ಮುಂಬೈ: ಅಮೆರಿಕ ಷೇರುಪೇಟೆಯಲ್ಲಿ ದುರ್ಬಲ ಟ್ರೆಂಡ್ ಮತ್ತು ಇನ್ಫೊಸಿಸ್ ಬ್ಲೂಚಿಪ್ ಷೇರುಗಳ ಮಾರಾಟ ಭರಾಟೆ ಹಿನ್ನೆಲೆಯಲ್ಲಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 346.23 ಅಂಶಗಳಷ್ಟು ಕುಸಿದು 73,768ರಲ್ಲಿ ವಹಿವಾಟು ಆರಂಭಿಸಿದರೆ, ಎನ್ಎಸ್ಇಯ ನಿಫ್ಟಿ 124.80 ಅಂಶಗಳಷ್ಟು ಕುಸಿದು 22,335ರಲ್ಲಿ ವಹಿವಾಟು ಆರಂಭಿಸಿತು.

ಸೆನ್ಸೆಕ್ಸ್ ಗುಚ್ಛದ 30 ಕಂಪನಿಗಳಲ್ಲಿ, ಇಂಡಸ್ಇಂಡ್, ಇನ್ಫೋಸಿಸ್, ಮಹೀಂದ್ರ ಅಂಡ್ ಮಹೀಂದ್ರ, ಜೊಮಾಟೊ, ಬಜಾಜ್ ಫಿನ್ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹೀಂದ್ರ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಮತ್ತೊಂದೆಡೆ, ಸನ್ ಫಾರ್ಮಾಸ್ಯುಟಿಕಲ್ಸ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಭಾರ್ತಿ ಏರ್ಟೆಲ್, ಎನ್ಟಿಪಿಸಿ ಮತ್ತು ಟೈಟನ್ ಷೇರುಗಳು ಲಾಭ ಗಳಿಸಿದ್ದವು.

ಆರ್ಥಿಕ ಹಿಂಜರಿತದ ಭೀತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನಿರ್ದಿಷ್ಟ ಸುಂಕ ನೀತಿ ಮತ್ತು ಅದು ಸೃಷ್ಟಿಸಿದ ಅನಿಶ್ಚಿತತೆಯು ಅಮೆರಿಕ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಸೋಮವಾರ ಎಸ್ & ಪಿ 500 ಮತ್ತು ನಾಸ್ಡಾಕ್ ಕ್ರಮವಾಗಿ ಶೇ 2.6 ಮತ್ತು ಶೇ 4ರಷ್ಟು ಕುಸಿತ ಕಂಡಿದ್ದು, ಟ್ರಂಪ್ ಅವರ ಸುಂಕ ನೀತಿಯಿಂದಾಗಿ ವರ್ಷಾಂತ್ಯದ ವೇಳೆಗೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರತಿಕ್ರಿಯಿಸುತ್ತಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯಕುಮಾರ್ ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ, ಶಾಂಘೈ, ಹಾಂಗ್ ಕಾಂಗ್ ಮತ್ತು ಸಿಯೋಲ್ ಕುಸಿತ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.