ನವದೆಹಲಿ: ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಸಂಭ್ರಮದಲ್ಲಿರುವ ಭಾರತ ಮಹಿಳಾ ತಂಡದ ಆಟಗಾರ್ತಿಯರಿಗೆ ಗುರುವಾರ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತ ಒಲಿಯುವ ನಿರೀಕ್ಷೆ ಇದೆ.

ಒಟ್ಟು 277 ಆಟಗಾರ್ತಿಯರು ಬಿಡ್ನಲ್ಲಿದ್ದಾರೆ. ಅದರಲ್ಲಿ ಭಾರತದ 194 ಮತ್ತು 83 ವಿದೇಶಿ ಆಟಗಾರ್ತಿಯರು ಇದ್ದಾರೆ. ಈ ಬಿಡ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ತನ್ನ ಬೌಲಿಂಗ್ ವಿಭಾಗವನ್ನು ಬಲಗೊಳಿಸುವತ್ತ ಚಿತ್ತ ನೆಟ್ಟಿದೆ.

ಆರ್ಸಿಬಿಯ ಪರ್ಸ್ನಲ್ಲಿ ₹ 6.15 ಕೋಟಿ ಮತ್ತು ಒಂದು ರೈಟ್ ಟು ಮ್ಯಾಚ್ ಕಾರ್ಡ್ ಇದೆ. ತಂಡದ ನಾಯಕಿ ಸ್ಮೃತಿ ಮಂದಾನ (₹ 3.5ಕೋಟಿ), ರಿಚಾ ಘೋಷ್ (₹ 2.75 ಕೋಟಿ), ಎಲಿಸ್ ಪೆರಿ (₹ 2 ಕೋಟಿ) ಮತ್ತು ಶ್ರೇಯಾಂಕಾ ಪಾಟೀಲ (₹ 60 ಲಕ್ಷ ) ಅವರನ್ನು ಉಳಿಸಿಕೊಳ್ಳಲು ಆರ್ಸಿಬಿಯು ಒಟ್ಟು ₹ 8.85 ಕೋಟಿ ಖರ್ಚು ಮಾಡಿದೆ.

ಬೆಂಗಳೂರು ತಂಡವು ತನ್ನ ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲು ಮಧ್ಯಮವೇಗಿ ರೇಣುಕಾ ಸಿಂಗ್, ಲಾರೆನ್ ಬೆಲ್ ಅಥವಾ ಕ್ರಾಂತಿ ಗೌಡ್ ಅವರನ್ನು ಸೆಳೆದುಕೊಳ್ಳಲು ಪ್ರಯತ್ನಿಸಬಹುದು.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಳೆದ ಮೂರು ಆವೃತ್ತಿಗಳಲ್ಲಿ ಟಾಪ್ ಎರಡರಲ್ಲಿ ಸ್ಥಾನ ಪಡದಿವೆ.

ಅಮೆಲಿಯಾ ಕೇರ್, ನ್ಯಾಟ್ ಶಿವರ್ ಬ್ರಂಟ್ ಮತ್ತು ಹೇಯಲಿ ಮ್ಯಾಥ್ಯೂಸ್ ಅವರನ್ನು ಖರೀದಿಸಲು ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಗುಜರಾತ್ ಜೈಂಟ್ಸ್ ತಂಡವು ತನ್ನ ತಂಡವನ್ನು ಬಲಾಢ್ಯಗೊಳಿಸಲು ಹೆಚ್ಚು ಪ್ರಯತ್ನಿಸಲಿದೆ. ಒಟ್ಟು ₹ 9 ಕೋಟಿ ಮತ್ತು ಮೂರು ಆರ್ಟಿಎಂ ಅವರ ಖಾತೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.