ಸಕಾರಾತ್ಮಕ ಮಟ್ಟದಲ್ಲಿ ಷೇರುಪೇಟೆ: 6ನೇ ವಾರವೂ ಗಳಿಕೆ

7

ಸಕಾರಾತ್ಮಕ ಮಟ್ಟದಲ್ಲಿ ಷೇರುಪೇಟೆ: 6ನೇ ವಾರವೂ ಗಳಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ವಾರವೂ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 393 ಅಂಶ ಏರಿಕೆ ಕಂಡು 38,645 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 123 ಅಂಶ ಹೆಚ್ಚಾಗಿ 11,680 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ವಾರದಲ್ಲಿ ಮೊದಲ ಎರಡು ದಿನ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು. 

ಅಮೆರಿಕ–ಮೆಕ್ಸಿಕೊದ ಹೊಸ ವಾಣಿಜ್ಯ ಒಪ್ಪಂದದ ಪುನಶ್ಚೇತನವು ದೇಶಿ ಷೇರುಪೇಟೆಗೆ ಬಂಡವಾಳ ಹರಿವನ್ನು ಹೆಚ್ಚಿಸಿತು. ಆದರೆ, ರೂಪಾಯಿ ಮೌಲ್ಯ ಕುಸಿತದಿಂದ ಕಚ್ಚಾ ತೈಲ ಆಮದು ಹೆಚ್ಚಾಗಲಿದ್ದು, ವ್ಯಾಪಾರ ಕೊರತೆ ಅಂತರ ವೃದ್ಧಿಯಾಗಲಿರುವುದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು. ಇದರ ಜತೆಗೆ ಚೀನಾದ ಸರಕುಗಳಿಗೆ ಮೇಲೆ ಇನ್ನಷ್ಟು ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿರುವುದು ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ತಜ್ಞರು ಹೇಳಿದ್ದಾರೆ.

ದೇಶಿ ಮಟ್ಟದಲ್ಲಿ, ಸರ್ಕಾರಿ ಬಾಂಡ್‌ಗಳ ಆಗಸ್ಟ್‌ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಲಿರುವುದು ಬುಧವಾರದಿಂದಲೇ ಷೇರುಪೇಟೆಯಲ್ಲಿ ಲಾಭ ಗಳಿಕೆಯ ಉದ್ದೇಶದ ವಹಿವಾಟಿಗೆ ಕಾರಣವಾಯಿತು. ಶುಕ್ರವಾರ ಸೂಚ್ಯಂಕಗಳು ಇಳಿಕೆ ಕಂಡರೂ ವಾರದ ವಹಿವಾಟು ಏರುಮುಖವಾಗಿಯೇ ಅಂತ್ಯವಾಯಿತು.

ವಹಿವಾಟಿನ ವಿವರ 
₹ 430 ಕೋಟಿ
ವಾರದಲ್ಲಿ ವಿದೇಶಿ ಬಂಡವಾಳ ಹೊರಹರಿವು

₹ 15,133 ಕೋಟಿ 
ಬಿಎಸ್‌ಇ ವಾರದ ವಹಿವಾಟು ಮೊತ್ತ

₹ 1.82 ಲಕ್ಷ ಕೋಟಿ 
ನಿಫ್ಟಿ ವಾರದ ವಹಿವಾಟು ಮೊತ್ತ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !