ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಿದ ಸೆನ್ಸೆಕ್ಸ್; ಷೇರುಪೇಟೆಯಲ್ಲಿ ಖರೀದಿ ಉತ್ಸಾಹ, ಬ್ಯಾಂಕ್ ಷೇರುಗಳ ಗಳಿಕೆ

Last Updated 16 ಜೂನ್ 2020, 7:10 IST
ಅಕ್ಷರ ಗಾತ್ರ

ಮುಂಬೈ: ವಾರದ ಆರಂಭದಲ್ಲೇ ಮಾರಾಟದ ಒತ್ತಡಕ್ಕೆ ಒಳಗಾದ ಷೇರುಪೇಟೆಗಳಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ. 550 ಅಂಶಗಳಷ್ಟು ಇಳಿಕೆಯಾಗಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಇಂದು 700 ಅಂಶಗಳು ಜಿಗಿದಿವೆ.

ಆರಂಭಿಕ ವಹಿವಾಟಿನಲ್ಲಿ 725 ಅಂಶ ಏರಿಕೆಯಾದ ಸೆನ್ಸೆಕ್ಸ್ ಬೆಳಿಗ್ಗೆ 11:30ಕ್ಕೆ 607 ಅಂಶ ಚೇತರಿಕೆಯೊಂದಿಗೆ 33,835 ಅಂಶ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 153 ಅಂಶ ಹೆಚ್ಚಳವಾಗಿ 9,960 ಅಂಶಗಳಲ್ಲಿ ವಹಿವಾಟು ನಡೆದಿದೆ.

ಸೆನ್ಸೆಕ್ಸ್ ಕಂಪನಿಗಳ ಸಾಲಿನಲ್ಲಿ ಟಾಟಾ ಸ್ಟೀಲ್‌ ಶೇ 4ರಷ್ಟು ಗಳಿಕೆ ದಾಖಲಿಸಿದೆ. ತೀವ್ರ ಇಳಿಕೆ ಕಂಡಿದ್ದ ಬ್ಯಾಂಕ್ ವಲಯದ ಷೇರುಗಳು ಹೂಡಿಕೆದಾರರನ್ನು ಸೆಳೆದಿವೆ. ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ಕೊಟ್ಯಾಕ್ ಬ್ಯಾಂಕ್, ಇನ್ಫೊಸಿಸ್ ಷೇರುಗಳು ಚೇತರಿಕೆ ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ₹2,960.33 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT