ಹಣಕಾಸು ವರ್ಷ 2013–14ರ ಅಂತಿಮ ಘಟ್ಟದಲ್ಲಿರುವ ಸಂದರ್ಭದಲ್ಲಿ ಷೇರುಪೇಟೆಯ ಸೂಚ್ಯಂಕಗಳು ಉತ್ತುಂಗದಲ್ಲಿ ವಿಜೃಂಭಿಸುತ್ತಿವೆ. ಮಂಗಳವಾರ ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳಾದ ‘ಒಎನ್‌ಜಿಸಿ’, ಕೋಲ್ ಇಂಡಿಯಾ, ಎಂಜಿನಿಯರ್ಸ್ ಇಂಡಿಯಾ, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಮೊದಲಾದವು ರಭಸದ ಏರಿಕೆ ಪ್ರದರ್ಶಿಸಿದವು.

ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತದ ಕಾರ್ಯಕ್ರಮದಡಿ, ಅಂತರರಾಷ್ಟ್ರೀಯ ವಿತ್ತೀಯ ಸಂಸ್ಥೆ ಗೋಲ್‌್ಡಮನ್ ಸ್ಯಾಚ್ಸ್ ಮೂಲಕ ವಿನಿಮಯ ಕೇಂದ್ರದಲ್ಲಿ ವಹಿವಾಟಾಗುವ ನಿಧಿಯನ್ನು ‘ಸಿಪಿಇಎಸ್–ಇಟಿಎಫ್’ ಮೂಲಕ ರೂ.3,000 ಕೋಟಿ ಸಂಗ್ರಹಣೆಯ ಗುರಿ ಪ್ರಕಟವಾದುದೇ ಆಗಿದೆ. ಸೋಜಿಗವೆಂದರೆ ಈ ಬಂಡವಾಳ ಸಂಗ್ರಹಣೆಯು ಆರಂಭವಾದುದು ಮಾ. 19ರಿಂದಲೇ ಆದರೂ ಮಾ. 18ರಂದೇ ಈ ನಿಧಿಗೆ ಸಂಬಂಧಿಸಿದ ಕಂಪೆನಿಗಳ ಷೇರುಗಳ ಬೃಹತ್ ಮುನ್ನಡೆ ಸಾಧಿಸಿ ನಂತರ ಗುರುವಾರ, ಶುಕ್ರವಾರ ಹೆಚ್ಚಿನ ಮಾರಾಟದ ಒತ್ತಡದಿಂದ ಕುಸಿದವು.

ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಸಾಮಾನ್ಯವಾಗಿ ಯಾವುದೇ ಸಂಸ್ಥೆ ಅಥವಾ ಸರ್ಕಾರ ಷೇರುಗಳನ್ನು ಮಾರಾಟ ಮಾಡುತ್ತದೆ ಎಂದರೆ ಅಂತಹ ಷೇರುಗಳ ಬೆಲೆ ಇಳಿಕೆಯಾಗುತ್ತದೆ. ಆದರೆ ಸರ್ಕಾರ ಹೊಂದಿರುವ ಆಕ್ಸಿಸ್ ಬ್ಯಾಂಕ್‌ನ ಶೇ 20.72ರ ಭಾಗಿತ್ವದಲ್ಲಿ ಶೇ 9ರಷ್ಟನ್ನು ಶುಕ್ರವಾರದ ಹಲವು ವಹಿವಾಟಿನಲ್ಲಿ ಮಾರಾಟ ಮಾಡಿದಾಗ, ಆಕ್ಸಿಸ್ ಬ್ಯಾಂಕ್‌ನ ಷೇರುಮೌಲ್ಯ ಪುಟಿದೆದ್ದು ರೂ. 1,411ರವರೆಗೂ ಏರಿಕೆ ಕಂಡಿದ್ದು ವಿಸ್ಮಯಕಾರಿ ಎನಿಸಿದೆ.

‘ಸ್ಪೆಸಿಫೈಡ್ ಅಂಡರ್‌ಟೇಕಿಂಗ್ ಆಫ್ ಯುಟಿಐ’ ಮೂಲಕ ಹೊಂದಿದ್ದ ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ರೂ.1,313ರಿಂದ ರೂ.1,323ರವರೆಗೂ ಎಲ್ಐಸಿ ಆಫ್ ಇಂಡಿಯಾ, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್, ಗೋಲ್‌್ಡಮನ್ ಸ್ಯಾಚ್ ಕಂಪೆನಿಗಳಿಗೆ ಮಾರಾಟ ಮಾಡಿದರೂ ಅಲ್ಲಿಂದ ರೂ.1,411ರವರೆಗೆ ಏರಿಕೆ ಕಂಡಿದೆ.

ಶುಕ್ರವಾರ ಅಂತ್ಯಗೊಂಡ ನಾಲ್ಕು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 56 ಅಂಶಗಳಷ್ಟು ಹಾನಿ ಕಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕ 113 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 157 ಅಂಶಗಳ ಏರಿಕೆಯಿಂದ ವಿಜೃಂಭಿಸಿದವು. ಆಕ್ಸಿಸ್ ಬ್ಯಾಂಕ್ ಷೇರಿನಲ್ಲಿನ ಹೂಡಿಕೆಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ರೂ.7,025 ಕೋಟಿಗಳಷ್ಟು ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.5,452 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯ ರೂ.70.94 ಲಕ್ಷ ಕೋಟಿಯಿಂದ ರೂ.71.21 ಲಕ್ಷ ಕೋಟಿಗೆ ಹೆಚ್ಚಾಗಿದೆ.

ಹೊಸ ಷೇರಿನ ವಿಚಾರ
*ಮಧ್ಯಪ್ರದೇಶ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ‘ವಿಜಿ ಫೈನಾನ್‌್ಸ ಲಿ.’ ಕಂಪೆನಿಯು ಮಾ. 21ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ಕೋಲ್ಕತ್ತಾ ಷೇರು ವಿನಿಮಯ ಕೇಂದ್ರ ಹಾಗೂ ಯು.ಪಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ‘ಮಂಗಳಂ ಇಂಡಸ್ಟ್ರಿಯಲ್ ಫೈನಾನ್‌್ಸ ಲಿ.’ ಮಾ. 21ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಇಸ್ಪಾಟ್ ಗಡುವು ವಿಸ್ತರಣೆ
ಪ್ರತಿ ಷೇರಿಗೆ ರೂ.77ರಿಂದ ರೂ.80ರವರೆಗಿನ ಬೆಲೆಯನ್ನು ರೂ.74ರಿಂದ ರೂ.77ಕ್ಕೆ ಇಳಿಸುವುದಲ್ಲದೆ ಅಂತಿಮ ದಿನವನ್ನು ಮಾ. 25ರವರೆಗೂ ಅಂದರೆ ಮೂರು ದಿನ ಮುಂದೂಡಿದ ಲೋಹ ಇಸ್ಪಾಟ್ ಕಂಪೆನಿಯ ಷೇರು ವಿತರಣೆಗೆ ಸಾರ್ವಜನಿಕ ಸ್ಪಂದನೆ ಸಮರ್ಪಕವಾಗಿಲ್ಲವಾಗಿದೆ.

*ಮಹಾದೂಷಿ ಇಂಟರ್‌ನ್ಯಾಷನಲ್ ಟ್ರೇಡ್ ಲಿ., ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದ್ದು, ಮಾ. 21ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ರೌನಕ್ ಇಂಟರ್‌ನ್ಯಾಷನಲ್ ಲಿ. ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿ-ಕೊಂಡಿದ್ದು, ಮಾ. 21ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಲಾಭಾಂಶ ವಿಚಾರ
*ಗೋದಾವರಿ ಪವರ್ ಪ್ರತಿ ಷೇರಿಗೆ ರೂ.1.50, ಆಯಿಲ್ ಇಂಡಿಯಾ ಪ್ರತಿ ಷೇರಿಗೆ ರೂ.10, (ನಿಗದಿತ ದಿನ: 27.3.14), ಸುಂದರಂ ಕ್ಲೇಟನ್ ಪ್ರತಿ ರೂ.5ರ ಮುಖಬೆಲೆ ಷೇರಿಗೆ ರೂ.3.75.
*ಕೋಲ್ಗೆಟ್ ಪಾಲ್ಮೊಲಿವ್ ಕಂಪೆನಿಯು ಮಾ. 27ರಂದು ಪ್ರಕಟಸಲಿರುವ ಮಧ್ಯಂತರ ಲಾಭಾಂಶಕ್ಕೆ ಏಪ್ರಿಲ್ 3 ನಿಗದಿತ ದಿನವನ್ನಾಗಿ ಪ್ರಕಟಿಸಿದ ಕಾರಣ ಷೇರಿನ ಬೆಲೆಯು ರೂ.1,374ರವರೆಗೂ ಜಿಗಿದು, ರೂ.1,333ರಲ್ಲಿ ಕೊನೆಗೊಂಡಿದೆ.
ಆಫರ್ ಫಾರ್ ಸೇಲ್
*ಅರೋರಾ ಫೈಬರ್ಸ್ ಲಿಮಿಟೆಡ್‌ನ ಪ್ರವರ್ತಕರಾದ ರೂಪೇಂದರ್ ಅರೋರಾ ಮಾ. 25ರಂದು ಮುಂಬೈ ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ ಮೂಲಕ 16 ಲಕ್ಷ ಷೇರುಗಳನ್ನು (ಆಫರ್ ಫಾರ್ ಷೇಲ್ ಮೂಲಕ) ಮಾರಾಟ ಮಾಡಲಿದೆ. ಮಾರಾಟದ ಮೂಲ ಬೇಡಿಕೆಯನ್ನು ಮಾ. 24ರಂದು ಸಂಜೆ ಪ್ರಕಟಿಸಲಾಗುವುದು.
*ಕಳೆದ 14ರಂದು ಆಫರ್ ಫಾರ್ ಸೇಲ್ ಮೂಲಕ ‘ಎಲ್ ಅಂಡ್ ಟಿ ಫೈನಾನ್‌್ಸ ಹೋಲ್ಡಿಂಗ್‌್ಸ ಲಿ.’ ಕಂಪೆನಿಯ 8.32 ಕೋಟಿ ಷೇರುಗಳನ್ನು ಅದರ ಪ್ರವರ್ತಕ ಕಂಪೆನಿ ಲಾರ್ಸನ್ ಅಂಡ್ ಟೋಬ್ರೊ ರೂ.71.50ರಂತೆ ಈ ವಿಶೇಷ ಗವಾಕ್ಸಿಯ ಮೂಲಕ ಮಾರಾಟ ಮಾಡಿದೆ.

ಬೋನಸ್ ಷೇರು ವಿಚಾರ
ರಾಜ್ ಟೆಲಿವಿಷನ್ ನೆಟ್‌ವರ್ಕ್ ಲಿ. ಕಂಪೆನಿಯು ಪ್ರಕಟಿಸಿದ 1:1ರ ಅನುಪಾತದ ಬೋನಸ್‌ಗೆ ಮಾರ್ಚ್ 26 ನಿಗದಿತ ದಿನವಾಗಿದೆ.

ಹಕ್ಕಿನ ಷೇರಿನ ವಿಚಾರ
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮಾ. 26ರಂದು ಹಕ್ಕಿನ ಷೇರು ವಿತರಣೆ ಬಗ್ಗೆ ಪರಿಶೀಲಿಸಲು ಆಡಳಿತ ಮಂಡಳಿ ಸಭೆ ಸೇರಲಿದೆ.
*ಡೆನಿಸ್ ಕೆಂ ಲ್ಯಾಬ್ ಲಿ. ಕಂಪೆನಿಯು ವಿತರಿಸಲಿರುವ 2:1ರ ಅನುಪಾತದ, ಪ್ರತಿ ಷೇರಿಗೆ ರೂ.13ರಂತೆ, ಹಕ್ಕಿನ ಷೇರಿಗೆ ಮಾ. 29 ನಿಗದಿತ ದಿನವಾಗಿದೆ.
ಮುಖಬೆಲೆ ಸೀಳಿಕೆ ವಿಚಾರ
*ರಾಜ್ ಟೆಲಿವಿಷನ್ ನೆಟ್‌ವರ್ಕ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.2ಕ್ಕೆ ಸೀಳಲು ಮಾ. 26 ನಿಗದಿತ ದಿನವಾಗಿದೆ.
*ವಿಕಾಸ್ ಗ್ಲೋಬಲ್ ಒನ್ ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಲು ಮಾ. 30 ನಿಗದಿತ ದಿನವಾಗಿದೆ.
*ಸ್ವಗೃಹ ಇನ್‌ಫ್ರಾಸ್ಟ್ರಕ್ಚರ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಲು 25ನೇ ಮಾರ್ಚ್ ನಿಗದಿತ ದಿನವಾಗಿದೆ.
*ಸಿಹೆಚ್‌ಎಲ್ ಲಿ., ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.2ಕ್ಕೆ ಸೀಳಲು ಏ. 5 ನಿಗದಿತ ದಿನವಾಗಿದೆ.

3 ದಿನಕ್ಕೆ ವಾರ್ಷಿಕ ಫಲಿತಾಂಶ
ಜಿ ಎಂ ಬ್ರುವರೀಸ್ ಲಿ. ಕಂಪೆನಿಯು ಮಾರ್ಚ್ 31ಕ್ಕೆ ಅಂತ್ಯಗೊಂಡ ಪ್ರಸಕ್ತ ಹಣಕಾಸು ವರ್ಷದ ಫಲಿತಾಂಶವನ್ನು ಏ. 3ರಂದು ಪ್ರಕಟಿಸುವ ಕಾರ್ಯಸೂಚಿಯು ಮೆಚ್ಚುಗೆಗೆ ಪಾತ್ರವಾಗಿದೆ. ಅಂದು ಲಾಭಾಂಶವನ್ನು ಸಹ ಪ್ರಕಟಿಸಲಿದೆ.

ಸೀಮಿತ ಅವಧಿ ವಹಿವಾಟು
ಶನಿವಾರದ ವಿಶೇಷ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು ಕೇವಲ ಒಂದು ಅಂಶದಷ್ಟು ಏರಿಕೆ ಕಂಡು ಸ್ಥಿರತೆ ಕಾಪಾಡಿಕೊಂಡಿತ್ತು. ಅದೇ ಮಧ್ಯಮ ಶ್ರೇಣಿಯ ಸೂಚ್ಯಂಕ 22 ಅಂಶಗಳ ಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 46 ಅಂಶಗಳ ಏರಿಕೆ ದಾಖಲಿಸಿ ಗಮನ ಸೆಳೆದಿದೆ. ಅಂದು ಸೀಮಿತ ಅವಧಿಯ ವಹಿವಾಟು ಆಗಿದ್ದರಿಂದ ಗಮನಾರ್ಹವಾದ ಏರಿಳಿತಗಳಿಗೆ ಅವಕಾಶವಿಲ್ಲದಿದ್ದರೂ ಕಂಪೆನಿಗಳಾದ ಸಿಪ್ಲಾ, ಅಪೋಲೋ ಟೈರ್ಸ್, ಎಲ್ ಅಂಡ್ ಟಿ ಫೈನಾನ್ಸ್ ಮೊದಲಾದ ಕಂಪೆನಿಗಳ ಷೇರುಗಳು ಏರಿಕೆ ಕಂಡವು.

ಇದು ಪರೀಕ್ಷಾರ್ಥವಾಗಿ ನಡೆದ ವಹಿವಾಟಾಗಿದ್ದು, ವಿತ್ತೀಯ ಸಂಸ್ಥೆಗಳ ಚಟುವಟಿಕೆ ಹೆಚ್ಚಾಗಿರದೆ ಇದ್ದರೂ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಕಂಪೆನಿಗಳ ಷೇರುಗಳಾದ ಮೊನ್ನೆಟ್ ಇಸ್ಪಾಟ್ ಶೇ 20ರಷ್ಟು ಏರಿಕೆ ದಾಖಲಿಸಿ ವಾರದಲ್ಲಿ ₨58ರ ಹಂತದಿಂದ ₨94ರವರೆಗೂ ಜಿಗಿತ ಕಂಡಿದೆ. ಟೈರ್ ಕಂಪೆನಿ ಸಿಯೆಟ್ ಸಹ ಶನಿವಾರ ಆಕರ್ಷಕ ಮುನ್ನಡೆ ಕಂಡುಕೊಂಡಿತು. ಅಂದು ಈ ಕಂಪೆನಿಯು ₨453.23ರಲ್ಲಿ ವರ್ಷದ ಗರಿಷ್ಠ ಮಟ್ಟ ದಾಖಲಿಸಿದೆ.
ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2013ರ ಮಾ. 22ರಂದು ಈ ಕಂಪೆನಿಯ ಷೇರಿನ ಬೆಲೆಯು ₨87.15ರಲ್ಲಿ ವರ್ಷದ ಕನಿಷ್ಠ ಮಟ್ಟವನ್ನು ದಾಖಲಿಸಿತ್ತು.
ಒಟ್ಟಿನಲ್ಲಿ ವಾರಾಂತ್ಯದಲ್ಲಿ ಸಂವೇದಿ ಸೂಚ್ಯಂಕ 21,755 ಅಂಶಗಳಲ್ಲಿ ಅಂತ್ಯ ಕಂಡಿದೆ.

ವಾರದ ವಿಶೇಷ
ಮುಂಬೈ ಷೇರು ವಿನಿಮಯ ಕೇಂದ್ರ ಬಹಳ ಹಳೆಯ ವಿನಿಮಯ ಕೇಂದ್ರವಾಗಿದ್ದು ಅದರ ಸಂವೇದಿ ಸೂಚ್ಯಂಕವು ದೇಶದ ಹಣಕಾಸು ಪೇಟೆಗಳ ಹೆಗ್ಗುರುತಾಗಿದೆ. ಈ ವಿನಿಮಯ ಕೇಂದ್ರದಲ್ಲಿ 5,333 ಕಂಪೆನಿಗಳು ವಹಿವಾಟಿಗೆ ನೋಂದಾಯಿಸಿಕೊಂಡಿದ್ದು, ಇವುಗಳಲ್ಲಿ ಎಲ್ಲಾ ವಿಧದ ಅಂದರೆ ಸುಭದ್ರವಾದ ಅಧಿಕ ಬಂಡವಾಳದ ಕಂಪೆನಿಗಳು, ಮಧ್ಯಮ ಶ್ರೇಣಿ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳ ಕಂಪೆನಿಗಳು (ಎಸ್.ಎಂ.ಇ) ಠೊಳ್ಳು, ಜೊಳ್ಳು ಕಂಪೆನಿಗಳೂ ಸೇರಿವೆ.

ಈ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿಕೊಂಡಿ ರುವ ಭಾರಿ ಸಂಖ್ಯೆಯ ಕಂಪೆನಿಗಳಲ್ಲಿ 1,285 ಕಂಪೆನಿಗಳು ವಿವಿಧ ಕಾರಣಗಳಿಂದ ಅಮಾನತುಗೊಂಡಿವೆ. ಉಳಿದಂತೆ 4,048 ಕಂಪೆನಿಗಳು ವಹಿವಾಟಿಗೆ ಲಭ್ಯವಿದ್ದು ಇದರಲ್ಲಿ ಸುಮಾರು ಮೂರು ಸಾವಿರ ಕಂಪೆನಿಗಳು ದಿನನಿತ್ಯದ ಚಟುವಟಿಕೆಗೆ ಒಳಗಾಗಿವೆ. ಇಲ್ಲಿ 10 ಪೈಸೆಯ ಬಿರ್ಲಾ ಕಾಟಸ್ಪಿನ್ ಷೇರಿನಿಂದ 21 ಸಾವಿರ ರೂಪಾಯಿಯ ಎಂಆರ್‌ಎಫ್ ಷೇರಿನವರೆಗೂ ವಹಿವಾಟಾಗುತ್ತದೆ. ಆದರೂ ಸುಮಾರು ಒಂದು ಸಾವಿರದಷ್ಟು ಕಂಪೆನಿಗಳು ವಹಿವಾಟಿಗೆ ಒಳಪಡದೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಶೇ 1 ಲಾಭಾಂಶ ವಿತರಿಸಿದ ಸಿ ಮಹೇಂದ್ರ ಎಕ್‌್ಸಪೋರ್ಟ್‌್ಸನಿಂದ ಆರಂಭಿಸಿ ಪ್ರತಿ ಷೇರಿಗೆ ₨500ರಂತೆ ಲಾಭಾಂಶ ವಿತರಿಸಿದ ಸ್ಟ್ರೈಡ್‌್ಸ ಆರ್ಕೊಲ್ಯಾಬ್‌ವರೆಗೂ ಬಹಳಷ್ಟು ಕಂಪೆನಿಗಳು ವಹಿವಾಟಿನಲ್ಲಿ ಭಾಗವಹಿಸುತ್ತವೆ. ಅಂದರೆ ಎಲ್ಲಾ ವರ್ಗದ ಕಂಪೆನಿ ಷೇರುಗಳ ವಹಿವಾಟಿಗೆ ವೇದಿಕೆ ಒದಗಿಸುವ ಈ ವಿನಿಮಯ ಕೇಂದ್ರದಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಹೆಚ್ಚು ಕಂಪೆನಿಗಳು ವಹಿವಾಟಿನಲ್ಲಿ ಭಾಗವಹಿಸಿ ಮಿಂಚುವುವು.

ಈಗಿನ ಸಂದರ್ಭದಲ್ಲಿ ಚುನಾವಣೆ ದೃಷ್ಟಿಯಿಂದ, ವಿದೇಶಿ ವಿತ್ತೀಯ ಸಂಸ್ಥೆಗಳ ಒಳಹರಿವಿನ ಕಾರಣ ವೈವಿಧ್ಯಮಯ ವಿಶ್ಲೇಷಣೆಗಳು ಹೊರಬರುತ್ತಿರುತ್ತವೆ. ಕೆಲವು ಹಿತಾಸಕ್ತರ ಚಟುವಟಿಕೆ ಕಾರಣ ಹಲವಾರು ಅಲ್ಪಮೌಲ್ಯದ ಷೇರುಗಳು ಹೆಚ್ಚಿನ ಸಂಖ್ಯಾಗಾತ್ರದ ಚಟುವಟಿಕೆ ಪ್ರದರ್ಶಿಸುವುದೂ ಸಾಧ್ಯ. ಮಾರ್ಚ್ ತಿಂಗಳಲ್ಲಿನ ಬೆಲೆಯನ್ನು ಹೂಡಿಕೆ ಗುಚ್ಚ (ಪೋರ್ಟ್ ಫೋಲಿಯೋ) ಮೌಲ್ಯೀಕರಣಕ್ಕೆ ಉಪಯೋಗಿಸುವ ಕಾರಣ ಕೆಲವು ಷೇರುಗಳು ಚಟುವಟಿಕೆ ಭರಿತವಾಗಿರಲೂ ಸಾಧ್ಯ. ಕೆಲವಾರು ನಿಧಿಗಳು 2008ರಿಂದೀಚೆಗೆ ಹೊಂದಿರುವ ಷೇರುಗಳ ಮೌಲ್ಯೀಕರಣಕ್ಕೂ ಮಾರ್ಚ್ ದರಗಳು ಸಹಾಯವಾಗುತ್ತವೆ. ಆದ ಕಾರಣ ಈ ಸಮಯದಲ್ಲಿ ಕಂಪೆನಿಗಳ ಅಂತರ್ಗತವಾದ ಯೋಗ್ಯತೆಯನ್ನು ಅರಿತು ಹೂಡಿಕೆದಾರರು ಚಟುವಟಿಕೆ ನಡೆಸುವುದು ಉತ್ತಮ.

ಕೆಳಮಧ್ಯಮ, ಟಿ ಗುಂಪಿನ, ಜೆಡ್ ಗುಂಪಿನ ಷೇರುಗಳಲ್ಲಿ ಹೆಚ್ಚಿನ ಏರಿಕೆ ಕಂಡಾಗ ಅವಕಾಶವನ್ನು ಉಪಯೋಗಿಸಿಕೊಂಡು ಹೊರಬರುವುದನ್ನು ಸಹ ಪರಿಶೀಲಿಸಬಹುದಾಗಿದೆ. ಒಟ್ಟಿನಲ್ಲಿ ಅರಿತು ಹೂಡಿಕೆ ಮಾಡಿರಿ ಅಂಧರಾಗಿ ಅನುಸರಿಸಬೇಡಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.