ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಲ್ಲಿ ಮೂಡದ ವಿಶ್ವಾಸ: ನಿಫ್ಟಿ ನಾಲ್ಕು ವರ್ಷಗಳ ಕನಿಷ್ಠ

Last Updated 19 ಮಾರ್ಚ್ 2020, 6:19 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿರುವ ಕೋವಿಡ್‌–19 ಸಾಂಕ್ರಾಮಿಕ ರೋಗದ ಬಗ್ಗೆ ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಷೇರುಪೇಟೆಯಿಂದ ಹೂಡಿಕೆ ಹಿಂಪಡೆಯುತ್ತಿರುವ ಕಾರಣ ಗುರುವಾರ ದೇಶದ ಷೇರುಪೇಟೆ ಶೇ 7ರಷ್ಟು ಕುಸಿಯಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 8,000 ಅಂಶಗಳಿಗಿಂತ ಕಡಿಮೆಯಾಗಿದೆ. ನಿಫ್ಟಿ ಶೇ 7.2ರಷ್ಟು ಇಳಿಕೆಯಾಗಿ ನಾಲ್ಕು ವರ್ಷಗಳ ಕನಿಷ್ಠಮಟ್ಟ 7,861.70 ಅಂಶ ತಲುಪಿತು. ಇನ್ನೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇ 7.1ರಷ್ಟು ಕುಸಿದು 26,820.58 ಅಂಶ ಮುಟ್ಟಿತು.

ಇದೇ ವರ್ಷ ಜನವರಿಯಲ್ಲಿ 12,000 ಅಂಶಗಳಿಗಿಂತ ಹೆಚ್ಚು ದಾಖಲಾಗಿದ್ದ ನಿಫ್ಟಿ ಈಗ ಶೇ 36.8ರಷ್ಟು ಕಡಿಮೆಯಾಗಿದೆ. ಷೇರುಗಳು, ಫ್ಯೂಚರ್ಸ್‌ ಹಾಗೂ ಚಿನ್ನದ ಹೂಡಿಕೆಗಳನ್ನು ಮರಳಿಸಿ ಹಣವಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಮುಂದುವರಿಯುತ್ತಿರುವ ಕಾರಣ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಪ್ರತಿ ಡಾಲರ್‌ಗೆ ₹75 ತಲುಪಿದೆ.

ಭಾರ್ತಿ ಇನ್ಫ್ರಾಟೆಲ್‌ ಲಿಮಿಟೆಡ್‌ ಶೇ 16ರಷ್ಟು ಇಳಿಕೆಯಾಗಿದೆ.ಬಜಾಜ್‌ ಫೈನಾನ್ಸ್‌ ಶೇ 12ರಷ್ಟು ಕುಸಿದಿದೆ. ಎಚ್‌ಸಿಎಲ್‌ ಟೆಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಕೊಟ್ಯಾಕ್‌ ಬ್ಯಾಂಕ್‌ ಹಾಗೂ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿವೆ. ಪವರ್‌ಗ್ರಿಡ್‌ ಮತ್ತು ಎನ್‌ಟಿಪಿಸಿ ಷೇರುಗಳು ಗಳಿಕೆ ದಾಖಲಿಸಿವೆ. ಬೆಳಿಗ್ಗೆ 11:30ಕ್ಕೆ ಸೆನ್ಸೆಕ್ಸ್‌28,006.22 ಅಂಶ ಹಾಗೂ ನಿಫ್ಟಿ8,217.80 ಅಂಶಗಳಲ್ಲಿ ವಹಿವಾಟು ನಡೆದಿದೆ.

ಸೋಮವಾರದಿಂದ ಬುಧವಾರದವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹15.72 ಲಕ್ಷ ಕೋಟಿಗಳಷ್ಟು ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 113.53 ಲಕ್ಷ ಕೋಟಿಗೆ ತಲುಪಿದೆ. ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,085.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಚೀನಾದಿಂದ ಹರಡಿದ ಕೊರೊನಾ ವೈರಸ್‌ ಸೋಂಕು, ಜಾಗತಿಕವಾಗಿ 8,000 ಮಂದಿಯ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ 130ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 3 ಜನ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT