ಗುರುವಾರ , ಜನವರಿ 23, 2020
24 °C
ಐದು ದಿನಗಳಲ್ಲಿ ನಾಲ್ಕು ದಿನವೂ ಹೊಸ ಎತ್ತರಕ್ಕೆ

ಸಾರ್ವಕಾಲಿಕ ದಾಖಲೆ ಕಂಡ ಷೇರುಪೇಟೆ ಸೂಚ್ಯಂಕ: ದಾಖಲೆಗಳ ವಹಿವಾಟಿನ ವಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಷೇರುಪೇಟೆಗಳಲ್ಲಿ ಐದು ದಿನಗಳ ವಾರದ ವಹಿವಾಟಿನಲ್ಲಿ ಸತತ ನಾಲ್ಕು ದಿನವೂ ದಾಖಲೆ ಮಟ್ಟದ ವಹಿವಾಟು ನಡೆಯಿತು. ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಅಂತ್ಯಗೊಂಡಿದೆ. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 672 ಅಂಶ ಹೆಚ್ಚಾಗಿ 41,681 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯೊಗೊಂಡಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ಹೂಡಿಕೆದಾರರ ಸಂಪತ್ತಿನಲ್ಲಿ ₹ 2 ಲಕ್ಷ ಕೋಟಿ ಹೆಚ್ಚಾಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 155 ಲಕ್ಷ ಕೋಟಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 185 ಅಂಶ ಏರಿಕೆ ಕಂಡು 12,271 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿತು.

ಬಂಡವಾಳ ಹೂಡಿಕೆ: ದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟಕ್ಕೆ ಗಮನ ನೀಡಿದ್ದರೆ, ವಿದೇಶಿ ಬಂಡವಾಳ ಹೂಡಿಕೆದಾರರು ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದರಿಂದಾಗಿ ಷೇರುಪೇಟೆಗಳಲ್ಲಿ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ.

ವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹ 4,552 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು