ಡಿಸಿಎಫ್ (ವನ್ಯಜೀವಿ) ಐ.ಬಿ.ಪ್ರಭುಗೌಡ ಮಾತನಾಡಿ ‘5 ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯುವಿಗೆ ಭಾರ ಹೊರಿಸುವ ಅಭ್ಯಾಸ ಆರಂಭಿಸಲಾಗಿದೆ. 300 ಕೆ.ಜಿ ತೂಕದ ಮರಳಿನ ಮೂಟೆಗಳ ಜತೆಗೆ 200 ಕೆ.ಜಿಯಷ್ಟು ನಮ್ದಾ ಗಾದಿ ಚಾಪು ಹಗ್ಗಗಳು ತೊಟ್ಟಿಲು ಸೇರಿ ಸುಮಾರು 500 ಕೆ.ಜಿಯಷ್ಟು ಭಾರವಿದೆ’ ಎಂದರು. ‘ಧನಂಜಯ ಮಹೇಂದ್ರ ಪ್ರಶಾಂತ ಭೀಮ ಏಕಲವ್ಯನಿಗೆ ನಂತರ ಹೊರಿಸಲಾಗುವುದು. ಮತ್ತೆ ಅಭಿಮನ್ಯು ಹೊರಲಿದ್ದಾನೆ. ಹಂತ ಹಂತವಾಗಿ ಭಾರವನ್ನು ಸಾವಿರ ಕೆ.ಜಿ ವರೆಗೂ ಹೆಚ್ಚಿಸಲಾಗುವುದು. ಭಾರದ ನಡಿಗೆ ತಾಲೀಮಿನ ನಂತರ ಆನೆಗಳಿಗೆ ವಿಶ್ರಾಂತಿ ಬೇಕಾಗುತ್ತದೆ’ ಎಂದರು.