ಮ್ಯೂಚುವಲ್ ಫಂಡ್ಗಳಲ್ಲಿ ಇರುವ ‘ಡೈರೆಕ್ಟ್’ ಹಾಗೂ ‘ರೆಗ್ಯುಲರ್’ ಎಂಬ ಪದಗಳು ಆರಂಭಿಕ ಹಂತದ ಹೂಡಿಕೆದಾರರಲ್ಲಿ ಒಂದಿಷ್ಟು ಗೊಂದಲ ಮೂಡಿಸುವುದು ಸಹಜ. ಏಜೆಂಟ್ ಮೂಲಕ ಹೂಡಿಕೆ ಆರಂಭಿಸುವವರು ಸಾಮಾನ್ಯವಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋ, ‘ರೆಗ್ಯುಲರ್’ ಫಂಡ್ಗಳಲ್ಲಿ ಹೂಡಿಕೆ ಮಾಡುವುದಿದೆ. ಆದರೆ ಮ್ಯೂಚುವಲ್ ಫಂಡ್ಗಳ ಬಗ್ಗೆ ಒಂದಿಷ್ಟು ಅರಿವು ಹೊಂದಿರುವವರು ತಮ್ಮ ಹೂಡಿಕೆಯನ್ನು ‘ಡೈರೆಕ್ಟ್’ ಫಂಡ್ಗಳಲ್ಲಿ ಮಾಡುತ್ತಾರೆ.

ರೆಗ್ಯುಲರ್ ಫಂಡ್ಗಳ ಮೂಲಕ ಮಾಡುವ ಹೂಡಿಕೆಗಳಿಗೆ ಪಾವತಿಸಬೇಕಿರುವ ವೆಚ್ಚ ತುಸು ಹೆಚ್ಚು. ಏಕೆಂದರೆ, ಹೂಡಿಕೆದಾರ ಹಾಗೂ ಆಸ್ತಿ ನಿರ್ವಹಣಾ ಕಂಪನಿಯ ನಡುವೆ ಸೇತುವೆಯಂತೆ ಕೆಲಸ ಮಾಡುವ ವ್ಯಕ್ತಿಗೆ ಒಂದಿಷ್ಟು ಕಮಿಷನ್ ಕೊಡಬೇಕಾದ್ದರಿಂದ ವೆಚ್ಚದಲ್ಲಿ ಸಹಜವಾಗಿಯೇ ಹೆಚ್ಚಳ ಆಗುತ್ತದೆ. ವೆಚ್ಚ ಹೆಚ್ಚಳದ ಪರಿಣಾಮವಾಗಿ ಹೂಡಿಕೆಯ ಮೇಲೆ ಸಿಗುವ ಲಾಭವೂ ತುಸು ಕಡಿಮೆ ಆಗುತ್ತದೆ. ಆದರೆ ಡೈರೆಕ್ಟ್ ಫಂಡ್ಗಳಲ್ಲಿ ವೆಚ್ಚವು ರೆಗ್ಯುಲರ್ ಫಂಡ್ಗಳಿಗಿಂತ ಕಡಿಮೆ, ಹಾಗೆಯೇ ಸಿಗುವ ಲಾಭದ ಪ್ರಮಾಣ ಕೂಡ ತುಸು ಜಾಸ್ತಿ ಇರುತ್ತದೆ.

ವಾಸ್ತವದಲ್ಲಿ, ವಿವಿಧ ಹೂಡಿಕೆ ಆ್ಯಪ್ಗಳು ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ರೆಗ್ಯುಲರ್ ಫಂಡ್ಗಳಿಗಿಂತ ಡೈರೆಕ್ಟ್ ಫಂಡ್ಗಳು ಹೆಚ್ಚು ಲಾಭದಾಯಕ ಎಂಬುದು ಹಲವರಿಗೆ ಗೊತ್ತಾಗಿದೆ. ಆದರೆ ಡೈರೆಕ್ಟ್ ಫಂಡ್ಗಳು ವಾಸ್ತವದಲ್ಲಿ ಎಷ್ಟರಮಟ್ಟಿಗೆ ಹೆಚ್ಚು ಲಾಭವನ್ನು ತಂದುಕೊಡುತ್ತವೆ?

ಇದನ್ನು ಲೆಕ್ಕಹಾಕಲು ಹಲವು ಕ್ಯಾಲ್ಕುಲೇಟರ್ಗಳು ಲಭ್ಯವಿವೆ. ಮೊಬಿಕ್ವಿಕ್ ವೆಬ್ಸೈಟ್ನಲ್ಲಿ ಲಭ್ಯವಿರುವ ಕ್ಯಾಲ್ಕುಲೇಟರ್ ಪ್ರಕಾರ ವ್ಯಕ್ತಿಯೊಬ್ಬ ಆರಂಭಿಕ ಮೊತ್ತವಾಗಿ ₹1000 ತೊಡಗಿಸಿ, ಪ್ರತಿ ತಿಂಗಳು ₹1,000 ಮೊತ್ತವನ್ನು ಎಸ್ಐಪಿ ರೂಪದಲ್ಲಿ ಐದು ವರ್ಷ ಹೂಡಿಕೆ ಮಾಡಿದರೆ, ರೆಗ್ಯುಲರ್ ಫಂಡ್ನಲ್ಲಿ ಆತ ₹73 ಸಾವಿರ ಒಗ್ಗೂಡಿಸಬಲ್ಲ. ಅದೇ ಮೊತ್ತವನ್ನು ಆತ ಡೈರೆಕ್ಟ್ ಫಂಡ್ನಲ್ಲಿ ತೊಡಗಿಸಿದರೆ ₹74,880 ಒಗ್ಗೂಡಿಸಬಲ್ಲ. ಅಂದರೆ ಆತನಿಗೆ ₹1,882 ಹೆಚ್ಚು ಲಾಭ ಸಿಗುತ್ತದೆ.

ಡೈರೆಕ್ಟ್ ಫಂಡ್ ಹಾಗೂ ರೆಗ್ಯುಲರ್ ಫಂಡ್ನಲ್ಲಿನ ಹೂಡಿಕೆಗಳಲ್ಲಿ ಇರುವ ವ್ಯತ್ಯಾಸವನ್ನು ಪೇಟಿಎಂ ಮನಿ ವೆಬ್ಸೈಟ್ ಇನ್ನೊಂದು ಬಗೆಯಲ್ಲಿ ವಿವರಿಸಿದೆ. ಆಸಕ್ತರು ತಾವು ಯಾವ ಆಸ್ತಿ ನಿರ್ವಹಣಾ ಕಂಪನಿಯ ಯಾವ ಫಂಡ್ನ ಬಗ್ಗೆ ಮಾಹಿತಿ ಬಯಸುತ್ತಿದ್ದೇವೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಅಲ್ಲಿ ರೆಗ್ಯುಲರ್ ಹಾಗೂ ಡೈರೆಕ್ಟ್ ಫಂಡ್ಗಳಿಗೆ ನಿಗದಿ ಮಾಡಿರುವ ವೆಚ್ಚದ ವಿವರ, ಅವುಗಳ ನಡುವಿನ ವ್ಯತ್ಯಾಸ ಎಷ್ಟು ಎಂಬುದರ ಮಾಹಿತಿ ಸಿಗುತ್ತದೆ.

₹10 ಲಕ್ಷ ತೊಡಗಿಸಿದರೆ ಡೈರೆಕ್ಟ್ ಫಂಡ್ಗಳು ರೆಗ್ಯುಲರ್ ಫಂಡ್ಗಳಿಗಿಂತ ಎಷ್ಟು ಮೊತ್ತವನ್ನು ಹೆಚ್ಚು ತಂದುಕೊಡಬಲ್ಲವು ಎಂಬ ಮಾಹಿತಿಯೂ ಲಭ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.