ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.3ರಿಂದ ಕಾಫಿ ಡೇ, ಸಿಜಿ ಪವರ್‌ ಷೇರು ವಹಿವಾಟಿಗೆ ಅಮಾನತು

Last Updated 13 ಜನವರಿ 2020, 11:35 IST
ಅಕ್ಷರ ಗಾತ್ರ

ನವದೆಹಲಿ:ಕಾಫಿ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಸಾವಿನ ಬಳಿಕ 'ಕಾಫಿ ಡೇ ಎಂಟರ್‌ಪ್ರೈಸಸ್‌'ನ ಆರ್ಥಿಕ ಸ್ಥಿತಿ ಸಾಕಷ್ಟು ಚರ್ಚೆಗೆ ಒಳಗಾಯಿತು. ಇದೀಗ ದೇಶದ ಷೇರು ವಿನಿಮಯ ಕೇಂದ್ರಗಳಾದ ಎನ್‌ಎಸ್‌ಇ ಮತ್ತು ಬಿಎಸ್‌ಇ ಕಾಫಿ ಡೇ ಮತ್ತು ಸಿಜಿ ಪವರ್‌ ಷೇರುಗಳ ವಹಿವಾಟು ನಡೆಸುವುದನ್ನು ಅಮಾನತುಗೊಳಿಸುತ್ತಿದೆ.

ಈಗಾಗಲೇ ಹಗರಣಗಳಿಂದಾಗಿ ಸಂಕಷ್ಟದಲ್ಲಿರುವ ಸಿಜಿ ಪವರ್‌ ಮತ್ತು ಇಂಡಸ್ಟ್ರಿಯಲ್‌ ಸಲ್ಯೂಷನ್ಸ್‌ ಹಾಗೂ ಕಾಫಿ ಡೇ ಎಂಟರ್‌ಪ್ರೈಸಸ್‌ ಷೇರುಗಳು ಫೆಬ್ರುವರಿ 3ರಿಂದ ವಹಿವಾಟಿಗೆ ಅವಕಾಶ ಕಳೆದುಕೊಳ್ಳಲಿವೆ.ತ್ರೈಮಾಸಿಕ ಹಣಕಾಸು ಫಲಿತಾಂಶ ಸಲ್ಲಿಕೆಯಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚಿಸಿರುವ ನಿಯಮಗಳನ್ನು ಅನುಸರಿಸದಿರುವ ಕಾರಣ ಅಮಾನತುಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಷೇರು ಪೇಟೆ (ಎನ್‌ಎಸ್‌ಇ) ಮತ್ತು ಮುಂಬೈ ಷೇರು ಪೇಟೆ (ಬಿಎಸ್‌ಇ) ಸುತ್ತೇಲೆಗಳಲ್ಲಿ ತಿಳಿಸಿವೆ.

2019ರ ಜೂನ್‌ ಮತ್ತು 2019ರ ಸೆಪ್ಟೆಂಬರ್‌ ತ್ರೈಮಾಸಿಕ ಹಣಕಾಸು ಫಲಿತಾಂಶ ವರದಿಗಳನ್ನು ಸಲ್ಲಿಸಿಲ್ಲ ಹಾಗೂ ಅದಕ್ಕಾಗಿ ವಿಧಿಸಲಾದ ದಂಡದ ಮೊತ್ತವನ್ನೂ ಸಹ ಪಾವತಿಸಿಲ್ಲ.ಜನವರಿ 29ಕ್ಕೂ ಮುನ್ನ ನಿಯಮಾನುಸಾರ ತ್ರೈಮಾಸಿಕ ಫಲಿತಾಂಶ ಸಲ್ಲಿಸಿದರೆ ವಹಿವಾಟು ಮುಂದುವರಿಯಲಿದೆ, ವಿಫಲವಾದರೆ;ಸೆಬಿ 'ನಿಬಂಧನೆ 33'ರ ಅನುಸಾರ 2020ರ ಫೆಬ್ರುವರಿ 3ರಿಂದ ಷೇರುಗಳ ವಹಿವಾಟು ಅಮಾನತುಗೊಳ್ಳಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT