ಬುಧವಾರ, ಆಗಸ್ಟ್ 10, 2022
24 °C

ಡಾಲರ್‌ ಎದುರು ಮತ್ತೆ ಕುಸಿದ ರೂಪಾಯಿ; ವಿದೇಶಿ ಹೂಡಿಕೆ ಹಿಂತೆಗೆತದ ಪರಿಣಾಮ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಮುಂಬೈ: ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಮಂಗಳವಾರ ವಹಿವಾಟು ಆರಂಭದಲ್ಲಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರೊಂದಿಗೆ ದೇಶದ ಷೇರುಪೇಟೆ ಸೂಚ್ಯಂಕಗಳಲ್ಲೂ ಇಳಿಕೆ ದಾಖಲಾಗಿದೆ.

ವಿದೇಶಿ ಕರೆನ್ಸಿ ವಿನಿಮಯದಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ 22 ಪೈಸೆಯಷ್ಟು ಕುಸಿತ ಕಂಡಿದ್ದು, ಪ್ರತಿ ಡಾಲರ್‌ಗೆ 78.66 ರೂಪಾಯಿಯಲ್ಲಿ ವಹಿವಾಟು ನಡೆದಿದೆ.

ಸೋಮವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 4 ಪೈಸೆ ಕಡಿಮೆಯಾಗಿ 78.37 ತಲುಪಿತ್ತು.

ದೇಶದ ಷೇರುಪೇಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತವಾಗಿ ಷೇರು ಮಾರಾಟ ಮಾಡುವ ಮೂಲಕ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಅದರ ಪರಿಣಾಮ ರೂಪಾಯಿಯ ಮೇಲೆ ಒತ್ತಡ ಉಂಟಾಗುತ್ತಿರುವುದಾಗಿ ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ಶೇಕಡ 1.20ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ಗೆ 116.47 ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ–

ಬೆಳಗಿನ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 317.41 ಅಂಶ ಕಡಿಮೆಯಾಗಿ 52,843.87 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 99.65 ಅಂಶ ಕಡಿಮೆಯಾಗಿ 15,732.40 ಅಂಶಗಳಲ್ಲಿ ವಹಿವಾಟು ನಡೆದಿದೆ.

ಏಷ್ಯನ್‌ ಪೇಂಟ್ಸ್‌, ಟೈಟಾನ್‌, ಬಜಾಜ್‌ ಫಿನ್‌ಸರ್ವ್‌, ವಿಪ್ರೊ, ಟೆಕ್‌ ಮಹೀಂದ್ರಾ, ಅಲ್ಟ್ರಾಟೆಕ್‌ ಸಿಮೆಂಟ್‌, ಎಚ್‌ಡಿಎಫ್‌ಸಿ ಹಾಗೂ ಬಜಾಜ್‌ ಫೈನಾನ್ಸ್‌ ಷೇರುಗಳು ಕುಸಿತ ದಾಖಲಿಸಿವೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಐಟಿಸಿ, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಗಳಿಕೆ ಕಂಡಿವೆ.

ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,278.42 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು