ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆಯೊಂದಿಗೆ ದಿನದ ವಹಿವಾಟು ಕೊನೆಯಾಗಿದೆ. ಹೂಡಿಕೆದಾರರು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಖರೀದಿಗೆ ಒಲವು ತೋರಿದ್ದರಿಂದ ಮಂಗಳವಾರ ಷೇರುಪೇಟೆ ಸೂಚ್ಯಂಕ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 50 ಶೇ 0.54ರಷ್ಟು (78.70 ಅಂಶ) ಹೆಚ್ಚಳವಾಗಿ 14,563 ಅಂಶಗಳು ತಲುಪಿದರೆ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶೇ 0.5ರಷ್ಟು (247.79 ಅಂಶ) ಗಳಿಕೆಯೊಂದಿಗೆ 49,517.11 ಅಂಶಗಳಲ್ಲಿ ವಹಿವಾಟು ಮುಗಿಸಿತು.

ಭಾರತದಲ್ಲಿ ಕೋವಿಡ್–19 ಲಸಿಕೆ ಲಭ್ಯತೆಯ ಕಾರಣದಿಂದಲೂ ಮಾರುಕಟ್ಟೆಯಲ್ಲಿ ಖರೀದಿಯ ಉತ್ಸಾಹ ಕಂಡು ಬಂದಿದೆ. ನಿಫ್ಟಿ 50 ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರಮವಾಗಿ ಶೇ 3.2 ಮತ್ತು ಶೇ 2ರಷ್ಟು ಏರಿಕೆ ದಾಖಲಿಸಿದೆ.

ಬೆಳಗಿನ ವಹಿವಾಟಿನಲ್ಲಿ ಶೇ 1ರಷ್ಟು ಇಳಿಕೆಯಾಗಿದ್ದ ನಿಫ್ಟಿ ಬ್ಯಾಂಕ್ ಸೂಚ್ಯಂಕ, ಶೇ 1.1ರಷ್ಟು ಹೆಚ್ಚಳದೊಂದಿಗೆ ವಹಿವಾಟು ಅಂತ್ಯವಾಗಿದೆ. ನಿಫ್ಟಿ ಸಾರ್ವಜನಿಕ ವಲಯದ ಬ್ಯಾಂಕ್ ಸೂಚ್ಯಂಕ ಶೇ 6ರಷ್ಟು ಏರಿಕೆಯಾಗಿ 10 ತಿಂಗಳ ಗರಿಷ್ಠ ಮಟ್ಟ ತಲುಪಿತು.

ಷೇರು ಹಿಂಪಡೆಯುವ ಪ್ರಸ್ತಾವನೆ ಪರಿಗಣಿಸುವುದಾಗಿ ಗೇಯ್ಲ್ (ಇಂಡಿಯಾ) ಲಿಮಿಟೆಡ್ ಹೇಳಿರುವ ಬೆನ್ನಲ್ಲೇ ಅದರ ಷೇರು ಬೆಲೆ ಶೇ 5.8ರಷ್ಟು ಗಳಿಕೆ ದಾಖಲಿಸಿತು. ಚೀನಾದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳ ಮಾರಾಟ ಹೆಚ್ಚಳವಾಗಿರುವುದರಿಂದ ಹೂಡಿಕೆದಾರರು ಟಾಟಾ ಮೋಟಾರ್ ಷೇರುಗಳ ಖರೀದಿ ನಡೆಸಿದ್ದು, ಶೇ 7.7ರಷ್ಟು ಹೆಚ್ಚಳ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.