‘ಮುಂದಿನ ತಿಂಗಳಿನಿಂದ ನಾನ್ ಸಿ.ಎಂ’ ಕೂಗಿ ಹೇಳ್ದ ಕೊನೆಯ ಬೆಂಚ್ನ ಪಾಯಿಂಟ್ ಪಾಟೀಲ. ದೇವಸ್ಥಾನದಿಂದ ನೇರವಾಗಿ ಕ್ಲಾಸ್ ರೂಂನೊಳಗೆ ಬಂದಿದ್ದ ಸಿ.ಎಂ ಕುಮಾರ್ಗೆ ಹೊಟ್ಟೆಯಲ್ಲಿ ಖಾರ ಕಲಸಿದಂತಾಯ್ತು.

‘ಏನ್ ಮಾತಾಡ್ತೀಯಾ ಪಾಟೀಲ, ನಾನೇನಿಲ್ಲಿ ಕೋತಿ ಆಡಿಸೋಕೆ ನಿಂತಿದೀನಾ. ಏನೇನೋ ಹೇಳ್ತಿದ್ರೆ ನಿಮ್ಮ ಸಿದ್ದಣ್ಣಂಗೆ ಕಂಪ್ಲೇಂಟ್ ಕೊಡ್ತೀನಿ ನೋಡು’ ಎಚ್ಚರಿಸಿದ ಕುಮಾರ್.

ಹೊರಗೆ ಬಂದವನೇ ಸಿದ್ದಣ್ಣಂಗೆ ಫೋನ್ ಮಾಡಿದ ಕುಮಾರ್, ಎಲ್ಲಾ ಹೇಳ್ದ. ‘ಪಾಟೀಲಂಗೆ ಯಾವ ಟೈಂನಲ್ಲಿ ಏನ್ ಮಾತನಾಡಬೇಕು ಗೊತ್ತಾಗಲ್ಲ. ಹೇಳ್ತೀನಿ ಬಿಡು ಕುಮಾರ್. ಎಲ್ಲರ ಆಶೀರ್ವಾದ ಇದ್ದರೆ ನಾನೇ ಇನ್ನೊಮ್ಮೆ ಸಿ.ಎಂ. ಆಗಬಹುದು’ ಎಂದು ನಗ್ತಾ ಫೋನ್ ಇಟ್ಟ ಸಿದ್ದಣ್ಣ. ಕುಮಾರ್ ಮುಖ ಮತ್ತಷ್ಟು ಕಪ್ಪಿಟ್ಟಿತು.

ಕ್ಲಾಸ್ಗೆ ಬಂದ ಪೊಲಿಟಿಕಲ್ ಸೈನ್ಸ್ ಲೆಕ್ಚರರ್ ರಾಹುಲ್ಗೂ ಈ ಬಗ್ಗೆ ದೂರು ಹೋಯ್ತು. ‘ಸಿ.ಎಂ ಆಗೋಕೆ ಬೇರೆ ಬೇರೆ ವಿದ್ಯೆ ಗೊತ್ತಿರಬೇಕು ಪಾಟೀಲ. ಆಪರೇಷನ್ ಮಾಡಬೇಕು, ಪಾರ್ಟಿಗೆ ರೇಷನ್ ಒದಗಿಸಬೇಕು, ದೊಡ್ಡ ಕ್ಯಾಸ್ಟ್ ಇರಬೇಕು, ಸಣ್ಣ ಮನಸ್ಸಿರಬೇಕು. ಆಗಾಗ ಅಳಬೇಕು, ಬೇಕಾದಂಗೆ ಸುಳ್ಳು ಹೇಳಬೇಕು. ಇದರಲ್ಲೆಲ್ಲ ನೀನಿನ್ನೂ ಪಳಗಬೇಕು. ಅಲ್ದೆ, ಸಿ.ಎಂ ಆಗಬೇಕು ಅಂದ್ರೆ ನಿನಗಿನ್ನೂ ವಯಸ್ಸೇ ಆಗಿಲ್ವಲ್ಲ. ಎಲೆಕ್ಷನ್ ನಿಲ್ಲೋವಷ್ಟು ಏಜಾದರೂ ಆಗ್ಲಿ ಸುಮ್ನಿರು’ ಸಮಾಧಾನ ಪಡಿಸಿದರು ರಾಹುಲ್ ಸರ್.

ಸಿ.ಎಂ. ಆಗೋಕೂ, ಏಜ್ಗೂ ಏನು ಸಂಬಂಧ ಎಂಬುದು ಅರ್ಥವಾಗದೆ ತಲೆ ಕೆರೆದುಕೊಳ್ಳತೊಡಗಿದ ಪಾಟೀಲ. ಇದನ್ನೆಲ್ಲ ಗಮನಿಸ್ತಿದ್ದ ವಿಜಿಗೆ ಪಾಟೀಲನ ಪ್ರಾಬ್ಲಂ ಅರ್ಥ ಆಯ್ತು. ‘ರಾಹುಲ್ ಸರ್, ಪಾಟೀಲ ಹೇಳ್ತಿರೋ ಸಿ.ಎಂ. ಅಂದ್ರೆ ಚೀಫ್ ಮಿನಿಸ್ಟರ್ ಅಲ್ಲ. ಕ್ಲಾಸ್ ಮಾನಿಟರ್’.

‘ಅದೇ ಅಂತೀನಿ... ಪಾಟೀಲಂಗೆ ಈಗ್ಲೇ ಚೀಫ್ ಮಿನಿಸ್ಟರ್ ಆಗ್ಬೇಕು ಅಂತಾ ಯಾಕೆ ಅನಿಸ್ತು ಅಂತಾ... ಕುಮಾರ್ ಅವಧಿ ಇನ್ನೂ ತುಂಬಾ ಇದೆ. ನೀನ್ಯಾಕೆ ಮುಂದಿನ ಸಿ.ಎಂ ನಾನು ಅಂದೆ’ ಕೇಳಿದ್ರು ರಾಹುಲ್.

‘ಹಾಗೆ ಹೇಳ್ತಿದ್ರೆ, ಲೀಡರ್ ಆಗಿ ಮಾಡದಿದ್ರೂ ಅಟ್ಲೀಸ್ಟ್ ಕೊನೇ ಬೆಂಚ್ನಿಂದ ಫಸ್ಟ್ ಬೆಂಚ್ ಗಾದ್ರೂ ಕರೆಸ್ಕೋತೀರೇನೋ ಅನ್ನೋ ಆಸೆ ಸರ್’ ಹುಳ್ಳನಗೆ ಬೀರುತ್ತಾ ಹೇಳ್ದ ಪಾಯಿಂಟ್ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.