ಹೂಡಿಕೆಯ ಜಗತ್ತಿನಲ್ಲಿ ಬೇರೆ ಬೇರೆ ಮಾರುಕಟ್ಟೆ ಬಂಡವಾಳ ವರ್ಗಕ್ಕೆ ಸೇರಿದ (ಅಂದರೆ, ಮಿಡ್ಕ್ಯಾಪ್, ಸ್ಮಾಲ್ಕ್ಯಾಪ್ ಮತ್ತು ಲಾರ್ಜ್ಕ್ಯಾಪ್) ಕಂಪನಿಗಳಲ್ಲಿ ಹೂಡಿಕೆ ಮೊತ್ತವನ್ನು ಹಂಚಿಕೆ ಮಾಡುವುದು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಮಹತ್ವದ್ದಾಗುತ್ತದೆ. ಹೂಡಿಕೆ ಮೊತ್ತವನ್ನು ಭಿನ್ನ ವರ್ಗಗಳ ಕಂಪನಿಗಳಲ್ಲಿ ತೊಡಗಿಸುವ ಫಂಡ್ಗಳ ಪೈಕಿ ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿಕ್ಯಾಪ್ ಫಂಡ್ಗಳು ಭಿನ್ನವಾಗಿ ನಿಲ್ಲುತ್ತವೆ. ಮೇಲ್ನೋಟಕ್ಕೆ ಈ ಎರಡೂ ಬಗೆಯ ಫಂಡ್ಗಳು ಒಂದೇ ರೀತಿ ಕಂಡರೂ, ಅವು ಅನುಸರಿಸುವ ತತ್ತ್ವ ಬಹಳ ಭಿನ್ನ. ಈ ಎರಡೂ ಬಗೆಯ ಫಂಡ್ಗಳು ಭಿನ್ನ ಬಗೆಯ ಹೂಡಿಕೆದಾರರಿಗೆ ಹಾಗೂ ಭಿನ್ನವಾದ ಮಾರುಕಟ್ಟೆ ಸ್ಥಿತಿಗಳಿಗೆ ಸರಿಹೊಂದುತ್ತವೆ.

ರಚನೆಯಲ್ಲಿನ ವ್ಯತ್ಯಾಸ: ಈ ಎರಡು ಬಗೆಯ ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರ ಹಣವನ್ನು ಮಾರುಕಟ್ಟೆಯ ಭಿನ್ನ ವಲಯಗಳಲ್ಲಿ ಹೇಗೆ ತೊಡಗಿಸಬೇಕು ಎಂಬುದಕ್ಕೆ ಸಂಬಂಧಿಸಿದ ನಿಯಮಗಳ ಚೌಕಟ್ಟಿನಲ್ಲೇ ಮುಖ್ಯವಾದ ವ್ಯತ್ಯಾಸ ಇದೆ. ಫ್ಲೆಕ್ಸಿಕ್ಯಾಪ್ ಫಂಡ್ನಲ್ಲಿ ಹೂಡಿಕೆದಾರರ ಹಣವನ್ನು ಲಾರ್ಜ್ಕ್ಯಾಪ್, ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ವಲಯದ ಷೇರುಗಳಲ್ಲಿ ತೊಡಗಿಸುವ ವಿಚಾರದಲ್ಲಿ ನಿಧಿ ನಿರ್ವಾಹಕರಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಇಲ್ಲಿ ಅವರಿಗೆ ಯಾವುದೇ ಒಂದು ವಲಯದಲ್ಲಿ ಕನಿಷ್ಠ ಇಂತಿಷ್ಟು ಪ್ರಮಾಣದಲ್ಲಿ ಅಥವಾ ಗರಿಷ್ಠ ಇಂತಿಷ್ಟು ಪ್ರಮಾಣದವರೆಗೆ ಮಾತ್ರ ಹಣ ತೊಡಗಿಸಬೇಕು ಎಂಬ
ನಿರ್ಬಂಧ ಇರುವುದಿಲ್ಲ. ಮಾರುಕಟ್ಟೆ ಮೌಲ್ಯ, ಕಂಪನಿಗಳ ಗಳಿಕೆಯ ಮುನ್ನೋಟ ಹಾಗೂ ಆರ್ಥಿಕ ಬದಲಾವಣೆಗಳನ್ನು ಆಧರಿಸಿ ಹೂಡಿಕೆಯಲ್ಲಿ ಮಾರ್ಪಾಡು ತರಲು ನಿಧಿ ನಿರ್ವಾಹಕರಿಗೆ ಸ್ವಾತಂತ್ರ್ಯ ಇರುತ್ತದೆ.

ಆದರೆ ಮಲ್ಟಿಕ್ಯಾಪ್ ಫಂಡ್ಗಳು ಈ ರೀತಿ ಅಲ್ಲ. ಇಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳ ಅನ್ವಯ, ಲಾರ್ಜ್ಕ್ಯಾಪ್, ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ವರ್ಗದ ಷೇರುಗಳಲ್ಲಿ ಕನಿಷ್ಠ ತಲಾ ಶೇಕಡ 25ರಷ್ಟು ಮೊತ್ತವನ್ನು ತೊಡಗಿಸಬೇಕಾಗುತ್ತದೆ. ಇನ್ನುಳಿದ ಶೇ 25ರಷ್ಟು ಮೊತ್ತವನ್ನು ನಿಧಿ ನಿರ್ವಾಹಕರು ತಮ್ಮ ವಿವೇಚನೆ ಬಳಸಿ ತೊಡಗಿಸಬಹುದು. ಬೇರೆ ಬೇರೆ ವರ್ಗದ ಷೇರುಗಳಲ್ಲಿ ನಿರ್ದಿಷ್ಟ ಪ್ರಮಾಣದ ಹಣವನ್ನು ಕಡ್ಡಾಯವಾಗಿ ತೊಡಗಿಸಬೇಕು ಎಂಬ ನಿಯಮವು ಎಲ್ಲ ಸಂದರ್ಭಗಳಲ್ಲಿಯೂ ಮಾರುಕಟ್ಟೆಯ ಎಲ್ಲ ವರ್ಗಗಳ ಕಂಪನಿಗಳಲ್ಲಿ ಸಮತೋಲನದ ಹೂಡಿಕೆಯನ್ನು ಖಾತರಿಪಡಿಸುತ್ತದೆ.

ಹೂಡಿಕೆಯ ಹಿಂದೆ ತಾತ್ತ್ವಿಕತೆ: ಫ್ಲೆಕ್ಸಿಕ್ಯಾಪ್ ಫಂಡ್ಗಳಲ್ಲಿ ಹೂಡಿಕೆಯ ಕುರಿತಾದ ತೀರ್ಮಾನ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನಿಧಿ ನಿರ್ವಾಹಕರಿಗೆ ಇರುತ್ತದೆ. ನಿಧಿ ನಿರ್ವಾಹಕರು ನಡೆಸುವ ಅಧ್ಯಯನ, ಅವರು ಅರ್ಥ ವ್ಯವಸ್ಥೆಯ ಬಗ್ಗೆ ಹೊಂದಿರುವ ಮುನ್ನೋಟ, ಬಂಡವಾಳ ಮಾರುಕಟ್ಟೆಯ ಭಿನ್ನ ವರ್ಗಗಳಿಗೆ ಸೇರಿದ ಷೇರುಗಳಲ್ಲಿ ಸಿಗಬಹುದಾದ ಲಾಭದ ಬಗ್ಗೆ ಅವರು ಹೊಂದಿರುವ ಗ್ರಹಿಕೆ ಆಧರಿಸಿ ಫಂಡ್ನ ಪೋರ್ಟ್ಫೋಲಿಯೊ ರೂಪುಗೊಳ್ಳುತ್ತದೆ. ಹೂಡಿಕೆಯ ವಿಚಾರದಲ್ಲಿ ಇರುವ ಸ್ವಾತಂತ್ರ್ಯದ ಕಾರಣದಿಂದಾಗಿ, ಹೂಡಿಕೆ ಮೊತ್ತವು ಒಂದು ಅಥವಾ ಎರಡು ವರ್ಗಗಳಿಗೆ ಸೇರಿದ ಷೇರುಗಳಲ್ಲಿ ಹೆಚ್ಚು ವಿನಿಯೋಗ ಆಗಬಹುದು.

ಉದಾಹರಣೆಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಿದ್ದಾಗ ಲಾರ್ಜ್ಕ್ಯಾಪ್ ಫಂಡ್ಗಳಲ್ಲಿ ಹೆಚ್ಚು ಮೊತ್ತ ವಿನಿಯೋಗ ಆಗಬಹುದು. ಮಾರುಕಟ್ಟೆಯಲ್ಲಿ ಬೆಳವಣಿಗೆ ಹೆಚ್ಚು ಕಾಣುವ ಸಂದರ್ಭಗಳಲ್ಲಿ ಹೂಡಿಕೆ ಮೊತ್ತವು ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ವರ್ಗದ ಷೇರುಗಳಲ್ಲಿ ಜಾಸ್ತಿ ವಿನಿಯೋಗ ಆಗಬಹುದು. ಆದರೆ, ಹೂಡಿಕೆಯಲ್ಲಿ ವೈವಿಧ್ಯ ಇರಬೇಕು ಎಂದು ಬಯಸುವವರಿಗೆ ಮಲ್ಟಿಕ್ಯಾಪ್ ಫಂಡ್ಗಳು ಹೆಚ್ಚು ಇಷ್ಟವಾಗಬಹುದು. ಈ ಬಗೆಯ ಫಂಡ್ಗಳು ಬಂಡವಾಳ ಮಾರುಕಟ್ಟೆಯ ಎಲ್ಲ ವಲಯಗಳಲ್ಲಿ ಹಣ ತೊಡಗಿಸುತ್ತವೆ, ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ವರ್ಗದ ಕಂಪನಿಗಳಲ್ಲಿ ಕೂಡ ಹಣ ತೊಡಗಿಸುತ್ತವೆ. ಇದೇ ಸಂದರ್ಭದಲ್ಲಿ ಅವು ಲಾರ್ಜ್ಕ್ಯಾಪ್ ವಲಯದ ಕಂಪನಿಗಳಲ್ಲಿಯೂ ಅರ್ಥಪೂರ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿರುತ್ತವೆ. ಇಲ್ಲಿ ನಿಧಿ ನಿರ್ವಾಹಕರು ಕೆಲವೊಂದಿಷ್ಟು ತೀರ್ಮಾನಗಳನ್ನು ತಾವೇ ತೆಗೆದುಕೊಳ್ಳುತ್ತಾರಾದರೂ, ಅದು ನಿಗದಿತವಾದ ಹೂಡಿಕೆ ಚೌಕಟ್ಟಿನ ವ್ಯಾಪ್ತಿಯನ್ನು ಮೀರುವುದಿಲ್ಲ.

ಪೋರ್ಟ್ಫೋಲಿಯೊ ಹೇಗಿರುತ್ತದೆ?: ಫ್ಲೆಕ್ಸಿಕ್ಯಾಪ್ ಫಂಡ್ಗಳ ವಿಚಾರದಲ್ಲಿ ಹೂಡಿಕೆಗೆ ಬಹಳ ನಿರ್ಬಂಧಗಳು ಇರುವುದಿಲ್ಲವಾದ ಕಾರಣದಿಂದಾಗಿ, ಅವು ಒಂದೇ ವರ್ಗದ ಕಂಪನಿಗಳ ಷೇರುಗಳಲ್ಲಿ ಹೆಚ್ಚಿನ ಮೊತ್ತವನ್ನು ತೊಡಗಿಸಬಹುದು. ಉದಾಹರಣೆಗೆ, ಮಾರುಕಟ್ಟೆಯು ಬಹಳ ಚಂಚಲವಾಗಿರುವ ಸಂದರ್ಭಗಳಲ್ಲಿ ಈ ಬಗೆಯ ಫಂಡ್ಗಳು ಲಾರ್ಜ್ಕ್ಯಾಪ್ ಕಂಪನಿಗಳಲ್ಲಿ ಶೇಕಡ 70ರಿಂದ ಶೇ 80ರಷ್ಟು ಹಣ ತೊಡಗಿಸಬಹುದು.

ಆರ್ಥಿಕ ಸ್ಥಿತಿಯು ಬಹಳ ಅನುಕೂಲಕರವಾದ ಸಂದರ್ಭದಲ್ಲಿ ಅವು ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಕಂಪನಿಗಳಲ್ಲಿ ಹೆಚ್ಚಿನ ಮೊತ್ತ ಹಂಚಿಕೆ ಮಾಡಬಹುದು. ಬದಲಾವಣೆಗೆ ಇರುವ ಈ ಅವಕಾಶವು ಚಂಚಲತೆ ಹೆಚ್ಚಿರುವ ಸಂದರ್ಭಗಳಲ್ಲಿ, ಹೂಡಿಕೆಯ ಹಣ ಕರಗುವ ಅಪಾಯವನ್ನು ತಗ್ಗಿಸುತ್ತದೆ. ಅಲ್ಲದೆ, ಹೂಡಿಕೆಗೆ ಹೊಸ ಅವಕಾಶಗಳು ಬಂದಾಗ ಅದನ್ನು ತಕ್ಷಣ ಬಳಸಿಕೊಳ್ಳಲು ನೆರವಾಗುತ್ತದೆ.

ಆದರೆ ಮಲ್ಟಿಕ್ಯಾಪ್ ಫಂಡ್ಗಳು ಹೂಡಿಕೆಯ ವಿಚಾರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಬಂಡವಾಳ ಮಾರುಕಟ್ಟೆಯ ಯಾವುದೇ ಒಂದು ವರ್ಗದ ಕಂಪನಿಗಳು ಹೂಡಿಕೆಯಲ್ಲಿ ಹೆಚ್ಚಿನ ಪ್ರಾಧಾನ್ಯ ಪಡೆಯದಂತೆ, ನಿಗದಿತ ಮಿತಿಗಿಂತ ಹೆಚ್ಚಿನ ಪಾಲನ್ನು ಪಡೆಯದಂತೆ ನೋಡಿಕೊಳ್ಳುತ್ತವೆ. ಈ ಸಮತೋಲನದ ನಡೆಯು ಯಾವುದೇ ಒಂದು ವಲಯಕ್ಕೆ ಅತಿಯಾದ ಪ್ರಮಾಣದಲ್ಲಿ ಹಣದ ಹೂಡಿಕೆ ಆಗದಂತೆ ನೋಡಿಕೊಳ್ಳುತ್ತದೆ. ಆದರೆ, ಒಂದು ವರ್ಗದ ಷೇರುಗಳ ಮೌಲ್ಯವು ಬಹಳ ಹೆಚ್ಚಾದರೆ ಅದರಿಂದ ಸಿಗಬಹುದಾದ ಲಾಭದ ಪ್ರಮಾಣ ಕೂಡ ಮಿತಿಯಲ್ಲಿ ಇರುತ್ತದೆ.

ಹೂಡಿಕೆಯ ಅವಧಿ ಮತ್ತು ಲಾಭದ ಬಗೆ: ಈ ಎರಡು ಬಗೆಯ ಫಂಡ್ಗಳಲ್ಲಿ ಇರುವ ಈ ವ್ಯತ್ಯಾಸಗಳು ಇವು ದೀರ್ಘಾವಧಿಯಲ್ಲಿ ನೀಡುವ ಲಾಭದ ಪ್ರಮಾಣದ ಮೇಲೆಯೂ ಪರಿಣಾಮ ಬೀರುತ್ತವೆ. ಫ್ಲೆಕ್ಸಿಕ್ಯಾಪ್ ಫಂಡ್ಗಳನ್ನು ಮಧ್ಯಮ ಅವಧಿಯಾದ 3ರಿಂದ 4 ವರ್ಷಗಳನ್ನು ಗಮನದಲ್ಲಿ ಇರಿಸಿಕೊಂಡು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ, ಈ ಫಂಡ್ಗಳು ಹೂಡಿಕೆದಾರರ ಹಣವನ್ನು ಬಹಳ ಕ್ರಿಯಾಶೀಲವಾಗಿ ತೊಡಗಿಸುವುದರಿಂದಾಗಿ, ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು ಹಾಗೂ ಅಲ್ಲಿನ ಚಂಚಲತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಮಲ್ಟಿಕ್ಯಾಪ್ ಫಂಡ್ಗಳು ದೀರ್ಘಾವಧಿಯಲ್ಲಿ, ಅಂದರೆ 5ರಿಂದ 6 ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆಯ ಅವಧಿಯಲ್ಲಿ ನಿಜಕ್ಕೂ ಹೆಚ್ಚಿನ ಪ್ರಯೋಜನ ತಂದುಕೊಡಬಲ್ಲವು. ಇಷ್ಟು ದೀರ್ಘ ಅವಧಿಗೆ ಹಣ ತೊಡಗಿಸಿದಾಗ ಸ್ಮಾಲ್ಕ್ಯಾಪ್ ಮತ್ತು ಮಿಡ್ಕ್ಯಾಪ್ ವರ್ಗದ ಷೇರುಗಳ ಮೌಲ್ಯವರ್ಧನೆಯ ಸಾಧ್ಯತೆಯು ಹೆಚ್ಚಿನ ಮಟ್ಟದಲ್ಲಿರುತ್ತದೆ. ಮಾರುಕಟ್ಟೆಯ ಹೆಚ್ಚಿನ ವಲಯಗಳಲ್ಲಿ ಹಣ ತೊಡಗಿಸುವುದರಿಂದ, ಪ್ರವರ್ಧಮಾನಕ್ಕೆ ಬರುತ್ತಿರುವ ಕಂಪನಿಗಳಿಂದ ಹೆಚ್ಚಿನ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲು ಸಂಯಮ ಬೇಕು. ಈ ಬಗೆಯ ಹೂಡಿಕೆಯು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯನ್ನು ಅರ್ಥಪೂರ್ಣವಾಗಿ ಹೆಚ್ಚಿಸಬಲ್ಲದು.

ಇಷ್ಟೆಲ್ಲ ಹೇಳಿದ ನಂತರವೂ, ಹೂಡಿಕೆ ಮಾಡುವ ವ್ಯಕ್ತಿಯು ಎಷ್ಟರಮಟ್ಟಿಗೆ ರಿಸ್ಕ್ ತೆಗೆದುಕೊಳ್ಳಬಲ್ಲ, ಎಷ್ಟು ಅವಧಿಗೆ ಹೂಡಿಕೆ ಮುಂದುವರಿಸಬಲ್ಲ, ಮಾರುಕಟ್ಟೆಯ ಏರಿಳಿತಗಳನ್ನು ಎಷ್ಟರಮಟ್ಟಿಗೆ ತಾಳಿಕೊಳ್ಳಬಲ್ಲ ಎಂಬುದನ್ನು ಆಧರಿಸಿ ಫಂಡ್ ಆಯ್ಕೆ ಮಾಡಬೇಕಾಗುತ್ತದೆ. ಈ ಎರಡೂ ಬಗೆಯ ಫಂಡ್ಗಳಲ್ಲಿ ಹೂಡಿಕೆಯನ್ನು ಶಿಸ್ತಿನಿಂದ, ಅಧ್ಯಯನದ ಮೂಲಕ ನಿರ್ವಹಿಸಿದರೆ ಹೂಡಿಕೆದಾರರಿಗೆ ದೇಶದ ಬಂಡವಾಳ ಮಾರುಕಟ್ಟೆಗಳ ವಿಕಾಸದ ಪ್ರಕ್ರಿಯೆಯ ಭಾಗವಾಗಲು ಅವಕಾಶ ಸಿಗುತ್ತದೆ. ಅಲ್ಲದೆ, ಅವರಿಗೆ ಸಂಪತ್ತು ಸೃಷ್ಟಿಯ ತಮ್ಮ ಗುರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ.

ಲೇಖಕಿ ದಿ ವೆಲ್ತ್ ಕಂಪನಿ ಮ್ಯೂಚುವ್ಲ್ ಫಂಡ್ನ ಈಕ್ವಿಟಿ ವಿಭಾಗದ ಮುಖ್ಯ ಹೂಡಿಕೆ ಅಧಿಕಾರಿ

ಹೂಡಿಕೆದಾರರಿಗೆ ಯಾವುದು ಸೂಕ್ತವಾಗಬಹುದು?

ಯಾವುದೇ ವಯೋಮಾನಕ್ಕೆ ಸೇರಿದವರಿಗೆ ಹಾಗೂ ಮೊದಲ ಬಾರಿಗೆ ಹೂಡಿಕೆ ಆರಂಭಿಸುತ್ತಿರುವವರಿಗೆ ಫ್ಲೆಕ್ಸಿಕ್ಯಾಪ್ ಫಂಡ್ಗಳು ಹೆಚ್ಚು ಉತ್ತಮ. ಈ ಬಗೆಯ ಫಂಡ್ಗಳ ಮೂಲಕ ಹಣ ತೊಡಗಿಸಿದಾಗ ಮಾರುಕಟ್ಟೆಯ ಅಪಾಯಗಳನ್ನು ಸಕ್ರಿಯವಾಗಿ ನಿರ್ವಹಿಸುವುದರ ಪ್ರಯೋಜನ ಅವರಿಗೆ ಸಿಗುತ್ತದೆ. ಈ ಬಗೆಯ ಫಂಡ್ಗಳನ್ನು ನಿರ್ವಹಿಸುವವರು ಹೂಡಿಕೆಯ ಪ್ರಮಾಣವನ್ನು ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಬದಲಾಯಿಸುವ ಕೆಲಸ ಮಾಡುತ್ತಾರೆ. ಈ ವರ್ಗದ ಫಂಡ್ಗಳು ಹೊಸ ಹೂಡಿಕೆದಾರರಿಗೆ ಷೇರುಪೇಟೆ ಹೂಡಿಕೆಯನ್ನು ಅದರಲ್ಲಿನ ಚಂಚಲತೆಗೆ ಹೆಚ್ಚು ಒಡ್ಡಿಕೊಳ್ಳದೆಯೇ ಮುಂದುವರಿಸಲು ನೆರವಾಗುತ್ತವೆ.

ಮಲ್ಟಿಕ್ಯಾಪ್ ಫಂಡ್ಗಳು ಭಿನ್ನ. ಇವು ಬಂಡವಾಳ ಮಾರುಕಟ್ಟೆಯ ವಿಭಿನ್ನ ವರ್ಗಗಳ ಕಂಪನಿಗಳಲ್ಲಿ ಹಣ ತೊಡಗಿಸುತ್ತವೆ; ಹೆಚ್ಚು ವೈವಿಧ್ಯದಿಂದ ಕೂಡಿದ ಹೂಡಿಕೆ ಬಯಸುವವರಿಗೆ ಇವು ಸರಿಹೊಂದುತ್ತವೆ. ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಕಂಪನಿಗಳಲ್ಲಿ ಈ ವರ್ಗದ ಫಂಡ್ಗಳು ಹಣ ತೊಡಗಿಸುತ್ತವೆಯಾದ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ಒಂದಿಷ್ಟು ಏರಿಳಿತಗಳು ಇಲ್ಲಿ ಕಾಣುತ್ತದೆಯಾದರೂ ಬಹಳ ಉತ್ತಮ ಗುಣಮಟ್ಟದ ಅಧ್ಯಯನ ಆಧರಿಸಿ ಷೇರುಗಳನ್ನು ಆಯ್ಕೆ ಮಾಡಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಡುವ ಅವಕಾಶ ಈ ಬಗೆಯ ಫಂಡ್ಗಳಲ್ಲಿ ಇರುತ್ತದೆ. ಯುವ ಹೂಡಿಕೆದಾರರಿಗೆ ಹೊಸಬರಿಗೆ ಕೂಡ ಮಲ್ಟಿಕ್ಯಾಪ್ ಫಂಡ್ಗಳು ಹೆಚ್ಚು ಆಸಕ್ತಿ ಮೂಡಿಸಬಹುದು.

ಹೆಚ್ಚಿನ ಅವಧಿಗೆ ಹೂಡಿಕೆ ಮಾಡಲು ಅವರಿಗೆ ಇರುವ ಅವಕಾಶದ ಕಾರಣಕ್ಕೆ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಅವರಿಗೆ ಇರುವ ಸಾಮರ್ಥ್ಯದ ಕಾರಣಕ್ಕೆ ಅವರು ಈ ವರ್ಗದ ಫಂಡ್ಗಳ ಮೂಲಕ ಸ್ಮಾಲ್ಕ್ಯಾಪ್ ಕಂಪನಿಗಳ ದೀರ್ಘಾವಧಿ ಬೆಳವಣಿಗೆ ಸಾಧ್ಯತೆಯ ಲಾಭ ಪಡೆಯಲು ಸೂಕ್ತರಾಗುತ್ತಾರೆ. ಇದೇ ಹೊತ್ತಿನಲ್ಲಿ ಅವರಿಗೆ ಲಾರ್ಜ್ಕ್ಯಾಪ್ ಕಂಪನಿಗಳಲ್ಲಿನ ಸ್ಥಿರತೆಯ ಪ್ರಯೋಜನ ಕೂಡ ದಕ್ಕುತ್ತಿರುತ್ತದೆ. ಹೂಡಿಕೆದಾರರು ಈಕ್ವಿಟಿ ವಿಭಾಗಕ್ಕೆ ನಿಗದಿ ಮಾಡುವ ಮೊತ್ತದಲ್ಲಿ ಈ ಎರಡೂ ವರ್ಗದ ಮ್ಯೂಚುವಲ್ ಫಂಡ್ಗಳು ಮಹತ್ವದ ಪಾತ್ರ ವಹಿಸುತ್ತವೆ. ವೃತ್ತಿಪರ ನಿರ್ವಹಣೆಯ ಬಂಡವಾಳ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ ಸಾಧ್ಯವಾಗುವ ಹೂಡಿಕೆಯನ್ನುಬಯಸುವವರಿಗೆ ಫ್ಲೆಕ್ಸಿಕ್ಯಾಪ್ ಫಂಡ್ಗಳು ಹೂಡಿಕೆಯ ಪ್ರಮುಖ ಮಾರ್ಗವಾಗಬಲ್ಲವು. ವಿವಿಧ ವರ್ಗಗಳಿಗೆ ಸೇರಿದ ಕಂಪನಿಗಳ ಬೆಳವಣಿಗೆಯಲ್ಲಿ ನಂಬಿಕೆ ಇರುವವರಿಗೆ ಮಲ್ಟಿಕ್ಯಾಪ್ ಫಂಡ್ಗಳು ಪೂರಕ ಹೂಡಿಕೆಯಾಗಿ ಒದಗಿಬರಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.