ಬುಧವಾರ, ಮೇ 27, 2020
27 °C

ಷೇರುಪೇಟೆ: ಉತ್ತಮ ಗಳಿಕೆ ಕಂಡ ಟಾಟಾ ಮೋಟಾರ್ಸ್‌ ಹಾಗೂ ಹೀರೊ ಕಂಪನಿ‌ ಷೇರುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ಚೇತರಿಕೆ ಕಂಡು ಬಂದಿದ್ದು ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್‌ ಹಾಗೂ ಹೀರೊ ಮೋಟೊ ಕಾರ್ಪ್‌ ಷೇರುಗಳು ಉತ್ತಮ ಗಳಿಕೆ ಕಂಡಿವೆ. ಹಣಕಾಸು, ಬ್ಯಾಂಕ್‌ ಮತ್ತು ಐಟಿ ವಲಯದ ಷೇರುಗಳು ಕೂಡ ಗಳಿಕೆ ಕಂಡಿವೆ. 

ಬಿಎಸ್‌ಇ ಹಾಗೂ ಎನ್‌ಎಸ್‌ಇ ಕ್ರಮವಾಗಿ 1,020 ಹಾಗೂ 299 ಪಾಯಿಂಟ್‌ಗಳ ಏರಿಕೆ ದಾಖಲಿಸಿವೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಗಳಿಕೆ ಹಾಗೂ ಸರ್ಕಾರಿ ಸಾಲಪತ್ರಗಳ ಏಪ್ರಿಲ್‌ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ನಿನ್ನೆ ಚೇತರಿಕೆ ಕಂಡಿತ್ತು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 52 ಪೈಸೆ ಹೆಚ್ಚಾಗಿತ್ತು. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು