ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Share Market | ಇದೇ ಮೊದಲ ಬಾರಿಗೆ 85 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

Published : 24 ಸೆಪ್ಟೆಂಬರ್ 2024, 6:15 IST
Last Updated : 24 ಸೆಪ್ಟೆಂಬರ್ 2024, 6:15 IST
ಫಾಲೋ ಮಾಡಿ
Comments

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ) ಆರಂಭಿಕ ವಹಿವಾಟಿನ ಹಿನ್ನಡೆಯಿಂದ ಚೇತರಿಸಿಕೊಂಡಿರುವ ಸೆನ್ಸೆಕ್ಸ್, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 85 ಸಾವಿರ ಗಡಿ ದಾಟಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 123.81 ಅಂಶ ಏರಿಕೆ ಕಂಡು 85,052.42 ಅಂಶಕ್ಕೆ ತಲುಪಿದೆ.

26,000 ಸನಿಹಕ್ಕೆ ತಲುಪಿದ ನಿಫ್ಟಿ...

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ನಿಫ್ಟಿ ಹೊಸ ಎತ್ತರಕ್ಕೆ ಜಿಗಿತ ಕಂಡಿದೆ. 39.85 ಅಂಶ ಏರಿಕೆಯಾಗಿ 25,978.90 ಅಂಶಕ್ಕೆ ತಲುಪಿದೆ.

ಚಾರಿತ್ರಿಕ 26 ಸಾವಿರಕ್ಕೆ ತಲುಪಲು ಇನ್ನೂ 21.1 ಅಂಶಗಳ ಅಗತ್ಯವಿದೆ.

ಏರಿಕೆ, ಇಳಿಕೆ...

ಟಾಟಾ ಸ್ಟೀಲ್ಸ್, ಜೆಎಸ್‌ಡಬ್ಲ್ಯು ಸ್ಟೀಲ್, ಪವರ್ ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಲಾರ್ಸೆನ್ ಮತ್ತು ಟರ್ಬೋ ಹೆಚ್ಚಿನ ಲಾಭ ಗಳಿಸಿವೆ.

ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಎಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಕುಸಿತ ಕಂಡಿವೆ.

ಏಷ್ಯಾ, ಅಮೆರಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ವಹಿವಾಟು...

ಏಷ್ಯಾ ಹಾಗೂ ಅಮೆರಿಕ ಷೇರು ಮಾರುಕಟ್ಟೆಯಲ್ಲಿನ ಧನಾತ್ಮಕ ಪರಿಣಾಮ ಭಾರತದ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಏಷ್ಯಾದ ಮಾರುಕಟ್ಟೆ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಏರಿಕೆ ಕಂಡಿವೆ. ಸೋಮವಾರದ ವಹಿವಾಟಿನ ಅಂತ್ಯಕ್ಕೆ ಅಮೆರಿಕ ಮಾರುಕಟ್ಟೆ ಸಹ ಏರಿಕೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT