತ ಪ್ರಾಧ್ಯಾಪಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.