ಗುರುವಾರ , ಏಪ್ರಿಲ್ 9, 2020
19 °C

ಇಳಿದು ಜಿಗಿದ ಷೇರುಪೇಟೆ: ದಿನದ ಕನಿಷ್ಠ ಮಟ್ಟದಿಂದ 5,380 ಅಂಶ ಏರಿದ ಸೆನ್ಸೆಕ್ಸ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಬೆಂಗಳೂರು: ದೇಶದ ಷೇರುಪೇಟೆ ಶುಕ್ರವಾರ ಮಧ್ಯಾಹ್ನ ಚೇತರಿಕೆ ಕಂಡಿದೆ. ಬೆಳಿಗ್ಗೆ ವಹಿವಾಟು ಆರಂಭದಲ್ಲೇ ದಿಢೀರ್‌ ಕುಸಿತಕ್ಕೆ ಒಳಗಾಗಿದ್ದ ಷೇರುಪೇಟೆ ನಂತರದಲ್ಲಿ ಶೇ 4ರ ವರೆಗೂ ಏರಿಕೆ ಕಂಡಿತು.

ಕೊರೊನಾ ವೈರಸ್‌ ಸೋಂಕಿನ ಆತಂಕದಲ್ಲಿದ್ದ ಹೂಡಿಕೆದಾರರಲ್ಲಿ ನಿಧಾನವಾಗಿ ವಿಶ್ವಾಸ ಮರುಕಳಿಸುತ್ತಿದೆ. ಖರೀದಿ ಭರಾಟೆಯ ಕಾರಣ, ಸೆನ್ಸೆಕ್ಸ್‌ ಶೇ 4.04ರಷ್ಟು (1325.34 ಅಂಶ) ಏರಿಕೆಯಾಗಿ 34103.48 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 3.81 (365.05 ಅಂಶ) ಏರಿಕೆಯೊಂದಿಗೆ 9,955.20 ಅಂಶ ಮುಟ್ಟಿದೆ.

ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ಶೇ 10ರಷ್ಟು ಕುಸಿಯುತ್ತಿದ್ದಂತೆ ಷೇರುಪೇಟೆ ವಹಿವಾಟುಗಳನ್ನು 45 ನಿಮಿಷಗಳ ವರೆಗೂ ಸ್ಥಗಿತಗೊಳಿಸಲಾಯಿತು. 2009ರ ನಂತರ ಇದೇ ಮೊದಲ ಬಾರಿಗೆ ಷೇರುಪೇಟೆಯಲ್ಲಿ ಸರ್ಕ್ಯೂಟ್‌ ಬ್ರೇಕ್‌ ಉಂಟಾಯಿತು. ಆದರೆ, ನಂತರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ದಿನದ ಕನಿಷ್ಠ ಮಟ್ಟದಿಂದ 29,388.97 ಅಂಶಗಳಿಂದ 5,380 ಅಂಶ ಏರಿಕೆಯಾಯಿತು. ಹಾಗೂ ನಿಫ್ಟಿ 1,572 ಅಂಶ (ಶೇ 18.36) ಜಿಗಿದು ಮತ್ತೆ 9,900 ಅಂಶ ಮುಟ್ಟಿತು.

ಎಸ್‌ಬಿಐ ಶೇ 15ರಷ್ಟು ಏರಿಕೆ ದಾಖಲಿಸುವ ಮೂಲಕ ಅತಿ ಹೆಚ್ಚು ಗಳಿಸಿಕೆ ಕಂಡಿದೆ. ಟಾಟಾ ಸ್ಟೀಲ್‌, ಎಚ್‌ಡಿಎಫ್‌ಸಿ, ಸನ್‌ ಫಾರ್ಮಾ, ಬಜಾಜ್‌ ಫೈನಾನ್ಸ್‌, ಭಾರ್ತಿ ಏರ್‌ಟೆಲ್‌ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಬೆಲೆ ಏರಿಕೆಯಾಗಿದೆ. 

ಏಷಿಯನ್‌ ಪೇಯಿಂಟ್ಸ್‌, ನೆಸ್ಟ್ಲೆ ಇಂಡಿಯಾ, ಹೀರೊ ಮೋಟೊಕಾರ್ಪ್‌, ಎಚ್‌ಯುಎಲ್‌, ಎಚ್‌ಸಿಎಲ್‌ ಟೆಕ್‌ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು