ಮಂಗಳವಾರ, ಏಪ್ರಿಲ್ 7, 2020
19 °C

ಆಲ್ಟೇರ್‌ ಸ್ಟಾರ್ಟ್‌ಅಪ್‌ ಚಾಲೆಂಜ್‌ ಬೆಂಗಳೂರಿಗೆ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ತಂತ್ರಜ್ಞಾನ ಕಂಪನಿ ಆಲ್ಟೇರ್‌ 2019ರ ಸ್ಟಾರ್ಟ್‌ಅಪ್‌ ಚಾಲೆಂಜ್‌ನ ವಿಜೇತರನ್ನು ಘೋಷಿಸಿದೆ. ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಮೊದಲ ಸ್ಥಾನ ಪಡೆದುಕೊಂಡಿದ್ದು, ₹ 1.75 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಮೋಟರ್‌ ಮತ್ತು ಚಾಸಿಸ್‌ನಲ್ಲಿ ಹೊಸ ವಿನ್ಯಾಸ ರೂಪಿಸಿರುವುದಕ್ಕೆ ಈ ಪ್ರಶಸ್ತಿ ಲಭಸಿದೆ. 

ಸ್ಟಾರ್ಟ್‌ಅಪ್‌ ಇಂಡಿಯಾದ ಸಹಯೋಗದೊಂದಿಗೆ ಆಲ್ಟೇರ್‌ ಈ ಕಾರ್ಯಕ್ರಮ ನಡೆಸುತ್ತಿದ್ದು, ಎಲ್ಲಾ ವಿಧದ ಉದ್ಯಮ ವಲಯಗಳಲ್ಲಿ ಹೊಸ ಬಗೆಯ ಆಲೋಚನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. 

‘ಆಲ್ಟೇರ್‌ ಹೈಪರ್‌ವರ್ಕ್ಸ್, ಆಲ್ಟೇರ್‌ ನಾಲೆಡ್ಜ್‌ ವರ್ಕ್ಸ್‌ನಂತಹ ತಂತ್ರಾಂಶಗಳ ನೆರವಿನಿಂದ ಮತ್ತು ಅಗತ್ಯ ಮಾರ್ಗದರ್ಶನದ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಲು ಕಂಪನಿ ನೆರವಾಗಲಿದೆ’ ಎಂದು ಆಲ್ಟೇರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ರಾವ್‌ ಅವರು ತಿಳಿಸಿದರು.

ಬೆಂಗಳೂರಿನ ಬ್ಲಿಂಕ್‌ ಐ ಲ್ಯಾಬ್ಸ್‌ ಎಲೆಕ್ಟ್ರಾನಿಕ್ಸ್‌ ಮತ್ತು ಪುಣೆಯ ಇಂಡಸ್‌ಟಿಲ್ಲ್ ಫಾರ್ಮಾ ಟೆಕ್‌ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿವೆ. 

ವಿಶಾಖಪಟ್ಟಣದ ಸೈಫ್ ಆಟೊಮೇಷನ್ಸ್‌ ಸರ್ವೀಸಸ್‌ ಎಲ್‌ಎಲ್‌ಪಿ ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)