ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇದೇ ಮೊದಲ ಬಾರಿ 80 ಸಾವಿರ ಗಡಿ ದಾಟಿದ Sensex, ಹೊಸ ಎತ್ತರಕ್ಕೆ ಜಿಗಿದ Nifty

Published 3 ಜುಲೈ 2024, 4:54 IST
Last Updated 3 ಜುಲೈ 2024, 4:54 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಧನಾತ್ಮಕ ಪರಿಣಾಮ, ಬ್ಯಾಂಕ್ ಷೇರುಗಳ ಭಾರಿ ಖರೀದಿಯಿಂದಾಗಿ ಷೇರು ಸೂಚ್ಯಂಕಗಳು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 80 ಸಾವಿರ ಗಡಿ ದಾಟಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 597.77 ಅಂಶ ಏರಿಕೆ ಕಂಡು 80,039.22ಕ್ಕೆ ಅಂಶಕ್ಕೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ನಿಫ್ಟಿ ಹೊಸ ಎತ್ತರಕ್ಕೆ ಜಿಗಿತ ಕಂಡಿದೆ. 168.3 ಅಂಶ ಏರಿಕೆಯಾಗಿ 24,292.15 ಅಂಶಕ್ಕೆ ತಲುಪಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ನೆಸ್ಲೆ ಹೆಚ್ಚಿನ ಲಾಭ ಕಂಡಿವೆ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಟಾಟಾ ಮೋಟಾರ್ಸ್ ಕುಸಿತ ಕಂಡಿವೆ.

ಏಷ್ಯಾದ ಪೈಕಿ ಸಿಯೋಲ್, ಟೋಕಿಯೊ ಹಾಗೂ ಹಾಂಕಾಂಗ್ ಏರಿಕೆ ಕಂಡಿದ್ದು, ಶಾಂಘೈ ಕುಸಿತ ಕಂಡಿದೆ. ಮಂಗಳವಾರ ವಹಿವಾಟಿನ ಅಂತ್ಯಕ್ಕೆ ಅಮೆರಿಕ ಷೇರುಪಂಟೆ ಏರಿಕೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT