ಪ್ರಶ್ನೋತ್ತರ

ಮಂಗಳವಾರ, ಜೂನ್ 18, 2019
29 °C
ಪುರವಣಿ

ಪ್ರಶ್ನೋತ್ತರ

Published:
Updated:

ನನ್ನ ವಾರ್ಷಿಕ ಪಿಂಚಣಿ ಮೊತ್ತ ₹ 7,15,932. ಎಸ್.ಬಿ.ಐ. ನಲ್ಲಿ ₹ 25 ಲಕ್ಷ ಒಂದು ವರ್ಷದ ಠೇವಣಿ, ಎಸ್.ಬಿ.ಐ.ನಲ್ಲಿ ₹ 1.50 ಲಕ್ಷ ತೆರಿಗೆಗೋಸ್ಕರ ಮಾಡಿದ 5 ವರ್ಷಗಳ ಠೇವಣಿ. ನನಗೆ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಿ. ನಾನು ಹಿರಿಯ ನಾಗರಿಕ.

ಹೆಸರು ಊರು, ಬೇಡ

ಉತ್ತರ: ನೀವು ಪಿಂಚಣಿ ದಾರರಾಗಿದ್ದು, 1–4–2018 – 31–3–2019ರ ವರೆಗೆ ನಿಗದಿಪಡಿಸಿದ ಮಿತಿ ₹ 3 ಲಕ್ಷ, ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000, ಬ್ಯಾಂಕ್ ಬಡ್ಡಿಯಲ್ಲಿ ₹ 50,000 ಹೀಗೆ ಮೂರು ಆದಾಯವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬೇಕು. 31–7–2019 ರೊಳಗೆ ರಿಟರ್ನ್ ಸಲ್ಲಿಸಬೇಕು. ತೆರಿಗೆ ದರ ₹ 3 ಲಕ್ಷದಿಂದ ₹ 5 ಲಕ್ಷಗಳ ತನಕ ಶೇ 5, ₹ 5 ಲಕ್ಷದಿಂದ ₹ 10 ಲಕ್ಷಗಳ ತನಕ ಶೇ 20, ಎಜ್ಯುಕೇಷನ್‌ ಸೆಸ್ ಮೇಲೆ ಶೇ 4. (ತಾ. 1–4–2019 – 31–3–2020 ಅವಧಿಗೆ ಆದಾಯದ ಗರಿಷ್ಠ ಮಿತಿ ₹ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000 ದಿಂದ ₹ 50,000ಕ್ಕೆ ಹೆಚ್ಚಿಸಲಾಗಿದೆ).

ನಾನು ನನ್ನ ಪತ್ನಿ ಇಬ್ಬರೂ ಅರೆ ಸರ್ಕಾರಿ ನೌಕರರು. ಎಲ್ಲಾ ಖರ್ಚು ಕಳೆದು ₹ 30,000 ತಿಂಗಳಿಗೆ ಉಳಿಸಬಹುದು. ನಮಗೆ ಒಂದು ವರ್ಷದ ಹೆಣ್ಣು ಮಗು ಇದೆ. ನನ್ನ ಉಳಿತಾಯ ವಿವರ ಹೀಗಿದೆ– ಕೆ.ಜಿ.ಐ.ಡಿ. ₹ 6,000, ಎಲ್.ಐ.ಸಿ. ₹ 2,000, ಎನ್.ಪಿ.ಎಸ್. ₹ 1,000, ಆರ್‌.ಡಿ. ₹ 1,000. ಜಮಾ ₹ 10,000. ಹೆಂಡತಿಯ ಉಳಿತಾಯ: ಎಲ್‌.ಐ.ಸಿ. ₹ 1,000, ಪಿ.ಎಲ್.ಐ. ₹ 2,500, ಎನ್.ಪಿ.ಎಸ್. ₹ 2,000. ಜಮಾ: ₹ 5,500. ನಾವು ಮ್ಯೂಚುವಲ್‌ ಫಂಡ್‌ನಲ್ಲಿ ತೊಡಗಿಸಲು, ಮಗಳ ಭವಿಷ್ಯ, ನಿವೇಶನಕೊಳ್ಳಲು ಸಲಹೆ ಮಾಡಿರಿ.

ಹೆಸರು: ಸತ್ಯ, ದಾವಣಗೆರೆ

ಉತ್ತರ: ಹೆಣ್ಣು ಮಗುವಿನ ಸಲುವಾಗಿ ಕನಿಷ್ಠ ₹ 5,000ಗಳನ್ನು ಪ್ರತಿ ತಿಂಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿರಿ. ಇದು ಸೆಕ್ಷನ್ 80c ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ನೆರವಾಗಬಹುದು. ಸಿಪ್ (sip) ಇದು ಆರ್.ಡಿ. ಮಾದರಿಯಲ್ಲಿದ್ದು ₹ 2,000 ತಿಂಗಳಿಗೆ ತುಂಬಿರಿ. ನಿಮಗಿರುವ ವಿಮೆ ಹೆಚ್ಚಿಸುವ ಅವಶ್ಯವಿಲ್ಲ. ಮಗಳ ವಿದ್ಯಾಭ್ಯಾಸ ಹಾಗೂ ಮದುವೆಯ ಸಲುವಾಗಿ, ಸುಕನ್ಯಾ ಯೋಜನೆ ಹೊರತುಪಡಿಸಿ, ₹ 5,000 ಆರ್.ಡಿ., 10 ವರ್ಷಗಳ ಅವಧಿಗೆ ಮಾಡಿರಿ. ನಿವೇಶನ ಕೊಳ್ಳಲು ಹೆಚ್ಚಿನ ಹಣ ಬೇಕಾಗುತ್ತದೆ. ನಿವೇಶನದ ಬೆಲೆ ದಿನೇ ದಿನೇ ಏರುತ್ತದೆ. ಇಬ್ಬರೂ ಸೇರಿ ಸಂಬಳ ಪಡೆಯುವ ಬ್ಯಾಂಕಿನಲ್ಲಿ ನಿವೇಶನ ಕೊಳ್ಳಲು ವೈಯಕ್ತಿಕ ಸಾಲ ಪಡೆಯಿರಿ. 

ಸರ್ಕಾರಿ ನಿವೃತ್ತ ಅಧಿಕಾರಿ. ವಯಸ್ಸು 81. 2018–19 ರಲ್ಲಿ ₹ 3.85 ಲಕ್ಷ ಪಿಂಚಣಿ ಬಂದಿದೆ. ಠೇವಣಿ ಬಡ್ಡಿ ₹ 46,000 ಬಂದಿದೆ. ನನ್ನ ಪ್ರಶ್ನೆ 1. ಆದಾಯ ತೆರಿಗೆ ಎಲ್ಲಿಯವರೆಗೆ ಇರುವುದಿಲ್ಲ. 2. ಸೂಪರ್ ಸೀನಿಯರ್ ಆದವರಿಗೆ ಆದಾಯ ತೆರಿಗೆ ಇದೆಯೇ 3. ತೆರಿಗೆ ಎಲ್ಲಿಂದ ಎಷ್ಟರ ತನಕ ಎಷ್ಟು  ಇರುತ್ತದೆ 4. ಮೆಡಿಕಲ್ ವೆಚ್ಚ ಎಷ್ಟು ಕಳೆಯಬಹುದು. 5. ಠೇವಣಿ ಮೇಲಿನ ಬಡ್ಡಿಗೆ ರಿಯಾಯ್ತಿ ಇದೆಯೇ?

ಆರ್.ಪಿ. ಜೋಶಿ ಧಾರವಾಡ

ಉತ್ತರ: ತಾ. 1–4–2018 ರಿಂದ 31–3–2019ರ ಅವಧಿಗೆ, 80 ವರ್ಷ ದಾಟಿದವರಿಗೆ ₹ 5 ಲಕ್ಷಗಳ ತನಕದ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ. (1–4–2019 ರಿಂದ 31–3–2020) ಅವಧಿಗೆ ಎಲ್ಲಾ ವರ್ಗದವರಿಗೂ ₹ 5 ಲಕ್ಷ ಆದಾಯದ ವರೆಗೆ ತೆರಿಗೆ ವಿನಾಯಿತಿ ಇದೆ) ಸೂಪರ್ ಸೀನಿಯರ್ ಆದರೂ, ₹ 5 ಲಕ್ಷ ಆದಾಯದ ಮಿತಿ ದಾಟಿದಲ್ಲಿ ₹ 10 ಲಕ್ಷಗಳ ತನಕ ಶೇ 20 ಹಾಗೂ ₹ 10 ಲಕ್ಷ ದಾಟಿದಲ್ಲಿ ಶೇ 30 ಆದಾಯ ತೆರಿಗೆ ಕೊಡಬೇಕಾಗುತ್ತದೆ. ಹೀಗೆ ಬಂದ ತೆರಿಗೆಯ ಮೇಲೆ ಶೇ 4 ಎಜುಕೇಷನ್ ಸೆಸ್ ಕೊಡಬೇಕಾಗುತ್ತದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ಗರಿಷ್ಠ ₹ 5,000 ತನಕ ರಿಯಾಯ್ತಿ ಪಡೆಯಬಹುದು. ಠೇವಣಿ ಮೇಲಿನ ಬಡ್ಡಿಗೆ ಹಿರಿಯ ನಾಗರಿಕರಾದಲ್ಲಿ ಮಾತ್ರ ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ ₹ 50,000 ವಿನಾಯ್ತಿ ಇದೆ (ಹಿರಿಯ ನಾಗರಿಕರಲ್ಲದವರಿಗೆ ಈ ಸೌಲಭ್ಯ ಇಲ್ಲ) ಸಂಬಳ ಹಾಗೂ ಪಿಂಚಣಿದಾರರು ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000 (1–4–2019 ರಿಂದ  31–7–2019) ರೊಳಗೆ ರಿಟರ್ನ್ ಸಲ್ಲಿಸುವ ಅವಶ್ಯವಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !