ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವಾಮ್ಯದ ONGC ಷೇರು ಶೇ 12ರಷ್ಟು ಕುಸಿತ; 15 ವರ್ಷಗಳ ಕನಿಷ್ಠ ಮಟ್ಟ

Last Updated 9 ಮಾರ್ಚ್ 2020, 7:54 IST
ಅಕ್ಷರ ಗಾತ್ರ

ಮುಂಬೈ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಷೇರು ಸೋಮವಾರ ಶೇ 12ರಷ್ಟು ಕುಸಿಯುವ ಮೂಲಕ ₹78.05ಕ್ಕೆ ತಲುಪಿತು. ಈ ಮೂಲಕ ಒಎನ್‌ಜಿಸಿ ಷೇರು ಮೌಲ್ಯ 15 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿತು.

ಇಂಧನ ಮಾರುಕಟ್ಟೆ ಬೆಂಬಲಿಸುವ ಪ್ರಕ್ರಿಯೆಯಲ್ಲಿ ಜಾಗತಿಕ ತೈಲ ಉತ್ಪಾದಕ ಮತ್ತು ರಫ್ತು ರಾಷ್ಟ್ರಗಳನ್ನು ಒಳಗೊಂಡ ಸಂಘನೆ ವಿಫಲವಾದ ಬೆನ್ನಲ್ಲೇ ಸೌದಿ ಅರೇಬಿಯಾ ದರ ಸಮರ ಸಾರಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 30ರಷ್ಟು ಇಳಿಕೆಯಾಗಿದ್ದು, ದೇಶದ ಒಎನ್‌ಜಿಸಿ ಸೇರಿದಂತೆ ತೈಲ ಉತ್ಪಾದನಾ ಕಂಪನಿಗಳ ಷೇರುಗಳು ಇಳಿಮುಖವಾಗಿವೆ.

ಅನಿಲ ದರ ಇಳಿಕೆ ಮತ್ತು ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು, ಷೇರುಪೇಟೆಯಲ್ಲಿ ಕಳೆದ ಎರಡು ತಿಂಗಳಿಂದ ಉಂಟಾಗಿರುವ ಮಹಾ ಕುಸಿತದ ಪರಿಣಾಮ ಒಎನ್‌ಜಿಸಿ ಷೇರು ಅತಿ ಹೆಚ್ಚು ಇಳಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮಾರುಕಟ್ಟೆ ಮೌಲ್ಯ 2004ರ ಆಗಸ್ಟ್‌ನಿಂದ ಇದೇ ಮೊದಲ ಬಾರಿಗೆ ₹1 ಟ್ರಿಲಿಯನ್‌ಗಿಂತ (₹1 ಲಕ್ಷ ಕೋಟಿ) ಕಡಿಮೆ ಆಗಿದೆ. ಮುಂಬೈ ಷೇರುಪೇಟೆ ಅಂಕಿ–ಅಂಶಗಳ ಪ್ರಕಾರ, ಬೆಳಿಗ್ಗೆ 10ಕ್ಕೆ ಒಎನ್‌ಜಿಸಿ ಮಾರುಕಟ್ಟೆ ಮೌಲ್ಯ ₹98,818 ಕೋಟಿಗೆ ಇಳಿದಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಒಎನ್‌ಜಿಸಿ, ಇತರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಕೋಲ್‌ ಇಂಡಿಯಾ ಮತ್ತು ಎನ್‌ಟಿಪಿಸಿ ಹಾಗೂ ಖಾಸಗಿ ಕಂಪನಿಗಳಾದ ಟೈಟಾನ್‌ಮ ಎಚ್‌ಡಿಎಫ್‌ಸಿ ಲೈಫ್‌ ಇನ್ಶುರೆನ್ಸ್‌ಗಿಂತಲೂ ಕಡಿಮೆಯಾಗಿದೆ.

ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರದ ಮೇಲೆ 6–8 ಡಾಲರ್‌ ಕಡಿಮೆ ಮಾಡುವ ಮೂಲಕ ಸೌದಿ ಅರೇಬಿಯಾ ದರ ಸಮರ ಸಾರಿದೆ. ಇದು ಕಳೆದ 20 ವರ್ಷಗಳಲ್ಲೇ ಸೌದಿ ಅರೇಬಿಯಾ ಕೈಗೊಂಡಿರುವ ಅತಿ ದೊಡ್ಡ ದರ ಕಡಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT