ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಕೆಯ ಓಟ ನಿಲ್ಲಿಸಿದ ಷೇರುಪೇಟೆ!

Last Updated 6 ಸೆಪ್ಟೆಂಬರ್ 2020, 15:56 IST
ಅಕ್ಷರ ಗಾತ್ರ

ಎರಡು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕಳೆದ ವಾರದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿವೆ. 38,357 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 2.81ರಷ್ಟು ಕುಸಿತ ಕಂಡಿದೆ. 11,333 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ಶೇ 2.69ರಷ್ಟು ಕುಸಿತ ದಾಖಲಿಸಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 6ರಷ್ಟು ತಗ್ಗಿದ್ದರೆ, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.6 ಮತ್ತು ಶೇ 3.2ರಷ್ಟು ಕುಸಿದಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಶೇ 10ರಷ್ಟು, ಐಸಿಐಸಿಐ ಶೇ 8ರಷ್ಟು, ಸನ್ ಫಾರ್ಮಾ ಶೇ 8ರಷ್ಟು, ಎಸ್‌ಬಿಐ ಶೇ 8ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 7ರಷ್ಟು, ಎಚ್‌ಡಿಎಫ್‌ಸಿ ಶೇ 6ರಷ್ಟು ಮತ್ತು ಐಟಿಸಿ ಶೇ 4.5ರಷ್ಟು ಕುಸಿದಿವೆ. ಭಾರ್ತಿ ಇನ್ಫ್ರಾಟೆಲ್ ಶೇ 15ರಷ್ಟು, ಟಾಟಾ ಮೋಟರ್ಸ್ ಶೇ 14ರಷ್ಟು, ಟಿಸಿಎಸ್ ಶೇ 12ರಷ್ಟು, ಟೈಟನ್ ಶೇ 11ರಷ್ಟು ಜಿಗಿದಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ವೋಡಾಫೋನ್ ಐಡಿಯಾ ಶೇ 15ರಷ್ಟು, ಯುನೈಟೆಡ್ ಬ್ರಿವರಿಸ್ ಶೇ 14ರಷ್ಟು, ಬಯೋಕಾನ್ ಶೇ 12ರಷ್ಟು ಮತ್ತು ಇಂಟರ್ ಗ್ಲೋಬ್ ಎವಿಯೇಷನ್ ಶೇ 11ರಷ್ಟು ಹೆಚ್ಚಳ ಕಂಡಿವೆ.

ಐಪಿಒ: ಸೆಪ್ಟೆಂಬರ್ 7ರಂದು ಹ್ಯಾಪಿಯೆಸ್ಟ್ ಮೈಂಡ್ಸ್‌ನ ಐಪಿಒ (ಆರಂಭಿಕ ಸಾರ್ವಜನಿಕ ಬಂಡವಾಳ) ಸಾರ್ವಜನಿಕ ಹೂಡಿಕೆಗೆ ತೆರೆದುಕೊಳ್ಳಲಿದೆ.

ಮುನ್ನೋಟ: ಇನ್ಫೋ ಎಡ್ಜ್, ಪರಾಗ್ ಮಿಲ್ಕ್ ಫುಡ್ಸ್, ಫ್ಯೂಚರ್ ಲೈಫ್ ಸ್ಟೈಲ್, ಜಿಐಸಿ ಆರ್‌ಇ, ಎಚ್ಒಇಸಿ, ಸಿಇಎಸ್‌ಸಿ, ಸ್ಪೆನ್ಸರ್ಸ್ ರಿಟೇಲ್, ಫ್ಯೂಚರ್ ಕನ್ಸ್ಯೂಮರ್, ಎವರೆಡಿ, ಇಂಡಿಯಾ ಬುಲ್ಸ್ ವೆಂಚರ್ಸ್, ಬಿಎಚ್‌ಇಎಲ್, ಐಆರ್‌ಸಿಟಿಸಿ, ಮಿಧಾನಿ, ಬಿಎಫ್ ಯುಟಿಲಿಟೀಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸುತ್ತಿದೆ. ಈ ಬೆಳವಣಿಗೆಗಳನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬರುವ ಏರಿಳಿತ, ಕೋವಿಡ್–19ಕ್ಕೆ ಲಸಿಕೆ ಪತ್ತೆ ಮಾಡುವ ನಿಟ್ಟಿನಲ್ಲಿ ಆಗುವ ಬೆಳವಣಿಗೆ, ಸಾಲದ ಕಂತು ಪಾವತಿಗೆ ನೀಡಿದ್ದ ವಿನಾಯಿತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಆಗುವ ಬೆಳವಣಿಗೆಗಳು ದೇಶಿ ಮಾರುಕಟ್ಟೆಯ ಮೇಲೆ ಪರಿಣಾಮ
ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT