ನವದೆಹಲಿ (ಪಿಟಿಐ): ಚಿನ್ನಾಭರಣಗಳಿಗೆ `ಹಾಲ್‌ಮಾರ್ಕ್~ ಗುರುತು ಕಡ್ಡಾಯಗೊಳಿಸಿದ ನಂತರ ಇದುವರೆಗೆ 9 ಸಾವಿರ `ಹಾಲ್‌ಮಾರ್ಕ್~ ಪರವಾನಗಿ ವಿತರಿಸಲಾಗಿದೆ ಎಂದು ಭಾರತೀಯ ಮಾನಕ ಮಂಡಳಿ (ಬಿಐಎಸ್) ಹೇಳಿದೆ.

ಕಳೆದ ಡಿಸೆಂಬರ್ 31ರವರೆಗೆ 9005 ಚಿನ್ನಾಭರಣ ಹಾಲ್‌ಮಾರ್ಕ್ ಮತ್ತು 528 ಬೆಳ್ಳಿಯ ಹಾಲ್‌ಮಾರ್ಕ್ ಪರವಾನಗಿ ನೀಡಲಾಗಿದೆ ಎಂದು `ಬಿಐಎಸ್~ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ರಮ ಮತ್ತು ನಕಲಿ ಚಿನ್ನಾಭರಣ ವಹಿವಾಟು ತಡೆಯಲು ಸರ್ಕಾರ ಕಳೆದ ತಿಂಗಳು `ಹಾಲ್‌ಮಾರ್ಕ್~ ಗುರುತು ಹಾಕುವುದನ್ನು ಕಡ್ಡಾಯಗೊಳಿಸಿತ್ತು.

ಸದ್ಯ ದೇಶದಲ್ಲಿ 170 ಹಾಲ್ ಮಾರ್ಕ್ ಗುರುತು ನೀಡುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಈ ಕುರಿತು ಜಾಗೃತಿ ನೀಡುವ ಕಾರ್ಯಕ್ರಮವನ್ನೂ `ಬಿಐಎಸ್~ ಹಮ್ಮಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.