ಮೇಷ್ಟ್ರಿಗೆ ಅಡ್ಡಹೆಸರುಗಳನ್ನಿಟ್ಟು ಕರೆಯುವುದನ್ನು ವಿದ್ಯಾರ್ಥಿಗಳು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಹಾಗೆ ಕರೆಯುವುದರಲ್ಲಿ ಅವರಿಗೇನೋ ಆನಂದ. ಎಷ್ಟೋ ಸಲ ಈ ಅಡ್ಡ ಹೆಸರುಗಳು ತಮಗಿಟ್ಟಿದ್ದಾರೆ ಅನ್ನೋದು ಮೇಷ್ಟ್ರುಗಳಿಗೆ ಗೊತ್ತೂ ಆಗುವುದಿಲ್ಲ. ಅಷ್ಟೊಂದು ರಹಸ್ಯವಾಗಿ ಹುಡುಗರು ಅದನ್ನೆಲ್ಲಾ ಕಾಪಾಡಿಕೊಳ್ತಾರೆ. ಸಾಧ್ಯವಾದಷ್ಟು ಅದನ್ನು ತಮ್ಮ ತಮ್ಮಲ್ಲಿ ಮಾತ್ರ ಚಲಾವಣೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇದು ಸಂಬಂಧಪಟ್ಟ ಗುರುಗಳ ಕಿವಿಗೆ ಬಿದ್ದಾಗ ಮಾತ್ರ ರಂಪ ರಾದ್ಧಾಂತಗಳು ಆಗಿದ್ದಿದೆ. ಮೇಷ್ಟ್ರುಗಳ ಮೇಲಿನ ಅತೀವ ಪ್ರೀತಿಯಿಂದ ಹೀಗೆ ಅನ್ವರ್ಥ ನಾಮಗಳು ಹುಟ್ಟುತ್ತವೋ ಏನೋ ಗೊತ್ತಿಲ್ಲ!?

ನಮ್ಮ ಪ್ರಿನ್ಸಿಪಾಲರೊಬ್ಬರು ಸಿಕ್ಕಾಪಟ್ಟೆ ಎಲೆ ಅಡಿಕೆ ಹಾಕುತ್ತಿದ್ದರು. ಎಲ್ಲೆಂದರಲ್ಲಿ ಉಗಿಯುತ್ತಿದ್ದರು. ಅವರಿಗೆ ‘ಬಕೇಟ್’ ಅಂತ ಹುಡುಗರು ಅಡ್ಡಹೆಸರು ಇಟ್ಟಿದ್ದರು. ಒಂದು ದಿನ ಅವರ ಕಿವಿಗದು ತಲುಪಿತು. ಪುಂಡಾಟ ಮಾಡುವ ಅನುಮಾನ ಹುಟ್ಟಿಸುವಂತಿದ್ದ ಕಲಾ ವಿಭಾಗದ ಒಂದಿಷ್ಟು ಹುಡುಗರನ್ನು ಚೇಂಬರಿಗೆ ಕರೆಸಿ ದಿನವಿಡೀ ಪೊಲೀಸರಂತೆ ವಿಚಾರಣೆ ನಡೆಸಿದರು. ‘ಮರ್ಯಾದೆಯಿಂದ ಹೇಳಿ. ಈ ಹೆಸರು ನನಗಿಟ್ಟವನು ಯಾರೂಂತ? ಇಲ್ಲಾಂದ್ರೆ ಒಬ್ಬೊಬ್ಬರ ಚರ್ಮನೂ ಸುಲಿದುಬಿಡ್ತೀನಿ’ ಎಂದು ದಬಾಯಿಸಿದರು. ಸಂಜೆಯಾದರೂ ಒಬ್ಬರೂ ಬಾಯಿ ಬಿಡಲಿಲ್ಲ.

ಒಬ್ಬ ಮಾತ್ರ ಕೊನೆಯಲ್ಲಿ ಪ್ರಿನ್ಸಿಪಾಲರ ಸಂಕಟ ನೋಡಲಾಗದೆ ಸಣ್ಣಗೆ ಕೊಸರಾಡುವ ಧ್ವನಿಯಲ್ಲಿ ಬಾಯಿಬಿಟ್ಟ. ‘ಇದು ನಾವು ಇಟ್ಟ ಹೆಸರಲ್ಲ ಸಾರ್. ಯಾರೋ ನಿಮಗಾಗದ ನಮ್ಮ ಸೀನಿಯರ್ಸ್ಗಳು ಇಟ್ಟಿರೋದು. ನಾವಂಥ ಹುಡುಗರು ಅಲ್ಲವೇ ಅಲ್ಲ ಸಾರ್. ನಾವು ಈ ಕಾಲೇಜಿಗೆ ಬಂದಾಗಿನಿಂದ ನಿಮಗೆ ಅದೇ ಹೆಸರಿನಿಂದ ಕರೀತಿದ್ರು, ನಾವು ಅದನ್ನೇ ಮುಂದುವರೆಸಿದ್ದೀವಿ ಅಷ್ಟೆ. ಇದರಲ್ಲಿ ನಮ್ಮ ತಪ್ಪೇನು ಇಲ್ಲಾ ಸಾರ್’ ಎಂದು ಸಮಜಾಯಿಷಿ ಕೊಟ್ಟ.

ಈ ಹೆಸರು ನಾಮಕರಣವಾಗಿ ಬಹಳಷ್ಟು ವರ್ಷಗಳೇ ಆಗಿದ್ದರೂ ಕಾಲೇಜಿನ ಇಂಚಿಂಚೂ ವಿಷಯ ನನಗೆ ಗೊತ್ತಿದ್ದರೂ, ಹಾಳಾದ್ದೂ ಇದ್ಯಾಕೆ ನನಗೆ ತಿಳೀಲಿಲ್ಲ ಎಂದು ಪರಪರ ತಲೆ ಕೆರೆದುಕೊಂಡ ಪ್ರಿನ್ಸಿಪಾಲರು ತನಗೆ ಈ ಹೆಸರನ್ನು ಕರುಣಿಸಿದ ಮಹಾನುಭಾವ ಯಾರಿರಬಹುದು? ಎಂಬ ಪರಮ ಚಿಂತೆಯಲ್ಲೇ ಒಂದಿಷ್ಟು ಹೊತ್ತು ಮುಳುಗಿಹೋದರು.

ಇದನ್ನು ಇಷ್ಟಕ್ಕೆ ಬಿಡಬಾರದು ಎಂದು ನಿರ್ಧರಿಸಿದ ಅವರು ‘ನನಗಲ್ದೆ ಬೇರೆ ಲೆಕ್ಚರರ್ಗಳಿಗೆ ಯಾವ್ಯಾವ ಅಡ್ಡಹೆಸರಿಟ್ಟು ಕರೀತೀರಿ, ಅದನ್ನೂ ಬೊಗಳ್ರಿ’ ಎಂದು ವಿಚಾರಣೆಯನ್ನು ಮತ್ತಷ್ಟೂ ತೀವ್ರಗೊಳಿಸಿದರು. ಈ ಪ್ರಿನ್ಸಿಪಾಲ್ ಬಿಡೋ ಪೈಕಿ ಅಲ್ಲ ಎಂದು ಗೊತ್ತಾದ ಹುಡುಗರು ವಿಧಿಯಿಲ್ಲದೆ ಒಂದೊಂದೇ ಅಡ್ಡಹೆಸರುಗಳನ್ನು ಬಾಯಿಬಿಟ್ಟರು.

‘ಹಿಸ್ಟರಿ ಲೆಕ್ಚರರ್ಗೆ ಬಾಂಡ್ಲಿ ಅಂತೀವಿ ಸಾರ್. ಅವರ ಅರ್ಧ ತಲೆ ಬೋಳ ಅಂತ ಯಾರೋ ಸೀನಿಯರ್ಸೆ ಈ ಹೆಸರು ಇಟ್ಟಿರಬಹುದು. ಇನ್ನು ಎಕನಾಮಿಕ್ಸ್ ಸಾರ್ಗೆ ಟೇಪ್ರೆಕಾರ್ಡರ್ ಅಂತಾರೆ ಸಾರ್. ಯಾಕೇಂದ್ರೆ ಅವರು ಪಾಠ ಶುರು ಮಾಡಿದ್ರೆ ನಿಲ್ಸೋದು ಬೆಲ್ ಹೊಡೆದ ಮೇಲೇನೆ ಸಾರ್. ಟೋಟಲಿ ನಾನ್ಸ್ಟಾಪು ಸಾರ್. ಯಾವಾಗಲೂ ಒಂದೇ ಥರ ಹೇಳ್ತಾರೆ ಸಾರ್. ಹಿಂಗಾಗಿ ಅವರು ಟೇಪ್ರೆಕಾರ್ಡರ್ ಆಗಿದ್ದಾರೆ ಸಾರ್. ಮತ್ತೆ ಇಂಗ್ಲೀಷ್ ಲೆಕ್ಚರರ್ಗೆ ಪುಂಗಿ ಅನ್ನೋ ಹೆಸರು ಸಾರ್. ಅವರ ಪಾಠ ಅಂದ್ರೆ ಎಂಥವರಿಗೂ ನಿದ್ದೆ ಬರುತ್ತೆ ಸಾರ್. ನಾವು ಈಗ ಅವರ ಹೆಸರು ಬದಲಿಸಿ ಪಿಟೀಲು ಅಂತ ಇಟ್ಟಿದ್ದೇವೆ ಸಾರ್. ನೀವು ಬೇಡ ಅಂದ್ರೆ ಅದನ್ನು ಕ್ಯಾನ್ಸಲ್ ಮಾಡ್ತೀವಿ ಸಾರ್...

ಸೋಷಿಯಾಲಜಿ ಸಾರ್ಗೆ ಜಡಿ ಮಳೆ ಅಂತಾರೆ ಸಾರ್. ಯಾಕೇಂದ್ರೆ ಅವರು ಪಾಠ ಮಾಡುವಾಗ ಮುಂದಿನ ಬೆಂಚಿನ ಹುಡುಗರಿಗೆ ಸ್ನಾನ ಮಾಡುವಷ್ಟು ಉಗುಳು ಎಸೀತಾರೆ ಸಾರ್. ಹಿಂಗಾಗಿ, ಅವರ ಪಿರಿಯಡ್ನಲ್ಲಿ ಯಾರೂ ಮುಂದಿನ ಬೆಂಚಲ್ಲಿ ಕೂರಲ್ಲ ಸಾರ್. ಇನ್ನು ನಮ್ಮ ಕನ್ನಡ ಲೆಕ್ಚರರ್ಗೆ ಫಂಕ್ ಮಾಸ್ಟರ್ ಅನ್ನೋ ಹೆಸರಿದೆ ಸಾರ್. ನಿಜವಾಗ್ಲು ಅದರ ಅರ್ಥ ಏನಂಥ ನಮಗೂ ಗೊತ್ತಿಲ್ಲ ಸಾರ್. ಹಿಂದಿನವರು ಹೇಳಿದ್ದನ್ನೇ ನಾವು ಮುಂದುವರೆಸಿದ್ದೀವಿ ಸಾರ್. ಆದ್ರೆ ಇತ್ತೀಚೆಗೆ ಕಾಮರ್ಸ್ ಹುಡುಗರು ಅವರಿಗೆ ಚಟ್ನಿ ಅನ್ನೋ ಮತ್ತೊಂದು ಹೆಸರಿಟ್ಟು ಕರೀತಾರೆ ಸಾರ್. ಅದ್ಯಾಕಂತ ನಮಗೂ ಐಡಿಯಾ ಇಲ್ಲ ಸಾರ್. ಒಟ್ಟಾರೆ ಇದರಲ್ಲಿ ನಮ್ಮ ತಪ್ಪೇನು ಇಲ್ಲಾ ಸಾರ್. ನಾವು ಒಳ್ಳೇ ಹುಡುಗರು ಸಾರ್’ ಎಂದರು.

ಅಲ್ಲೀ ತನಕ ಹುಸಿನಗೆ ಮತ್ತು ಅರೆ ಕೋಪದಲ್ಲಿ ಅವರ ಮಾತುಗಳನ್ನು ಕೇಳುತ್ತಿದ್ದ ಪ್ರಿನ್ಸಿಪಾಲ್ ಪಿತ್ತ ಆ ಕೊನೇ ಮಾತಿನಿಂದ ಕೆರಳಿ ಹೆಡೆ ಎತ್ತಿತು. ‘... ... ಓದಿಸೋ ಗುರುಗಳಿಗೆ, ಬಾಂಡ್ಲಿ, ಟೇಪ್ರೆಕಾರ್ಡರ್, ಪುಂಗಿ, ಪಿಟೀಲು, ಚಟ್ನಿ ಎಂತೆಲ್ಲಾ ಅಡ್ಡ ಹೆಸರಿಟ್ಟುಕೊಂಡು ಚುಡಾಯಿಸಿ ಬೆನ್ನಹಿಂದೆ ನಗೋದಲ್ದೆ, ನಾವು ಒಳ್ಳೇ ಹುಡುಗರು ಸಾರ್... ಅಂತ ನಿಮಗೆ ನೀವೇ ಶಿಫಾರಸ್ಸು ಬೇರೆ ಮಾಡ್ಕೋತೀರಾ? ಇಲ್ಲಿಗೆ ಓದೋದಿಕ್ಕೆ ಬರ್ತೀರೋ? ಇಲ್ಲ ವಿದ್ಯೆ ಬುದ್ದಿ ಕಲಿಸೋ ಗುರುಗಳ ಮಾನ ಮರ್ಯಾದೆ ತೆಗೆಯೋದಕ್ಕೆ ಬರ್ತೀರೋ? ಈಡಿಯೆಟ್ಸ್... ಇನ್ನೊಂದು ಸಲ ಹಿಂಗೆ ಅಡ್ಡಹೆಸರು ಹಿಡಿದು ಕರೆಯೋದು ನನ್ನ ಕಿವಿಗೆ ಬಿದ್ರೆ ಎಲ್ಲರಿಗೂ ಟಿ.ಸಿ. ಕೊಟ್ಟು ಕಳಿಸ್ತೀನಿ. ಇಡೀ ಇಂಡಿಯಾದಲ್ಲಿ ಯಾವ ಕಾಲೇಜಿನಲ್ಲೂ ನಿಮಗೆ ಅಡ್ಮಿಶನ್ ಸಿಗಬಾರದು...’ ಎಂದು ಸಿಡುಕಿದವರು, ಎಲ್ಲರನ್ನೂ ತಮ್ಮ ಕಣ್ಣಮುಂದಿನಿಂದ ತಕ್ಷಣವೇ ದಿಕ್ಕಾಪಾಲಾಗುವಂತೆ ಗದರಿ ಓಡಿಸಿದರು.

ಹುಡುಗರು ಹೋದ ಮೇಲೆ ಪ್ರಿನ್ಸಿಪಾಲರನ್ನು ಒಂದು ಕೆಟ್ಟ ಕುತೂಹಲ ಕಾಡತೊಡಗಿತು. ಕಲಾ ವಿಭಾಗದವರೇ ಇಷ್ಟೊಂದು ಥರಾವರಿ ನಾಮಕರಣ ಮಾಡಿಕೊಂಡಿದ್ದಾರೆ ಎಂದ ಮೇಲೆ ಇನ್ನು ಕಾಮರ್ಸ್, ಸೈನ್ಸ್ ಹುಡುಗರು ಏನೇನು ಅಡ್ಡಹೆಸರು ಬಳಸುತ್ತಿರಬಹುದು ಎನ್ನುವ ಕುತೂಹಲವದು. ಅದನ್ನು ಕಂಡು ಹಿಡಿಯಬೇಕು ಎಂದು ಸ್ವಯಂ ತನಿಖೆ ಶುರು ಮಾಡಿಕೊಂಡರು.

ಅದರಲ್ಲೂ ಕಾಲೇಜಿನಲ್ಲಿ ಕೆಲ ಉಪನ್ಯಾಸಕರ ಮುಖ ಕಂಡರೆ ಪ್ರಿನ್ಸಿಪಾಲರಿಗೆ ಸುತಾರಾಂ ಆಗುತ್ತಿರಲಿಲ್ಲ. ಅವರಿಗೆ ಏನೇನು ಅಡ್ಡಹೆಸರುಗಳು ಪ್ರಾಪ್ತಿಯಾಗಿವೆ ಎಂದು ತಿಳಿಯುವ ತವಕ ಅವರಲ್ಲಿ ಜಾಸ್ತಿಯಾಯಿತು. ಗುಂಪಾಗಿ ನಿಲ್ಲುವ, ಹರಟೆ ಕೊಚ್ಚುವ ಎಲ್ಲಾ ಹುಡುಗ–ಹುಡುಗಿಯರನ್ನು ಕರೆಕರೆದು ಚಾಲ್ತಿಯಲ್ಲಿರುವ ಅಡ್ಡಹೆಸರುಗಳನ್ನು ಪಟ್ಟಿ ಮಾಡತೊಡಗಿದರು. ಸಿಕ್ಕವುಗಳಲ್ಲಿ ಹೆಚ್ಚಿನ ಪಾಲು ಪ್ರಿನ್ಸಿಪಾಲರಿಗೆ ದಕ್ಕಿದ್ದವು.

ತುರಿಕೆ, ಡಬ್ಬ, ಸೀಗಡಿ, ಮಾರಿಮುತ್ತು, ಊದುಬತ್ತಿ, ಕೊಕ್ರ, ಬಲೂನು, ಉಬ್ಬ, ಬಕೀಟು, ಕಡ್ಲೆ, ಸುರ್ಕಿ, ಸಗಣಿ, ಇಂಥ ಹಲವಾರು ಹೆಸರುಗಳು ಕಾಲೇಜಿನ ಹುಡುಗರಲ್ಲಿ ಆಂತರಿಕ ಮಾತುಕತೆಗಳಲ್ಲಿ ಚಲಾವಣೆಯಲ್ಲಿರುವುದನ್ನು ಅವರು ಪತ್ತೆ ಹಚ್ಚಿದರು. ಒಬ್ಬೊಬ್ಬ ಉಪನ್ಯಾಸಕರಿಗೂ ಕರೆದು ‘ನೋಡ್ರಿ ನಿಮಗೆ ಹುಡುಗರು ಹಿಂಗತಾರೆ’ ಎಂದು ಹೇಳುವುದು ಅವರ ಅಭ್ಯಾಸವಾಗಿ ಹೋಯಿತು. ಇದರಿಂದ ಆದ ಅನಾಹುತವೆಂದರೆ ಅಲ್ಲೀತನಕ ಕೆಲವೇ ಹುಡುಗರ ಬಳಕೆಯಲ್ಲಿದ್ದ ಈ ಅಡ್ಡಹೆಸರುಗಳು ಎಲ್ಲಾ ಹುಡುಗರ ಬಾಯಿಗೆ ಬಿದ್ದು ಸಲೀಸಾದವು.

ಕಿಚಾಯಿಸಬೇಕು ಎನ್ನಿಸುವ ವಯಸ್ಸು ಮತ್ತು ಮನಸ್ಸು ಕಾಲೇಜು ಹಂತದಲ್ಲೇ ಜಾಸ್ತಿ. ಹಾಗಾಗಿ ಇದನ್ನೆಲ್ಲಾ ಕೇಳಿ ಸಹಜ ಎಂದುಕೊಳ್ಳಬೇಕು. ಬಿ.ಪಿ.ಗೆ ಅವಕಾಶ ಇರಬಾರದು. ಗುರುಗಳಿಗೆ ಶಿಷ್ಯರು ನೀಡುವ ಅಮೂಲ್ಯ ಕಾಣಿಕೆ ಇದೇನೆ ಇರಬೇಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.