ನೀವು ಮ್ಯೂಚುವಲ್ ಫಂಡ್ನಲ್ಲಿ (ಎಂ.ಎಫ್) ಹೂಡಿಕೆ ಮಾಡಿದಾಗ ನಿಮ್ಮ ಹಣ ವೃತ್ತಿಪರ ನಿಧಿ ನಿರ್ವಾಹಕರ ಕೈಸೇರುತ್ತದೆ. ನಿಮ್ಮ ದುಡ್ಡನ್ನು ಯಾವ ಷೇರಿನ ಮೇಲೆ ತೊಡಗಿಸಬೇಕು, ಯಾವುದರಿಂದ ಹಿಂಪಡೆದುಕೊಳ್ಳಬೇಕು ಎಂಬಿತ್ಯಾದಿ ತೀರ್ಮಾನಗಳನ್ನು ಅವರು ಮಾಡುತ್ತಾರೆ. ಆದರೆ ಅವರ ನಿರ್ಧಾರಗಳು ಸರಿ ಇರುತ್ತವೆಯೇ?

ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸಿದ ದುಡ್ಡು ಬೆಳೆಸಲು ನಿಧಿ ನಿರ್ವಾಹಕರು ಪ್ರಾಮಾಣಿಕವಾಗಿ ಪ್ರಯತ್ನಿಸುವರೇ? ಇಂತಹ ಅನೇಕ ಪ್ರಶ್ನೆಗಳು ಪ್ರತಿ ಹೂಡಿಕೆದಾರನನ್ನೂ ಕಾಡುತ್ತವೆ. ಇದಕ್ಕೆ ಉತ್ತರ ನೀಡುತ್ತದೆ ಮ್ಯೂಚುವಲ್ ಫಂಡ್ ವಹಿವಾಟು ಅನುಪಾತ (ಮ್ಯೂಚುವಲ್ ಫಂಡ್ ಟರ್ನೋವರ್ ರೇಷಿಯೋ). ಹೌದು ಈ ಅನುಪಾತವು, ನಿಧಿ ನಿರ್ವಾಹಕರು ಹೂಡಿಕೆದಾರರ ದುಡ್ಡನ್ನು ಎಷ್ಟು ದಕ್ಷವಾಗಿ ದುಡಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಈ ಪರಿಕಲ್ಪನೆ ಅರ್ಥ ಮಾಡಿಕೊಂಡರೆ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಜಾಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಟರ್ನೋವರ್ ರೇಷಿಯೋ ಎಂದರೇನು? ಅದು ಹೂಡಿಕೆದಾರನಿಗೆ ಏಕೆ ಮುಖ್ಯವಾಗುತ್ತದೆ? ವಿವಿಧ ಮ್ಯೂಚುವಲ್ ಫಂಡ್ಗಳ ಟರ್ನೋವರ್ ರೇಷಿಯೋ ಏಕೆ ಭಿನ್ನವಾಗಿರುತ್ತದೆ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.

ಎಂ.ಎಫ್ ಟರ್ನೋವರ್ ರೇಷಿಯೋ ಅಂದರೆ?: ಮ್ಯೂಚುವಲ್ ಫಂಡ್ಗಳನ್ನು ನಿರ್ವಹಿಸುವ ನಿರ್ವಾಹಕ, ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಷೇರುಗಳು, ಬಾಂಡ್ಗಳ ಖರೀದಿ ಮತ್ತು ಮಾರಾಟ ಮಾಡುತ್ತಾರೆ ಎಂಬುದನ್ನು ಈ ಅನುಪಾತವು ತಿಳಿಸುತ್ತದೆ. ಟರ್ನೋವರ್ ರೇಷಿಯೋ ಶೇಕಡವಾರು ಲೆಕ್ಕಾಚಾರದಲ್ಲಿ ಇದ್ದು, ನಿರ್ದಿಷ್ಟ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಮಾಹಿತಿ ಇದರಿಂದ ಸಿಗುತ್ತದೆ. ಒಂದು ಮ್ಯೂಚುವಲ್ ಫಂಡ್ ಅನ್ನು ಎಷ್ಟು ದಕ್ಷತೆಯಿಂದ ನಿರ್ವಹಿಸಲಾಗುತ್ತಿದೆ ಎನ್ನುವುದು ಈ ಅನುಪಾತದಿಂದ ಗೊತ್ತಾಗುತ್ತದೆ.

ಏಕೆ ಟರ್ನೋವರ್ ರೇಷಿಯೋ ಮುಖ್ಯ?

ವಹಿವಾಟು ವೆಚ್ಚ (ಟ್ರೇಡಿಂಗ್ ಕಾಸ್ಟ್): ನಿಧಿ ನಿರ್ವಾಹಕ ನಿರ್ದಿಷ್ಟ ಮ್ಯೂಚುವಲ್ ಫಂಡ್ನಲ್ಲಿ ಅತಿ ಹೆಚ್ಚು ಬಾರಿ ಷೇರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಅಂದರೆ ಫಂಡ್ ನಿರ್ವಹಣೆ ವೆಚ್ಚ, ಬ್ರೋಕರೇಜ್ ಶುಲ್ಕ ಹೆಚ್ಚಾಗುತ್ತದೆ. ಪರೋಕ್ಷವಾಗಿ ಇದು ನಿಮ್ಮ ಹೂಡಿಕೆ ಮೇಲಿನ ಒಟ್ಟಾರೆ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ.

ತೆರಿಗೆ ಭಾರ: ನಿರ್ದಿಷ್ಟ ಮ್ಯೂಚುವಲ್ ಫಂಡ್ನ ನಿಧಿ ನಿರ್ವಾಹಕ ಷೇರುಗಳು ಲಾಭದಲ್ಲಿದ್ದಾಗ ಅದನ್ನು ಮಾರಾಟ ಮಾಡಿದರೆ ಬಂಡವಾಳ ಗಳಿಕೆ ತೆರಿಗೆ (ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್) ಅನ್ವಯಿಸುತ್ತದೆ. ಪದೇ ಪದೇ ಷೇರು ಖರೀದಿ ಮತ್ತು ಮಾರಾಟ ಮಾಡುವುದರಿಂದ ತೆರಿಗೆ ಹೊರೆ ಹೆಚ್ಚಾಗಿ ನಿಮ್ಮ ಗಳಿಕೆಯ ಮೇಲೆ ಅದು ಪರಿಣಾಮ ಬೀರುತ್ತದೆ.

ನಿಧಿ ನಿರ್ವಾಹಕನ ಹೂಡಿಕೆ ಮಾದರಿ: ಟರ್ನೋವರ್ ರೇಷಿಯೋ ಕಡಿಮೆ ಇದ್ದಾಗ ನಿಧಿ ನಿರ್ವಾಹಕ ಉತ್ತಮ ಷೇರುಗಳನ್ನು ಖರೀದಿಸಿ ದೀರ್ಘಾವಧಿಯಲ್ಲಿ ಅವುಗಳಿಂದ ಲಾಭಗಳಿಸುವ ಉದ್ದೇಶ ಹೊಂದಿದ್ದಾರೆ ಎಂದು ಅಂದಾಜಿಸಬೇಕಾಗುತ್ತದೆ. ಅದೇ ರೀತಿ ಟರ್ನೋವರ್ ರೇಷಿಯೋ ಜಾಸ್ತಿ ಇದ್ದಾಗ ನಿಧಿ ನಿರ್ವಾಹಕ ಪದೇ ಪದೇ ಷೇರುಗಳ ಆಯ್ಕೆ ಬದಲಿಸುತ್ತಿದ್ದು ಹೆಚ್ಚೆಚ್ಚು ಲಾಭವನ್ನು ವೇಗವಾಗಿ ಗಳಿಸುವ ಇರಾದೆಯಲ್ಲಿದ್ದಾರೆ ಎಂದು ಲೆಕ್ಕಾಚಾರ ಮಾಡಬೇಕಾಗುತ್ತದೆ. (ಪಟ್ಟಿ ಗಮನಿಸಿ)

ಷೇರುಪೇಟೆ ಸೂಚ್ಯಂಕಗಳ ಅನುಕರಣೆ ಮಾಡಿ ಹೂಡಿಕೆ ಮಾಡುವ ಇಂಡೆಕ್ಸ್ ಫಂಡ್ಗಳಲ್ಲಿ (ಪ್ಯಾಸಿವ್ ಫಂಡ್ಗಳು) ಷೇರುಗಳನ್ನು ಖರೀದಿಸಿ ದೀರ್ಘಾವಧಿಯಲ್ಲಿ ಲಾಭ ಗಳಿಸುವ ಉದ್ದೇಶವಿರುವುದರಿಂದ ಇಲ್ಲಿ ಟರ್ನೋವರ್ ರೇಷಿಯೋ ಕಡಿಮೆ ಇರುತ್ತದೆ. ಆದರೆ ನಿಧಿ ನಿರ್ವಾಹಕರು ನಿರ್ವಹಣೆ ಮಾಡುವ ಆ್ಯಕ್ಟಿವ್ ಮ್ಯೂಚುವಲ್ ಫಂಡ್ಗಳ ಉದ್ದೇಶ ಷೇರು ಮಾರುಕಟ್ಟೆ ಸೂಚ್ಯಂಕಗಳಿಗಿಂತ ಹೆಚ್ಚು ಲಾಭ ಮಾಡಬೇಕು ಎನ್ನುವುದಾಗಿರುವುದರಿಂದ ಇಲ್ಲಿ ಟರ್ನೋವರ್ ರೇಷಿಯೋ ಹೆಚ್ಚಿರುತ್ತದೆ. ಇದಲ್ಲದೆ ಮಾರುಕಟ್ಟೆ ಸ್ಥಿತಿಗತಿ, ಉತ್ತಮ ಷೇರುಗಳ ಮೇಲೆ ದಿಢೀರ್ ಹೂಡಿಕೆ ಅವಕಾಶಗಳು, ರಿಸ್ಕ್ ನಿರ್ವಹಣೆ ಕಾರಣಕ್ಕೆ ಮ್ಯೂಚುವಲ್ ಫಂಡ್ ವಹಿವಾಟು ಜಾಸ್ತಿಯಾದರೆ ಅದು ಕೂಡ ಟರ್ನೋವರ್ ರೇಷಿಯೋ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚು ಟರ್ನೋವರ್ ರೇಷಿಯೋ ಬಗ್ಗೆ ಚಿಂತಿಸಬೇಕೇ?: ಟರ್ನೋವರ್ ಜಾಸ್ತಿ ಇದ್ದರೆ ಎಲ್ಲಾ ಸಂದರ್ಭಗಳಲ್ಲೂ ಅದರ ಬಗ್ಗೆ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಆದರೆ ಅದೇ ಬಗೆಯ ಮ್ಯೂಚುವಲ್ ಫಂಡ್ಗಿಂತ, ನೀವು ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ನ ಟರ್ನೋವರ್ ರೇಷಿಯೋ ಜಾಸ್ತಿ ಇದ್ದು, ಗಳಿಕೆಯೂ ಕಡಿಮೆ ಇದ್ದರೆ ಅದರ ಬಗ್ಗೆ ಗಮನ ನೀಡಬೇಕಾಗುತ್ತದೆ. ನಿಮ್ಮ ನಿಧಿ ನಿರ್ವಾಹಕ ಹೆಚ್ಚು ಬಾರಿ ಷೇರುಗಳ ಖರೀದಿ ಮತ್ತು ಮಾರಾಟ ಮಾಡಿದರೂ ಹೆಚ್ಚು ಲಾಭ ತಂದುಕೊಡಲು ವಿಫಲರಾದರೆ ಟರ್ನೋವರ್ ರೇಷಿಯೋ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ಟರ್ನೋವರ್ ರೇಷಿಯೋ ಮಾತ್ರ ಆಧರಿಸಿ ಹೂಡಿಕೆ ತೀರ್ಮಾನ ಬೇಡ: ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಟರ್ನೋವರ್ ರೇಷಿಯೋ ಜೊತೆಗೆ ಮ್ಯೂಚುವಲ್ ಫಂಡ್ನ ಗಳಿಕೆ ಸಾಮರ್ಥ್ಯ, ರಿಸ್ಕ್, ವೆಚ್ಚ ಅನುಪಾತ (ಎಕ್ಸ್ಪೆನ್ಸ್ ರೇಷಿಯೋ), ಫಂಡ್ ಮ್ಯಾನೇಜರ್ನ ಈ ಹಿಂದಿನ ಕಾರ್ಯಕ್ಷಮತೆ ಬಗ್ಗೆ ಗಮನಕೊಟ್ಟು ಮುಂದುವರಿಯಿರಿ. ಆದರೆ ಹೆಚ್ಚು ನಿರ್ವಹಣಾ ವೆಚ್ಚ, ತೆರಿಗೆ ಭಾರದ ಬಗ್ಗೆ ಗಮನವಿರಲಿ. ನೆನಪಿಡಿ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಟರ್ನೋವರ್ ರೇಷಿಯೋ ಮಾತ್ರವೇ ನಿಮ್ಮ ಮಾನದಂಡವಾಗದಿರಲಿ, ಬೇರೆ ಅನುಪಾತಗಳೊಂದಿಗೆ ಅದನ್ನು ತುಲನೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.