ನನ್ನ ಮನೆಯ 900 ಚದರ ಅಡಿ ವಾಣಿಜ್ಯ ಉಪಯೋಗದ ಜಾಗವನ್ನು ತಿಂಗಳಿಗೆ ₹55 ಸಾವಿರ ಬಾಡಿಗೆಗೆ ವಾಣಿಜ್ಯ ಉಪಯೋಗಕ್ಕಾಗಿ ಕೊಟ್ಟಿರುತ್ತೇನೆ. ಇದಕ್ಕೆ ಶೇ 18ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ ಹಾಗೂ ಈ ಮೊತ್ತವನ್ನು ಕಡಿತಮಾಡಿ ಬಾಡಿಗೆ ಪಾವತಿಸುವುದಾಗಿ ಬಾಡಿಗೆದಾರರು ಹೇಳುತ್ತಿದ್ದಾರೆ. ಇದು ಜಿಎಸ್‌ಟಿ ಕಾಯ್ದೆ ಪ್ರಕಾರ ಸರಿಯೇ? ಹಾಗಿದ್ದಲ್ಲಿ ಜಿಎಸ್‌ಟಿ ಕಾಯ್ದೆಯ ಯಾವ ಭಾಗ ಇದಕ್ಕೆ ಅನ್ವಯಿಸುತ್ತದೆ? ನನಗೆ ಬೇರೆ ಯಾವುದೇ ಬಾಡಿಗೆ ಆದಾಯವಿಲ್ಲ, ಯಾವುದೇ ವಾಣಿಜ್ಯ ವ್ಯವಹಾರವೂ ಇರುವುದಿಲ್ಲ. ಹಾಗಾಗಿ ಜಿಎಸ್‌ಟಿ ನೋಂದಣಿ ನನಗೆ ಇಲ್ಲ. ನನ್ನ ಅರಿವಿನ ಪ್ರಕಾರ ಈ ವಾರ್ಷಿಕ ಬಾಡಿಗೆ ಮೊತ್ತ, ಜಿಎಸ್‌ಟಿ ಅಡಿ ನೋಂದಣಿ ಪಡೆಯಬೇಕಾದ ಮೊತ್ತಕ್ಕಿಂತ ಕಡಿಮೆ ಆಗಿರುವುದರಿಂದ ವಾಣಿಜ್ಯ ಬಾಡಿಗೆ ಆದಾಯಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲ. ಇದು ಸರಿಯೇ? ದಯವಿಟ್ಟು ತಿಳಿಸಿ.