ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಸ್ಟಾರ್ಟಪ್ ಬಾತುಕೋಳಿಯಂತಿದ್ದರೆ ಹುಲಿ ಬಾಯಿಂದ ನುಣುಚಿಕೊಳ್ಳಬಹುದು!

ಅಕ್ಷರ ಗಾತ್ರ

ನವದೆಹಲಿ: ಚಿಕ್ಕ ಕೊಳ. ಸ್ವಲ್ಪವೇ ನೀರಿದೆ. ಮೊಳಕಾಲಿನ ಉದ್ದದಷ್ಟು ಆಳವಿಲ್ಲ. ಪುಟ್ಟದೊಂದು ಬಾತುಕೋಳಿ ಈಜುತ್ತಿದೆ. ಸಿಕ್ಕಿದರೆ ಬಾಯಿ ಹಾಕಿಬಿಡೋಣ ಎಂದು ಹುಲಿಯೊಂದು ಕಾತರಿಸುತ್ತಿದೆ. ಇನ್ನೇನು ಹುಲಿ ತನ್ನತ್ತ ಬಂತು ಎನ್ನುವಾಗ ಮುಳುಗುವ ಬಾತುಕೋಳಿ ಮತ್ತೊಂದು ದಿಕ್ಕಿನಲ್ಲಿ ಎದ್ದು ಈಜಲು ಶುರು ಮಾಡುತ್ತದೆ.

ಅರೆ, ಕೈಗೆಟುಕುವ ದೂರದಲ್ಲಿ ತಪ್ಪಿಸಿಕೊಂಡಿತ್ತಲ್ಲ ಎಂದು ಹುಲಿ ಪುನಃ ತನ್ನ ಪ್ರಯತ್ನ ಮುಂದುವರಿಸುತ್ತದೆ. ಆದರೆ ಎಷ್ಟು ಪ್ರಯತ್ನಿಸಿದರೂ ಹುಲಿಗೆ ಬಾತುಕೋಳಿಯ ರುಚಿ ನೋಡಲು ಸಾಧ್ಯವಾಗುವುದಿಲ್ಲ.

ಸಣ್ಣ ಜಾಗದಲ್ಲಿ ಅಷ್ಟು ದೊಡ್ಡ ವ್ಯಾಘ್ರನ ಕೈಗೆ ಸಿಗದೆ ತನ್ನನ್ನು ಸಂರಕ್ಷಿಸಿಕೊಳ್ಳುವ ಬಾತುಕೋಳಿಯ ದೃಶ್ಯವಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಉದ್ಯಮಿ ಆನಂದ್‌ ಮಹೀಂದ್ರ ಹಂಚಿಕೊಂಡಿದ್ದಾರೆ.

ಯಾವ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಕೂಡ ಇದಕ್ಕಿಂತ ಉತ್ತಮವಾದ ಪಾಠ ಹೇಳಿಕೊಡಲು ಸಾಧ್ಯವಿಲ್ಲ ಎಂದು ಆನಂದ್‌ ಮಹೀಂದ್ರ ಬಣ್ಣಿಸಿದ್ದಾರೆ. ಬಾತುಕೋಳಿಯಂತೆ ಸ್ಟಾರ್ಟ್‌ಅಪ್‌ ಉದ್ಯಮವು ಸಣ್ಣ ಗಾತ್ರದಲ್ಲಿದ್ದರೆ, ಅತ್ಯಂತ ಚುರುಕಿನ ಚಟುವಟಿಕೆ ಹೊಂದಿದ್ದರೆ, ಕ್ಷಣಾರ್ಧದಲ್ಲಿ ಯೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವ ಚಾಣಕ್ಷತೆ ಇದ್ದರೆ ಹುಲಿ ಬಾಯಿಯಿಂದಲೇ ತಪ್ಪಿಸಿಕೊಳ್ಳುವ ಅವಕಾಶ ಸಿಗುತ್ತದೆ. ಇದು ಚಿಕ್ಕ ಗಾತ್ರದ ಉದ್ಯಮದ ಅನುಕೂಲವಾಗಿದೆ. ಹಾಗಾಗಿ ದೊಡ್ಡ ದೊಡ್ಡ ಕಂಪನಿಗಳು ಸ್ಟಾರ್ಟ್‌ ಅಪ್‌ ತಂಡಗಳಿಗೆ ಪ್ರಾಶಸ್ತ್ಯ ನೀಡಬೇಕು ಹಾಗೂ ಸ್ಟಾರ್ಟ್‌ಅಪ್‌ ಸಂಸ್ಕೃತಿಯನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದಿದ್ದಾರೆ.

ವಿಡಿಯೊ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT