‘ನಾವು 2022ರ ಏಪ್ರಿಲ್‌ನಲ್ಲಿ ನಿರ್ಮಾಣವಾಗುತ್ತಿರುವ ಫ್ಲ್ಯಾಟ್ ಒಂದನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದೆವು. ಪ್ರಸ್ತುತ ಆ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಏರಿಕೆಯಲ್ಲಿ ಇದೆ. ನಾವು ಖರೀದಿಸಿದ ಮೂಲ ಉದ್ದೇಶ ಹೂಡಿಕೆಗಾಗಿ ಇರುವುದರಿಂದ ಪ್ರಸ್ತುತ ಮಾರುಕಟ್ಟೆಯೂ ಉತ್ತಮ ಸ್ಥಿತಿಯಲ್ಲಿರುವ ಕಾರಣ ಈ ಆಸ್ತಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದೇವೆ. ಆಸ್ತಿ ಖರೀದಿಗೆ ಸಂಬಂಧಿಸಿ ಈಗಾಗಲೇ ಕರಾರು ಮಾಡಿಕೊಂಡಿದ್ದು ನಮ್ಮ ಹೆಸರಲ್ಲಿ ಫ್ಲ್ಯಾಟ್ ನೋಂದಣಿ ಆಗಬೇಕಾಗಿದೆ’.
ನಮಗಿರುವ ಪ್ರಶ್ನೆ ಏನೆಂದರೆ, ನಮ್ಮ ಹೆಸರಿಗೆ ಇನ್ನೂ ನೋಂದಣಿಯಾಗದ ಆಸ್ತಿ ಮಾರಾಟ ಮಾಡುವಾಗ ಯಾವ ವರ್ಗದ ತೆರಿಗೆ ಅನ್ವಯಿಸುತ್ತದೆ. ಇದಲ್ಲದೆ, ನಾವು ಪಾವತಿಸಿರುವ ಇಎಂಐ ಮೇಲಿನ ಬಡ್ಡಿಯನ್ನು ನಿರ್ಮಾಣ ವೆಚ್ಚದಲ್ಲಿ ಸೇರಿಸಬಹುದೇ. ಒಂದು ವೇಳೆ ತೆರಿಗೆ ಅನ್ವಯಿಸುವುದಿದ್ದರೆ, ಉಳಿತಾಯ ಸಾಧ್ಯವೇ?
ಕರುಣಾಕರ್, ಬೆಂಗಳೂರು