ಮಂಗಳವಾರ, ಜೂನ್ 2, 2020
27 °C

ಜಿಡಿಪಿ ಶೇ 1.1ಕ್ಕೆ ಕುಸಿತ ಸಂಭವ: ಎಸ್‌ಬಿಐ ಸಂಶೋಧನಾ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 1.1ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಸಂಶೋಧನಾ ವರದಿ ಅಂದಾಜು ಮಾಡಿದೆ.

2019–20ರಲ್ಲಿ ಜಿಡಿಪಿ ಶೇ 4.1ರಷ್ಟು ಇರುವ ಅಂದಾಜು ಮಾಡಲಾಗಿದೆ. ಇದೀಗ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಮೇಲೆ ಭಾರಿ ಪ್ರರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ.

ಲಾಕ್‌ಡೌನ್‌ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಆರ್ಥಿಕತೆಗೆ ₹ 12.1 ಲಕ್ಷ ಕೋಟಿ ನಷ್ಟವಾಗಲಿದೆ.

ಸ್ವಂತ ಉದ್ಯೋಗ ನಡೆಸುತ್ತಿರುವ 37.3 ಕೋಟಿ ಮಂದಿಯ ದಿನದ ಆದಾಯದಲ್ಲಿ ₹ 10 ಸಾವಿರ ಕೋಟಿ ಕಡಿಮೆ ಆಗಲಿದ್ದು, ಲಾಕ್‌ಡೌನ್‌ ಅವಧಿಗೆ ಒಟ್ಟಾರೆ ನಷ್ಟ ₹ 4.05 ಲಕ್ಷ ಕೋಟಿಗಳಷ್ಟಾಗಲಿದೆ. ಸಾಮಾನ್ಯ ಕಾರ್ಮಿಕರ ವರಮಾನ ನಷ್ಟ ₹ 1 ಲಕ್ಷ ಕೋಟಿಗಳಷ್ಟಾಗಲಿದೆ. ಹೀಗಾಗಿ ಯಾವುದೇ ರೀತಿಯ ವಿತ್ತೀಯ ಕೊಡುಗೆಯು ಕನಿಷ್ಠ ₹ 4 ಲಕ್ಷ ಕೋಟಿ ವರಮಾನ ನಷ್ಟ ತುಂಬಿಕೊಡುವಂತಿರಬೇಕು ಎಂದಿದೆ.

ನಿವ್ವಳ ತೆರಿಗೆ ವರಮಾನ ಕೊರತೆ ₹ 4.12 ಲಕ್ಷ ಕೋಟಿಗಳಷ್ಟಾಗಲಿದೆ. ರಾಜ್ಯಗಳ ತೆರಿಗೆ ವರಮಾನ ಕೊರತೆ ₹ 1.32 ಲಕ್ಷ ಕೋಟಿಗಳಷ್ಟಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು