ಕೋಲ್ಕತ್ತ: ಬಂಡವಾಳ ಮಾರುಕಟ್ಟೆಯಲ್ಲಿ ಏರಿಳಿತವಿದ್ದರೂ, ಫ್ಲೆಕ್ಸಿ ಕ್ಯಾಪ್ ಫಂಡ್ಗಳಿಗೆ ಹೂಡಿಕೆದಾರರು ಆದ್ಯತೆ ನೀಡುತ್ತಿದ್ದಾರೆ. ಕಳೆದ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ಈ ಅಕ್ಟೋಬರ್ ವೇಳೆಗೆ ಫ್ಲೆಕ್ಸಿ ಕ್ಯಾಪ್ಗಳಲ್ಲಿ ಹೂಡಿಕೆ ಆಗಿರುವ ಮೊತ್ತದ ಸರಾಸರಿ ಮೌಲ್ಯ (ಎಎಯುಎಂ) ಶೇ 21.3ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಬಂಧನ್ ಲೈಫ್ ಇನ್ಶೂರೆನ್ಸ್ ಸೋಮವಾರ ತಿಳಿಸಿದೆ.

ಫ್ಲೆಕ್ಸಿ ಕ್ಯಾಪ್ ಫಂಡ್ಗಳು, ಲಾರ್ಜ್ಕ್ಯಾಪ್, ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಷೇರುಗಳಲ್ಲಿ ಹಣ ಹೂಡಿಕೆ ಮಾಡುತ್ತವೆ. ಮಾರುಕಟ್ಟೆಯ ಏರಿಳಿತವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ಅವಕಾಶ ನೀಡುತ್ತದೆ ಎಂದು ತಿಳಿಸಿದೆ.

‘ಫ್ಲೆಕ್ಸಿ ಕ್ಯಾಪ್ ಫಂಡ್ಗಳು ಫಂಡ್ ಮ್ಯಾನೇಜರ್ಗಳಿಗೆ, ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತವೆ. ಈ ಅನುಕೂಲವು ಮಾರುಕಟ್ಟೆಯ ಏರಿಕೆ ಮತ್ತು ಇಳಿಕೆಗೆ ತಕ್ಕಂತೆ ಫಂಡ್ಗಳನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ’ ಎಂದು ಬಂಧನ್ ಲೈಫ್ ಇನ್ಶೂರೆನ್ಸ್ನ ಈಕ್ವಿಟಿ ವಿಭಾಗದ ಮುಖ್ಯಸ್ಥ ಅವಿನಾಶ್ ಅಗರ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.