ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 900 ಅಂಶ ಕುಸಿತ: ಷೇರುಪೇಟೆ ಮೇಲೆ ರಷ್ಯಾ–ಉಕ್ರೇನ್‌ ಯುದ್ಧದ ಪರಿಣಾಮ

Last Updated 2 ಮಾರ್ಚ್ 2022, 5:50 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧವು ಹೂಡಿಕೆದಾರರಲ್ಲಿ ತಲ್ಲಣ ಹೆಚ್ಚಿಸಿದ್ದು, ಹೂಡಿಕೆ ಹಿಂಪಡೆಯಲು ಮುಂದಾಗುತ್ತಿರುವುದರಿಂದ ದೇಶದ ಷೇರುಪೇಟೆಗಳಲ್ಲಿ ಮತ್ತೆ ಕುಸಿತ ದಾಖಲಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 900 ಅಂಶಗಳಷ್ಟು ಇಳಿಕೆಯಾಗಿದೆ.

ಬೆಳಿಗ್ಗೆ 10:50ರ ವರೆಗೂ ಸೆನ್ಸೆಕ್ಸ್‌ 926.84 ಅಂಶ ಇಳಿಕೆಯಾಗಿ 55,320.44 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 224.85 ಅಂಶ ಕುಸಿದು 16,569.05 ಅಂಶಗಳಲ್ಲಿ ವಹಿವಾಟು ನಡೆದಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 5.4ಕ್ಕೆ ಇಳಿಕೆ ಕಂಡಿದೆ. ಬೆಳವಣಿಗೆ ದರ ನಿಧಾನಗತಿಯಲ್ಲಿ ಮುಂದುವರಿದರೆ 2022–23ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಕಡಿಮೆಯಾಗಲಿದೆ ಹಾಗೂ ಹಣದುಬ್ಬರವು ಏರಿಕೆಯಾಗುವುದಾಗಿ ಅಂದಾಜಿಸಲಾಗಿದೆ. ಈ ಅಂಶಗಳೂ ಸಹ ಷೇರುಪೇಟೆ ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ.

ಮಾರುತಿ ಸುಜುಕಿ, ಏಷಿಯನ್‌ ಪೇಯಿಂಟ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಬಜಾಜ್‌ ಆಟೊ ಕಂಪನಿಯ ಷೇರು ಬೆಲೆ ಶೇ 3ರಿಂದ 4ರಷ್ಟು ಇಳಿಕೆಯಾಗಿದೆ.

ಆದರೆ, ಲೋಹ, ತೈಲ ಮತ್ತು ಅನಿಲ ವಲಯದ ಕಂಪನಿಗಳ ಷೇರು ಬೆಲೆ ಶೇಕಡ 7ರವರೆಗೂ ಏರಿಕೆಯಾಗಿದೆ. ಸ್ಟೀಲ್‌ ಮತ್ತು ತೈಲದ ಬೇಡಿಕೆ ಹಾಗೂ ಬೆಲೆ ಏರಿಕೆಯ ಕಾರಣಗಳಿಂದ ಹೂಡಿಕೆದಾರರು ಈ ಕಂಪನಿಗಳತ್ತ ಮುಖ ಮಾಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 110 ಡಾಲರ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT