ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |
ಮಾನಗಣಿತವು ನಮಗೆ? ಭಾನುವಿರದೊಡದೇಂ? ||
ಅನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |
ಲೀನನಾಗದರೊಳಗೆ – ಮಂಕುತಿಮ್ಮ || 894 ||

ಪದ-ಅರ್ಥ: ಭಾನೂದಯಾಸ್ತಗಳಿನಲ್ತೆ=ಭಾನು(ಸೂರ್ಯ)+ಉದಯ+ಅಸ್ತ ಗಳಿನ್(ಮುಳುಗುವಿಕೆಗಳಿಂದ) +ಅಲ್ತೆ(ಅಲ್ಲವೆ), ದಿಕ್ಕಾಲಗಳ=ದಿಕ್ಕು+ಕಾಲಗಳ, ಮಾನಗಣಿತವು=ಮಾನ(ಅಳತೆ)+ಗಣಿತವು (ಲೆಕ್ಕಾಚಾರ), ಭಾನುವಿರದೊಡದೇಂ=ಭಾನು+ಇರದೊಡೆ (ಇರದಿದ್ದರೆ) +ಅದೇಂ, ಅನಂತ್ಯ=ಅನಂತವಾದ, ಲೀನವಾಗದರೊಳಗೆ=ಲೀನವಾಗು+ಅದರೊಳಗೆ.

ವಾಚ್ಯಾರ್ಥ: ಸೂರ್ಯನ ಉದಯ ಮತ್ತು ಮುಳುಗುವಿಕೆಯಿಂದಲೇ ನಮಗೆ ದಿಕ್ಕು, ಕಾಲಗಳ ಅಳತೆ ಮತ್ತು ಲೆಕ್ಕಾಚಾರವಲ್ಲವೆ? ಸೂರ್ಯನೇ ಇರದಿದ್ದರೆ? ಆಗ ಇರುವುದು ಅನಂತವಾದ, ಶುದ್ಧಸತ್ವ ಪರಮಾತ್ಮನದು. ಅದರಲ್ಲಿ ನೀನು ಲೀನವಾಗು.

ವಿವರಣೆ: ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ “ನಾಸದೀಯ ಸೂಕ್ತ” ವನ್ನು ನೋಡಬೇಕು. ಈ ಸೃಷ್ಟಿ ಹುಟ್ಟಿದ್ದು ಹೇಗೆ? ಆಗ ಏನಿತ್ತು ಎಂಬ ಗಂಭೀರವಾದ ಚಿಂತನೆ ಅಲ್ಲಿ ಮೂಡಿದೆ. ಅದರ ಕೆಲವು ಶ್ಲೋಕಗಳ ಅನುವಾದವನ್ನು ಹೀಗೆ ಮಾಡಬಹುದು – “ಸತ್ತೆಂಬುದಿರಲಿಲ್ಲ, ಅಸತ್ತೂ ಇರಲಿಲ್ಲ, ಲೋಕ ನೀಲಾಕಾಶ, ಆಚೆಯದು ಇರಲಿಲ್ಲ.ಯಾರು ಬಲ್ಲರು ಅದನು ಯಾವ ಆಶ್ರಯದಲ್ಲಿ ಏನನಾವರಿಸಿತ್ತು – ಜಲಧಿಯಿತ್ತೆ? ಮೃತ್ಯುವೂ ಇರಲಿಲ್ಲ, ಅಮೃತ್ಯುವೂ ಇರಲಿಲ್ಲ ರಾತ್ರಿ ಹಗಲುಗಳಿಗೆ ಭೇದವಿರಲಿಲ್ಲ, ಆದಿ ಮೂಲವದೊಂದು ಉಸಿರಾಡುತ್ತಿತ್ತು, ಅದ ಹೊರತು ಬೇರೇನೂ ಇರಲಿಲ್ಲ ವಿಶ್ವದಲಿ” ಪ್ರಪಂಚ ಸೃಷ್ಟಿಯಾದಾಗ, ಸೂರ್ಯನು ಹುಟ್ಟದಿದ್ದಾಗ ಏನಿತ್ತು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತದೆ ಈ ಸೂಕ್ತ. ಈಗ ಸೂರ್ಯನಿದ್ದಾನೆ. ಆದ್ದರಿಂದ ನಮಗೆ ಹಗಲು-ಬೆಳಕುಗಳ ತಿಳಿವು ಬಂದಿದೆ.

ಸೂರ್ಯನಿಂದಲೇ ನಮಗೆ ದಿಕ್ಕುಗಳ ಮತ್ತು ಸಮಯಗಳ ಕಲ್ಪನೆ. ಕಗ್ಗ ಸೂಕ್ತದ ಮಾತನ್ನೇ ಕೇಳುತ್ತದೆ. ಸೂರ್ಯನೇ ಇಲ್ಲದಿದ್ದಾಗ ಏನಾಗಬಹುದು? ಅದಕ್ಕೆ ಸೂಕ್ತವೇ ಉತ್ತರ ನೀಡಿದೆ. ಆಗ, ಆದಿಮೂಲವೊಂದು ಇತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ವಿಶ್ವದಲ್ಲಿ. ಆ ಆದಿಮೂಲವಾದದ್ದು ಅನಂತವಾದದ್ದು. ಅದೊಂದು ಪರಮಶುದ್ಧ ಸತ್ವ. ಅದೇ ಬ್ರಹ್ಮ. ಕಗ್ಗದ ಚಿಂತನೆ, ಪ್ರೇರಣೆ ಆ ಅನಂತವಾದ ಬ್ರಹ್ಮದಲ್ಲಿ ಲೀನವಾಗಬೇಕು ಎನ್ನುವುದು. ಯಾಕೆಂದರೆ ಈ ಪ್ರಪಂಚ, ಪ್ರಪಂಚದ ಪ್ರತಿಯೊಂದು ಸೃಷ್ಟಿ ಕೂಡ ಅಶಾಶ್ವತವಾದದ್ದು. ಒಂದಲ್ಲ ಒಂದು ದಿನ ಕರಗಿ ಹೋಗುವಂಥದ್ದು. ಆದರೆ ಪ್ರಪಂಚದ ಸೃಷ್ಟಿಗಿಂತ ಮೊದಲಿದ್ದು, ಅದು ಅಳಿದ ಮೇಲೂಇರುವ ಶಾಶ್ವತ ಸತ್ವದಲ್ಲಿ ಲೀನವಾಗುವುದು ಬದುಕಿನ ಉದ್ದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.